ಕನ್ನಡ ಕಿರುತೆರೆಯಲ್ಲಿ ಮೆಚ್ಚಿನ ನಟಿಯಾಗಿ ಮಿಂಚಿದ ನಂದಿನಿ ಗೌಡ ಈಗೇನು ಮಾಡ್ತಿದ್ದಾರೆ?

Published : Nov 01, 2023, 03:36 PM IST

ಕನ್ನಡ ಕಿರುತೆರೆ ಲೋಕದಲ್ಲಿ ಒಂದು ಕಾಲದಲ್ಲಿ ಮಿಂಚಿದ ಟಿ ಎನ್ ಸೀತಾರಾಮ್ ಸೀರಿಯಲ್ ಗಳ ಮೂಲಕ ಜನಮನಕ್ಕೆ ಹತ್ತಿರವಾಗಿದ್ದ ನಟಿ ನಂದಿನಿ ಗೌಡ ಏನು ಮಾಡ್ತಿದ್ದಾರೆ?   

PREV
18
ಕನ್ನಡ ಕಿರುತೆರೆಯಲ್ಲಿ ಮೆಚ್ಚಿನ ನಟಿಯಾಗಿ ಮಿಂಚಿದ ನಂದಿನಿ ಗೌಡ ಈಗೇನು ಮಾಡ್ತಿದ್ದಾರೆ?

ನಂದಿನಿ ಗೌಡ (Nandini Gowda) ಹೆಸರು ಹೇಳಿದ ಕೂಡಲೇ ಈ ಚೆಂದದ ನಟಿ ಮುಖ ಬಂದೇ ಬರುತ್ತೆ. ಯಾಕಂದ್ರೆ ಕನ್ನಡ ಕಿರುತೆರೆ ಲೋಕದಲ್ಲಿ ಹಲವಾರು ಸೀರಿಯಲ್ ಗಳಲ್ಲಿ ನಾಯಕಿಯಾಗಿ ಮಿಂಚಿ, ಜನಮನ ಗೆದ್ದ ನಟಿ ಇವರು. 

28

ಟಿಎನ್ ಸೀತಾರಾಮ್ ಸರ್ ಅವರು ನಿರ್ದೇಶನದ ಮುಕ್ತ ಮುಕ್ತ ಸೀರಿಯಲ್ ನಲ್ಲಿ ನಟಿಸಿದ್ದ ಇವರು ಖಂಡಿತವಾಗಿಯೂ ಸೀತಾರಾಂ ಅವರ ನೆಚ್ಚಿನ ನಾಯಕಿ ಹೌದು. ಅದನ್ನು ನಟಿಯೇ ಹೇಳಿಕೊಂಡಿದ್ದಾರೆ. 

38

ತಮ್ಮ ಸ್ಪಷ್ಟ ಕನ್ನಡ, ಮುಗ್ಧ ಮುಖ, ಅಂದದ ನಗುವಿನಿಂದಲೇ ಜನಮನ ಗೆದ್ದ ನಟಿ ನಂದಿನಿ ಗೌಡ ಈವಾಗ ಎಲ್ಲಿದ್ದಾರೆ? ಸೀರಿಯಲ್ ಗಳಲ್ಲಿ ನಾಯಕಿಯಾಗಿ ಮೆರೆದು ನಂತರ ಕಿರುತೆರೆಯಿಂದ ದೂರ ಇದ್ದು, ಇತ್ತಿಚೆಗೆ ಒಂದೆರಡು ಸೀರಿಯಲ್ ಗಳಲ್ಲಿ ನಂದಿನಿ ನಟಿಸಿದ್ದಾರೆ. 

48

ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಸಂದರ್ಶನ ನೀಡಿದ ನಂದಿನಿ ತಮ್ಮ ಜೀವನದ ಕಥೆಗಳನ್ನು ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ. ತನ್ನನ್ನು ತಾನು ಸ್ಪೆಷಲ್ ಚೈಲ್ಡ್ ಎಂದಿರುವ ಇವರು, ಅದಕ್ಕೆ ಕಾರಣ ನೀಡಿದ್ದು, ಎಲ್ಲರೂ ಹಾಸ್ಪಿಟಲ್ ನಲ್ಲಿ ಹುಟ್ಟಿದ್ರೆ, ನಾನು ದನದ ಕೊಟ್ಟಿಗೆಯಲ್ಲಿ ಹುಟ್ಟಿದೆ, ಹಾಗಾಗಿ ನಾನು ಸ್ಪೆಷಲ್ ಎಂದು ಹೇಳಿದ್ದಾರೆ. 

58

ಹೈಸ್ಕೂಲ್ ನಿಂದಲೂ ಪತ್ರಕರ್ತೆಯಾಗಬೇಕೆಂಬ ಕನಸು ಕಂಡಿದ್ದ ಇವರಿಗೆ ಮನೆಯಲ್ಲಿ ಪತ್ರಿಕೋದ್ಯಮ ಮಾಡೋಕೆ ಒಪ್ಪಿಗೆ ಕೊಟ್ಟಿಲ್ವಂತೆ. ಹಾಗಾಗಿ ಕಂಪ್ಯೂಟರ್ ಸಯನ್ಸ್ ನಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ಮಾಡಿಕೊಂಡರಂತೆ.

68

ನಟನಾ ಜಗತ್ತಿನ ಬಗ್ಗೆ ಗಂಧ ಗಾಳಿಯೇ ಇಲ್ಲದ , ನಟಿಯಾಗುವ ಕನಸೇ ಕಾಣದ ನಂದಿನಿ ನಟಿಯಾಗಿದ್ದು ಮಾತ್ರ ವಿಶೇಷ. ಇವರು ಮೊದಲ ಬಾರಿಗೆ ಸಿನಿಮಾದಲ್ಲಿ ಅವಕಾಶ ಪಡೆದುಕೊಂಡರು, ಅದು ಸಹ ಖ್ಯಾತ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಪ್ರೇಮ ಪ್ರೇಮ ಪ್ರೇಮ ಚಿತ್ರದಲ್ಲಿ ನಟಿಸಿದ್ದರು. 

78

ಅಲ್ಲಿಂದ ನಂತರ ಕಿರುತೆರೆ ಜಗತ್ತಿಗೆ ಎಂಟ್ರಿಕೊಟ್ಟ ನಂದಿನಿ ಹಿಂದಿರುಗಿ ನೋಡಲೇ ಇಲ್ಲ. ಮುಕ್ತ ಮುಕ್ತ, ಮನ್ವಂತರ, ಕ್ಷಣ ಕ್ಷಣ, ಮೂಡಲ ಮನೆ, ಲಕ್ಷ್ಮೀ ಬಾರಮ್ಮ, ಮಂಥನ ಮೊದಲಾದ ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಯಶಸ್ವಿ ನಟಿಯಾದರು. 

88

ಕಳೆದ 24 ವರ್ಷಗಳಿಂದ ನಟನಾ ಜಗತ್ತಿನಲ್ಲಿ ಮಿಂಚುತ್ತಿರುವ ನಟಿ ನಂದಿನಿ, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಮರಳಿ ಮನಸಾಗಿದೆ ಸೀರಿಯಲ್ ನಲ್ಲಿ ನಟಿಸುತ್ತಿದ್ದರು. ಅಲ್ಲದೇ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಸ್ತೂರಿ ನಿವಾಸ ಸೀರಿಯಲ್ ನಲ್ಲೂ ನಟಿಸಿದ್ದರು. ಜನರು ಸಹ ತಮ್ಮ ನೆಚ್ಚಿನ ನಟಿಯನ್ನು ಹೆಚ್ಚಿನ ಸೀರಿಯಲ್ ಗಳಲ್ಲಿ (serial) ನೋಡಲು ಬಯಸುತ್ತಾರೆ. 

Read more Photos on
click me!

Recommended Stories