ಕನ್ನಡ ಕಿರುತೆರೆ ನಟಿಯರಲ್ಲಿ ಒಬ್ಬರಾದ ಸಹನಾ ಶೆಟ್ಟಿ (Sahana Shetty), ಕಳೆದ ಹಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಆಕ್ಟೀವ್ ಆಗಿರುವ ನಟಿ, ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಹನಾ ಇದೀಗ ಮೊದಲನೇ ವರ್ಷದ ವಿವಾಹದ ಸಂಭ್ರಮದಲ್ಲಿದ್ದಾರೆ.
ಸಹನಾ ಶೆಟ್ಟಿ ಈ ಮೊದಲು ನನ್ನರಸಿ ರಾಧೆ (Nannarasi Radhe)ಸೀರಿಯಲ್ ನಲ್ಲಿ ನಾಯಕ ಅಗಸ್ತ್ಯನ ತಂಗಿ ಊರ್ವಿ ಪಾತ್ರದಲ್ಲಿ ನಟಿಸಿದ್ದರು. ಈ ಸೀರಿಯಲ್ ನಲ್ಲಿ ಅಣ್ಣ ತಂಗಿಯರ ಬಾಂಡಿಂಗ್ ತುಂಬಾನೆ ಮುದ್ದಾಗಿತ್ತು, ಹಾಗಾಗಿ ಬೆಸ್ಟ್ ಸಹೋದರಿ ಅವಾರ್ಡ್ ಕೂಡ ಪಡೆದಿದ್ದರು.
ಸಹನಾ ಶೆಟ್ಟಿ ಸದ್ಯ ಬೃಂದಾವನ (Brundavana) ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆಕಾಶನನ್ನು ತುಂಬಾ ಪ್ರೀತಿಸುವ ಸಹನಾ ಪಾತ್ರದಲ್ಲಿ ಸಹನಾ ಶೆಟ್ಟಿ ನಟಿಸುತ್ತಿದ್ದಾರೆ. ಆಕಾಶ್ ಗೆ ಮದುವೆಗೂ ಮುನ್ನ ಸೈಬರ್ ನವರ ತಪ್ಪಿನಿಂದಾಗಿ ಬಂದಿದ್ದು, ಸಹನಾ ಫೋಟೋ, ಆಕೆಯನ್ನೆ ಪ್ರೀತಿಸಿದ ಹುಡುಗನಿಗೆ ಸಹನಾ ಪುಷ್ಫ ಇಬ್ಬರೂ ಬೇರೆ ಅನ್ನೋದು ಗೊತ್ತಾಗಿ ಶಾಕ್ ಆಗಿತ್ತು.
ಕಾಲೇಜಿನಲ್ಲಿ ಮತ್ತೆ ಸಹನಾಳನ್ನು ಕಂಡ ಆಕಾಶ್ ಆಕೆಯನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದ, ಆದರೆ ಬರಬರುತ್ತ ಇಷ್ಟವಿಲ್ಲದ ಮದುವೆಯಿಂದ ಹೆಂಡತಿಯಾಗಿ ಬಂದ ಪುಷ್ಪಾಳನ್ನೇ ಆಕಾಶ್ ನಿಜವಾಗಿ ಪ್ರೀತಿಸತೊಡಗಿದ್ದ, ಈಗ ಸಹನಾ ಸಹ ಆಕಾಶ್ ನನ್ನು ಪ್ರೀತಿಸುತ್ತಿದ್ದು, ಕಥೆಗೆ ಟ್ವಿಸ್ಟ್ ಸಿಕ್ಕಿದೆ. ಸಹನಾ ಪಾತ್ರದಲ್ಲಿ ಸಹನಾ ಶೆಟ್ಟಿ ಅದ್ಭುತವಾಗಿ ನಟಿಸುತ್ತಿದ್ದಾರೆ.
ಸಹನಾ ಕಳೆದ ವರ್ಷ ಮೇ 9 ರಂದು ತಮ್ಮ ಕ್ರಶ್ ಆಗಿದ್ದ ಹುಡುಗನನ್ನೆ ಮದುವೆಯಾಗಿದ್ದರು. ಹಾಗಾಗಿ ಇದನ್ನು ಲವ್ ಕಮ್ ಅರೇಂಜ್ ಮ್ಯಾರೇಜ್ ಎಂದೇ ಹೇಳಬಹುದು. ಮದುವೆ ಸಮಾರಂಭ ಬಹಳ ಅದ್ಧೂರಿಯಾಗಿಯೇ ನಡೆದಿತ್ತು.
ಕಳೆದ ವರ್ಷ ಎಂಗೇಜ್ ಮೆಂಟ್ ವಿಡೀಯೋ ಶೇರ್ ಮಾಡಿದ್ದ ಸಹನಾ ಶೆಟ್ಟಿ ಮೊದಲ ಬಾರಿಗೆ ತಮ್ಮ ಬಾಳ ಸಂಗಾತಿ ಬಗ್ಗೆ ತಿಳಿಸಿದ್ದರು, ಸಣ್ಣ ಕ್ರಶ್‌ನಿಂದ ಆರಂಭವಾಗಿ, ಇದೀಗ ನನ್ನ ಬೆರಳಲ್ಲಿ ಅವನು ತೊಡಿಸಿದ ಉಂಗುರದವರೆಗೂ ಎಲ್ಲವೂ ಆಯಿತು ಎಂದು ಸಂಭ್ರಮ ಹಂಚಿಕೊಂಡಿದ್ದರು.
ಸಹನಾ ಪತಿ ಹೆಸರು ಪ್ರತಾಪ್ ಶೆಟ್ಟಿ. ವಿವಾಹ ವಾರ್ಷಿಕೋತ್ಸವದ ಹಿನ್ನೆಯಲ್ಲಿ ಸಹನಾ ತನ್ನ ಪತಿಯಾ ಜೊತೆಗಿನ ಒಂದಷ್ಟು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಮದುವೆಯಾಗಿ ಒಂದು ವರ್ಷ. ಹ್ಯಾಪಿ ಆನಿವರ್ಸರಿ ಪ್ರತಾ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು, ಕಿರುತೆರೆಯ ನಟಿಯರು ಇವರಿಗೆ ಶುಭ ಕೋರಿದ್ದಾರೆ.