ಲಕ್ಷ್ಮೀ ನಿವಾಸ ವೀಕ್ಷಕರೇ, ಸೈಕೋ ಜಯಂತ್ ವಿಷಯ ಗೊತ್ತಾಯ್ತಾ? ಇದು ಬಿಗ್ ಬ್ರೇಕಿಂಗ್ ನ್ಯೂಸ್!

Published : Aug 11, 2025, 08:22 AM ISTUpdated : Aug 11, 2025, 08:25 AM IST

Lakshmi Nivasa Serial Update: ಜಾಹ್ನವಿ ದೂರವಾದ ಬಳಿಕ ಜಯಂತ್ ಒಂಟಿತನದಲ್ಲಿದ್ದು , ಚಿನ್ನುಮರಿಗಾಗಿ ಹುಡುಕಾಟ ನಡೆಸುತ್ತಿದ್ದಾನೆ. ವಿಶ್ವ ಮತ್ತು ಗೂಬೆ ಹೆಸರಿನ ವ್ಯಕ್ತಿಯ ಬಗ್ಗೆ ಜಯಂತ್‌ಗೆ ಇನ್ನೂ ತಿಳಿದಿಲ್ಲ.

PREV
15
ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್

ಕರ್ಣ ಸೀರಿಯಲ್‌ ಬಂದಾಗಿನಿಂದ ಲಕ್ಷ್ಮೀ ನಿವಾಸ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ. ಲಕ್ಷ್ಮೀ ನಿವಾಸದ ಸೈಕೋ ಜಯಂತ್‌ ಪಾತ್ರ ನೋಡಲು ವೀಕ್ಷಕರು ಕುರ್ಚಿಯ ತುದಿಗೆ ಬಂದು ಕಾಯುತ್ತಾ ಕುಳಿತಿರುತ್ತಾರೆ. ಚಿತ್ರದ ಪ್ರಮುಖ ಪಾತ್ರ ಜಯಂತ್‌ ತನ್ನ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಈ ಬ್ರೇಕಿಂಗ್‌ ನ್ಯೂಸ್‌ಗೆ ಮನೆಯುಲ್ಲಿರುವ ಶಾಂತಮ್ಮ ಸಾಕ್ಷಿಯಾಗಿದ್ದಾರೆ.

25
ಮಡದಿಗಾಗಿ ಹುಡುಕಾಟ

ಜಾಹ್ನವಿ ಚಲನವಲನದ ಮೇಲೆ ಕಣ್ಣಿಡಲು ಮನೆ ಮೂಲೆ ಮೂಲೆಯಲ್ಲಿಯೂ ಜಯಂತ್ ರಹಸ್ಯ ಕ್ಯಾಮೆರಾ ಇರಿಸಿದ್ದನು. ಈ ವಿಷಯ ತಿಳಿಯುತ್ತಿದ್ದಂತೆ ಜಯಂತ್‌ನಿಂದ ದೂರವಾಗಿ ವಿಶ್ವನ ಮನೆಯಲ್ಲಿ ಜಾಹ್ನವಿ ಆಶ್ರಯ ಪಡೆದುಕೊಂಡಿದ್ದಾಳೆ. ತನ್ನ ಪ್ರೀತಿಯ ಚಿನ್ನುಮರಿ ದೂರವಾದ ಬಳಿಕ ಒಂಟಿಯಾಗಿರುವ ಮಡದಿಗಾಗಿ ಹುಡುಕಾಟ ನಡೆಸುತ್ತಿದ್ದಾನೆ. ಮನೆಗೆ ವಿಶ್ವ ಬಂದು ಹೋಗಿರುವ ವಿಷಯವೂ ಜಯಂತ್‌ಗೆ ಗೊತ್ತಾಗಿದೆ. ಆದ್ರೆ ವಿಶ್ವ ಮತ್ತು ಗೂಬೆ ಹೆಸರಿನ ವ್ಯಕ್ತಿ ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ.

35
ಜಯಂತ್ ನೀಡಿದ ಬ್ರೇಕಿಂಗ್ ನ್ಯೂಸ್ ಏನು?

ನೀವ್ಯಾರು ನಮ್ಮ ಮನೆಯಲ್ಲಿರಬಾರದು ಎಂದು ಕ್ಯಾಮೆರಾಗಳಿಗೆ ಹೇಳುತ್ತಾನೆ. ಕ್ಯಾಮೆರಾಗಳಿರೋದರಿಂದ ಚಿನ್ನುಮರಿಗೆ ಅನುಮಾನ ಬಂದು ನನ್ನನ್ನು ಬಿಟ್ಟು ಹೋಗಿದ್ದು ಎಂದು ಹೇಳುತ್ತಾ ಹಿಡನ್ ಕ್ಯಾಮೆರಾ ಡಿವೈಸ್‌ಗಳನ್ನು ಬೆಂಕಿಗೆ ಹಾಕುತ್ತಾನೆ. ಇದುವೇ ಇಂದಿನ ಬ್ರೇಕಿಂಗ್ ನ್ಯೂಸ್ ಎಂದು ಜಯಂತ್ ಹೇಳುತ್ತಾನೆ.

45
ಚಿನ್ನುಮರಿ ಕೋಪ

ನಾನು ಕ್ಯಾಮೆರಾಗಳನ್ನ ಜಾಹ್ನವಿ ಮೇಲಿನ ಅನುಮಾನದಿಂದ ಅಳವಡಿಕೆ ಮಾಡಿರಲಿಲ್ಲ. ಮನೆ ತುಂಬಾ ಕ್ಯಾಮೆರಾ ಇರಿಸಿ ಅವರ ಸ್ವಾತಂತ್ರ್ಯ ಕಿತ್ಕೊಂಡಿದ್ದೇನೆ ಅನ್ನೋದು ಚಿನ್ನುಮರಿಯವರ ಕೋಪ. ಆದ್ರೆ ಬೇರೆ ಯಾರ ಜೊತೆಯಲ್ಲಿ ಮಾತನಾಡಿದ್ರೆ ನನ್ನ ಮೇಲಿನ ಪ್ರೀತಿ ಕಡಿಮೆಯಾಗುತ್ತೆ ಅನ್ನೋ ಭಯ ನನ್ನಲ್ಲಿತ್ತು. ಆ ಭಯದಿಂದ ಕ್ಯಾಮೆರಾ ಫಿಕ್ಸ್ ಮಾಡಿದೆ. ಅವರ ಮೇಲಿನ ಅನುಮಾನದಿಂದಲ್ಲ ಎಂದು ಶಾಂತಮ್ಮ ಮುಂದೆ ಜಯಂತ್ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾನೆ.

55
ನಾನು ಬದಲಾಗಿದ್ದೇನೆ ಅಲ್ಲವಾ?

ಈಗ ಮನೆಯಲ್ಲಿರೋ ಎಲ್ಲಾ ಕ್ಯಾಮೆರಾ ತೆಗೆದಿದ್ದೇನೆ. ನಾನು ಬದಲಾಗಿದ್ದೇನೆ ಅಲ್ಲವಾ ಶಾಂತಮ್ಮ ಎಂದು ಜಯಂತ್ ವಿಚಿತ್ರವಾಗಿ ನಗುತ್ತಾನೆ. ಭಯದಿಂದಲೇ ಶಾಂತಮ್ಮ ಸಹ, ಹೌದು ಜಯಂತ್ ನೀನು ಬದಲಾಗಿದ್ದೀಯಾ ಎಂದು ಹೇಳುತ್ತಾರೆ. ಜಯಂತ್‌ಗೆ ಪದೇ ಪದೇ ಜಾಹ್ನವಿ ಕರೆದಂತೆ ಆಗುತ್ತಿರೋದನ್ನು ಸೀರಿಯಲ್‌ನಲ್ಲಿ ತೋರಿಸಿದ್ದಾರೆ.

Read more Photos on
click me!

Recommended Stories