ಭೂಮಿ ಶೆಟ್ಟಿ ಹೊಸ ಬೋಲ್ಡ್ ಲುಕ್ ನೋಡಿ ಫ್ಯಾನ್ಸ್ ಏನಂದ್ರು ಗೊತ್ತಾ?

Published : May 10, 2024, 02:39 PM IST

ನಟಿ ಭೂಮಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳ ಸಿರೀಸ್ ಪೋಸ್ಟ್ ಮಾಡಿದ್ದು, ಹೊಸ ಲುಕ್ ನಲ್ಲಿ ಭೂಮಿ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ.   

PREV
17
ಭೂಮಿ ಶೆಟ್ಟಿ ಹೊಸ ಬೋಲ್ಡ್ ಲುಕ್ ನೋಡಿ ಫ್ಯಾನ್ಸ್ ಏನಂದ್ರು ಗೊತ್ತಾ?

ಕನ್ನಡ ಕಿರುತೆರೆಯಲ್ಲಿ ಮಿಂಚಿ ಸದ್ಯ ಹಿರಿತೆರೆಯಲ್ಲಿ ಸದ್ದು ಮಾಡುತ್ತಿರುವ ಕುಂದಾಪುರದ ಹುಡುಗಿ ಭೂಮಿ ಶೆಟ್ಟಿ, (Bhoomi Shetty) ಬಿಗ್ ಬಾಸ್ ಸೀಸನ್ 7ರ ಮೂಲಕ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿದ್ದರು. 
 

27

ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟೀವ್ ಆಗಿರುವ ಭೂಮಿ ಶೆಟ್ಟಿ ಹೆಚ್ಚಾಗಿ ಸುದ್ದಿಯಾಗೋದೆ ತಮ್ಮ ಸ್ಟೈಲ್ ಮತ್ತು ಬೋಲ್ಡ್‌ನೆಸ್‌ನಿಂದ. ಹಾಗಂತ ಭೂಮಿ ಗ್ಲಾಮರಸ್ ಆಗಿ ಕಾಣಿಸ್ತಿದ್ದಾರೆ ಅಂತಲ್ಲ, ಆದರೂ ಭೂಮಿ ಶೆಟ್ಟಿ ಡ್ರೆಸ್ ಅಂತೂ ಸಖತ್ ಬೋಲ್ಡ್ ಆಗಿರುತ್ತೆ. 
 

37

ಬೈಕ್ ರೈಡರ್ ಆಗಿರುವ ಭೂಮಿ, ಬೆಂಗಳೂರಿನಿಂದ ಕುಂದಾಪುರಕ್ಕೆ ಬೈಕಲ್ಲೇ ಟ್ರಾವೆಲ್ ಮಾಡ್ತಾರೆ, ಜೊತೆಗೆ ತಮ್ಮ ರಾಯಲ್ ಎನ್‌ಫೀಲ್ಡ್ ಬೈಕಲ್ಲಿ, ಟ್ರಾವೆಲ್, ರೈಡ್ ಮಾಡೋದು ಅಂದ್ರೆ ಈ ಹುಡುಗಿಗೆ ಸಿಕ್ಕಾಪಟ್ಟೆ ಇಷ್ಟ. 
 

47

ವ್ಯಕ್ತಿತ್ವದಲ್ಲೂ ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ಈ ಬೆಡಗಿ, ತಾನು ಹೊಸ ಸ್ಟೈಲ್, ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳೋದಕ್ಕೆ ಹಿಂಜರಿಯೋದೆ ಇಲ್ಲ. ಹಾಗಾಗಿ ಹೆಚ್ಚಾಗಿ ಇವರ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಇವರ ಬೋಲ್ಡ್ ನೆಸ್ ಮತ್ತು ಬೋಲ್ಡ್ ಅವತಾರಗಳಿಗೆ ಸಾಕ್ಷಿಯಾಗಿ ಫೋಟೋಗಳು ಅಪ್ ಲೋಡ್ ಆಗುತ್ತಿರುತ್ತೆ. 
 

57

ಇತ್ತೀಚೆಗಷ್ಟೇ ಭೂಮಿ ಶೆಟ್ಟಿ ತಮ್ಮ ಕೂಡಲಿಗೆ ಹೊಸ ಲುಕ್ ಕೊಡಲು ಬಾಕ್ಸ್ ಬ್ರೈಡ್ (Box Braid) ಮಾಡಿಸಿಕೊಳ್ಳುವ ಮೂಲಕ ಶಾಖ್ ನೀಡಿದ್ದರು. ಈ ಸಮಯದಲ್ಲಿ ಅವರು ಇದು ಕೇವಲ ಹೊಸ ಟ್ರೆಂಡ್ ಪಾಲಿಸೋದಲ್ಲ, ಬದಲಾಗಿ ಇನ್ನೊಂದು ಸಂಸ್ಕೃತಿಯನ್ನು ಗೌರವಿಸುವ ಸಲುವಾಗಿ ಹೀಗೆ ಮಾಡಿದ್ದೇನೆ ಎಂದಿದ್ದಾರೆ. 
 

67

ಇದೀಗ ಮತ್ತೆ ಭೂಮಿ ತಮ್ಮ ಬಾಕ್ಸ್ ಬ್ರೈಡ್ ಹೇರ್ ಸ್ಟೈಲಲ್ಲಿ ಸ್ಟನ್ನಿಂಗ್ ಲುಕ್ ನೀಡುತ್ತಾ, ಫೋಟೋ ಶೇರ್ ಮಾಡಿದ್ದಾರೆ. ಇವರ ಸ್ಟೈಲ್, ಆಟಿಟ್ಯೂಡ್, ಬೋಲ್ಡ್ ನೆಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೊಂದು ಸಖತ್ತಾಗಿ ಬಂದಿವೆ ಈ ಫೋಟೋಗಳು. 
 

77

ಶಿಲ್ಪಾ ಹೆಗ್ಡೆ ಸ್ಟೈಲಿಂಗ್ ನಲ್ಲಿ ಅದ್ಭುತವಾಗಿ ಕಾಣಿಸುತ್ತಿರುವ ಭೂಮಿಗೆ ಕೆಲವರು ಸ್ಟನ್ನಿಂಗ್ ಎಂದರೆ, ಇನ್ನು ಕೆಲವರು ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ ಎಂದಿದ್ದಾರೆ, ಕ್ರೇಜಿ ಲುಕ್, ಹಾಟ್, ಕಿಲ್ಲಿಂಗ್ ಲುಕ್, ನಿಮ್ಮ ಟ್ರಾನ್ಸ್ಪಮೇಶನ್ ಇಷ್ಟ ಆಯ್ತು. ತುಂಬಾ ಚೆನ್ನಾಗಿ ಕಾಣಿಸ್ತಿದ್ದೀರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories