ವೈಷ್ಣವಿ ಗೌಡ
ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ವೈಷ್ಣವಿ ಗೌಡ ರೆಟ್ರೋ ಲುಕ್‌ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. 1974ರಲ್ಲಿ ಎರಡು ಕನಸು ನಟಿ ಕಲ್ಪನಾ ರೀತಿ ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.
ಅನುಪಮಾ ಗೌಡ
ರಾಜ ರಾಣಿ ರಿಯಾಲಿಟಿ ಶೋ ನಿರೂಪಣೆ ಮಾಡುವಾಗ ನಟಿ ಅನುಪಮಾ ಗೌಡ, ಮಾಲಾಶ್ರೀ ಅವರ ರಾಮಾಚಾರಿ ಚಿತ್ರದ ಲುಕ್ ಕ್ರಿಯೇಟ್ ಮಾಡಿದ್ದರು. ಹಳದಿ ಮತ್ತು ಪಿಂಕ್ ಬಣ್ಣದ ಲಂಗಾ ದಾವಣಿಯಲ್ಲಿ ಮಿಂಚಿದ್ದರು.
ಅನಿಖಾ ಸಿಂಧ್ಯಾ
ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಕಲಾವಿದೆಯಾಗಿ ಗುರುತಿಸಿಕೊಂಡಿರುವ ನಟಿ ಅನಿಖಾ ಸಿಂಧ್ಯಾ ಬಾಲಿವುಡ್ ನಟಿ ಆಲಿಯಾ ಭಟ್ ಲುಕ್ ಕ್ರಿಯೇಟ್ ಮಾಡಿದ್ದಾರೆ. ಗಂಗೂಬಾಯಿ ಕಾಠಿಯಾವಾಡಿ ಚಿತ್ರ ವೈಟ್ ಸೀರೆ ಲುಕ್ ಇದು.
ಪ್ರಥಮ ಪ್ರಸಾದ್
ನಟಿ ಪ್ರಥಮಾ ಪ್ರಸಾದ್ ತಮ್ಮ ತಾಯಿ ವಿನಯ್ ಪ್ರಸಾದ್ ಅವರ ಎವರ್ ಗ್ರೀನ್ ಹಾಡು ಬಾರೇ ಸಂತೆಗೆ ಹೋಗೋಣ ಬಾ ಹಾಡಿನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ವಂಶಿಕಾ
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿರುವ ವಂಶಿತಾ ತಂದೆ ಮಾಸ್ಟರ್ ಆನಂದ್ ಅಭಿನಯಿಸಿರುವ ಗೌರಿ ಗಣೇಶ ಚಿತ್ರದ ಲುಕ್ ಕ್ರಿಯೇಟ್ ಮಾಡಿದ್ದಾಳೆ.
ತೇಜಸ್ವಿನಿ ಪ್ರಕಾಶ್
ಬಾಲಿವುಡ್ ಖಾಸಗಿ ಕಾರ್ಯಕ್ರಮವೊಂದಕ್ಕೆ ನಟಿ ದೀಪಿಕಾ ಪಡುಕೋಣೆ ಹಸಿರು ಮತ್ತು ಹಳದಿ ಬಣ್ಣದ ಡಿಸೈನರ್ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಅದೇ ಲುಕ್‌ನ ನಟಿ ತೇಜಸ್ವಿನಿ ಪ್ರಕಾಶ್ ನನ್ನರಸಿ ರಾಧೆ ಧಾರಾವಾಹಿಯಲ್ಲಿ ಧರಿಸಿದ್ದಾರೆ.