ಶಾರ್ಟ್‌ ಹೇರ್‌ನಲ್ಲಿ ಸೆಕ್ಸಿ ಪೋಸ್ ಕೊಟ್ಟ Saanya Iyer: 'ಎನರ್ಜಿ' ಕ್ಯಾಪ್ಷನ್ ಸಖತ್ ಎಂದ ಫ್ಯಾನ್ಸ್!

Published : Nov 01, 2023, 12:00 PM IST

ಕಿರುತೆರೆ, ರಿಯಾಲಿಟಿ ಶೋಗಳಲ್ಲಿ ಮಿಂಚಿದ ನಟಿ ಸಾನ್ಯಾ ಅಯ್ಯರ್‌, ಸದ್ಯ ತಮ್ಮ ಸಂಪೂರ್ಣ ಗಮನವನ್ನು ಸಿನಿಮಾ ಕಡೆಗೆ ವಹಿಸಿದ್ದಾರೆ. ಅದರಂತೆ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಜತೆ ಗೌರಿ ಹೆಸರಿನ ಸಿನಿಮಾದಲ್ಲಿ ಇಂದ್ರಜಿತ್‌ ಪುತ್ರನಿಗೆ ಜೋಡಿಯಾಗಿದ್ದಾರೆ. ಈ ನಡುವೆ ಒಂದಷ್ಟು ಹೊಸ ಫೋಟೋಗಳನ್ನೂ ಅವರು ಶೇರ್‌ ಮಾಡಿದ್ದಾರೆ.

PREV
15
ಶಾರ್ಟ್‌ ಹೇರ್‌ನಲ್ಲಿ ಸೆಕ್ಸಿ ಪೋಸ್ ಕೊಟ್ಟ Saanya Iyer: 'ಎನರ್ಜಿ' ಕ್ಯಾಪ್ಷನ್ ಸಖತ್ ಎಂದ ಫ್ಯಾನ್ಸ್!

ಕಿರುತೆರೆಯಿಂದ ಆರಂಭವಾದ ಸಾನ್ಯಾ ಅಯ್ಯರ್‌ ಬಣ್ಣದ ಲೋಕದ ಜರ್ನಿ ಇದೀಗ ಸಿನಿಮಾ ನಾಯಕಿ ಆಗುವವರೆಗೂ ಬಂದು ನಿಂತಿದೆ. ಇವರು ಆಗಾಗ ಫೋಟೋಶೂಟ್‌ಗಳಿಗೆ ಮುಖವೊಡ್ಡಿ ಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

25

ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರ ಗೌರಿ ಚಿತ್ರದಲ್ಲಿ, ಸಮರ್ಜಿತ್‌ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಚಿತ್ರಕ್ಕೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಗ್ಲಾಮರಸ್‌ ಅವತಾರದಲ್ಲಿ ಹೆಚ್ಚು ಕಾಣಿಸುವ ಸಾನ್ಯಾ, ಒಮ್ಮೊಮ್ಮೆ ಅದೇ ವಿಚಾರಕ್ಕೆ ಟೀಕೆಗೂ ಗುರಿಯಾಗುತ್ತಾರೆ. 

35

ಇದೀಗ ಇದೇ ಸಾನ್ಯಾ ಅಯ್ಯರ್‌ ಶಾರ್ಟ್‌ ಹೇರ್‌ ತಿಳಿ ಬಣ್ಣದ ಡ್ರೆಸ್‌ನಲ್ಲಿ ಹೊಸ ಫೋಟೋಶೂಟ್‌ವೊಂದನ್ನು ಶೇರ್‌ ಮಾಡಿದ್ದಾರೆ. ಜೊತೆಗೆ ಎನರ್ಜಿ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಅವರ ಫೋಟೋಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

45

ಟೂ ಪೀಸ್ ಉಡುಗೆ ಧರಿಸಿದ್ದ ಸಾನ್ಯಾ ಅವರು ಮಿನಿಮಮ್ ಮೇಕಪ್ ಮಾಡಿಕೊಂಡಿದ್ದರು. ಒಂದು ಇಯರಿಂಗ್ಸ್ ಬಿಟ್ಟರೆ ಬೇರೆ ಯಾವುದೇ ಆಭರಣ ಇರಲಿಲ್ಲ. ನಟಿಯ ಫೋಟೋಗಳಿಗೆ ಫೈರ್‌ ಇಮೋಜಿ ಜತೆಗೆ ಹಾರ್ಟ್‌ ಮತ್ತು ಸಿಹಿಮುತ್ತಿನ ಇಮೋಜಿಗಳ ಮೂಲಕ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

55

ಸಾನ್ಯಾ ಐಯ್ಯರ್ ಇತ್ತೀಚೆಗೆ ತುಂಬಾ ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಮಾಡಲು ರೆಡಿಯಾಗಿರುವ ಈ ಬ್ಯೂಟಿ ಬಾಲಿವುಡ್ ಫೋಟೋಗ್ರಫರ್ ಜೊತೆಗೂ ಶೂಟ್ ಮಾಡಿಸಿಕೊಂಡಿದ್ದಾರೆ.

Read more Photos on
click me!

Recommended Stories