ಸೀರಿಯಲ್‌ನಲ್ಲಿ ಸಾಯುವ ದೃಶ್ಯ ಮಾಡಿ, ರಿಯಲ್‌ ಆಗಿ ಆ*ತ್ಮಹತ್ಯೆ ಮಾಡ್ಕೊಂಡ ಕನ್ನಡ ನಟಿ ನಂದಿನಿ

Published : Dec 29, 2025, 06:05 PM IST

kannada actress nandini cm death: ಸೀರಿಯಲ್‌ನಲ್ಲಿ ಸಾಯುವ ದೃಶ್ಯವಿತ್ತು, ರಿಯಲ್‌ ಆಗಿಯೂ ಕನ್ನಡ ನಟಿ ನಂದಿನಿ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಕೊಟ್ಟೂರು ಮೂಲದ ನಟಿ ನಂದಿನಿ ಅವರು ಅಸು ನೀಗಿದ್ದಾರೆ. 

PREV
15
ಬೆಂಗಳೂರಿನಲ್ಲಿ ಘಟನೆ

ಜೀವ ಹೂವಾಗಿದೆ, ಸಂಘರ್ಷ, ನೀನಾದೆ ನಾ ಧಾರಾವಾಹಿ ಖ್ಯಾತಿಯ ನಟಿ ನಂದಿನಿ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಆರ್‌ ಆರ್‌ ನಗರದಲ್ಲಿ ಈ ಘಟನೆ ನಡೆದಿದೆ.

25
ಧಾರಾವಾಹಿಗಳಲ್ಲಿ ನಟನೆ

ಮೂಲತಃ ಕೊಟ್ಟೂರಿನವರಾದ ನಂದಿನಿ ಸಿ ಎಂ ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಕನ್ನಡದ ಜೀವ ಹೂವಾಗಿದೆ, ಸಂಘರ್ಷ, ಮಧುಮಗಳು, ನೀನಾದೆ ನಾ ಧಾರಾವಾಹಿಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

35
ತಮಿಳು ಸೀರಿಯಲ್

ತಮಿಳು ಧಾರಾವಾಹಿಯಲ್ಲಿ ಲೀಡ್‌ ಪಾತ್ರದಲ್ಲಿ ನಟಿಸುತ್ತಿದ್ದರು. ತಮಿಳಿನ ಗೌರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ಕನಕ ಹಾಗೂ ದುರ್ಗಾ ಎನ್ನುವ ದ್ವಿಪಾತ್ರದಲ್ಲಿ ಅವರು ನಟಿಸುತ್ತಿದ್ದರು.

45
ಸೀರಿಯಲ್‌ನಲ್ಲಿ ಸಾಯು*ವ ದೃಶ್ಯ

ಗೌರಿ ಧಾರಾವಾಹಿಯ ಅವರ ಪಾತ್ರದಲ್ಲಿ ಕೂಡ ವಿಷ ಕುಡಿಯುವ ದೃಶ್ಯವಿತ್ತು. ಈಗ ಅವರು ರಿಯಲ್‌ ಆಗಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

55
ಕಾರಣ ಏನು?

ನಂದಿನಿ ಸಿಎಂ ಅವರು ಯಾವ ಕಾರಣಕ್ಕೆ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅಂದಹಾಗೆ ತಮಿಳಿನ ಕಲಾವಿದರು ಬೆಂಗಳೂರಿಗೆ ಬಂದು, ನಟಿಯ ಪಾರ್ಥಿವ ಶರೀರರದ ದರ್ಶನ ಪಡೆಯಲಿದ್ದಾರೆ ಎನ್ನಲಾಗಿದೆ.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories