ಕಿರಿಕ್ ಕೀರ್ತಿ...ಈ ಹೆಸರು ಕೇಳಿದ ತಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಟಿವಿ ಕಾರ್ಯಕ್ರಮ. ಆನಂತರ ಬಿಗ್ ಬಾಸ್ ರಿಯಾಲಿಟಿ ಶೋ.....
ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜಾಕ್‌ಪಾಟ್ ಫಿನಾಲೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಿಮ್ಮ ಜೀವನದ ಅಮೂಲ್ಯವಾದ 60 ಸೆಕೆಂಡ್ ಯಾವುದು ಎಂದು ನಿರೂಪಕಿ ಪ್ರಶ್ನೆ ಮಾಡಿದಾಗ ಒಂದು ಕ್ಷಣವೂ ಬ್ರೇಕ್ ಕೊಡದೆ ಮಗ ಬಗ್ಗೆ ಮಾತನಾಡುತ್ತಾರೆ.
ಫೆಬ್ರವರಿ 4, 2016 ಸುಮಾರು 8.42 ಸಮಯಕ್ಕೆ ನನ್ನ ಮಗ ಹುಟ್ಟಿದ್ದು. ನನ್ನ ಜೀವನದ ಅಮೂಲ್ಯವಾದ ಕ್ಷಣ ..ತುಂಬಾ ಕಾದು ಕುಳಿತಿದ್ದ ಸಮಯ ಅದು.
ಈಗ ಮಗನಿಗೆ 8 ವರ್ಷ ತುಂಬಿದೆ ಎಂದು ಹೇಳುತ್ತಿದ್ದಂತೆ ಕಿರಿಕ್ ಕೀರ್ತಿ ಭಾವುಕರಾಗುತ್ತಾರೆ. ಮಾತು ಬಾರದೆ ಮೌನವಾಗಿ ನಿಂತಿದ್ದಾಗ ಪರ್ವಾಗಿಲ್ಲ ಬಿಡಿ ಎಂದು ಅನುಪಮಾ ಸುಮ್ಮನಾಗುತ್ತಾರೆ.
ಕೆಲವು ದಿನಗಳ ಹಿಂದೆ ಮಗ 8ನೇ ವರ್ಷ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. 'ಅಪ್ಪ-ಮಗ..ನಮ್ಮದೊಂದು ಪುಟ್ಟ ಪ್ರಪಂಚ' ಎಂದು ಬರೆದುಕೊಂಡಿದ್ದರು.