ರಸ್ತೆ ಅಪಘಾತದಲ್ಲಿ 'ಕನ್ನಡತಿ' ನಟ ಕಿರಣ್ ರಾಜ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

First Published | Sep 11, 2024, 8:49 AM IST

 ರಭಸದಿಂದ ಡಿವೈಡರ್‌ಗೆ ಕಾರು ಗುದ್ದಿ ಕಿರುತೆರೆ ನಟ ಕಿರಣ್‌ ರಾಜ್‌ ಎದೆ ಭಾಗಕ್ಕೆ ಪೆಟ್ಟು....

ಕನ್ನಡ ಕಿರುತೆರೆಯ ಚಾರ್ಮಿಂಗ್ ಸ್ಟಾರ್, ಕನ್ನಡತಿ ಧಾರಾವಾಹಿಯ ಎವರ್‌ಲವ್, ಸೋಷಿಯಲ್ ಮೀಡಿಯಾ ಸ್ಟಾರ್ ನಟ ಕಿರಣ್ ರಾಜ್‌ ಕಾರಿಗೆ ನಿನ್ನೆ ರಸ್ತೆ ಅಪಘಾತವಾಗಿದೆ. 

ಹಲವು ವರ್ಷಗಳ ನಂತರ ಕಿರಣ್ ರಾಜ್ ನಟನೆಯ ರಾನಿ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಸಿನಿಮಾ ಪ್ರಚಾರಕ್ಕೆಂದು ಕಿರಣ್ ತುಂಬಾ ಪ್ರಯಾಣ ಮಾಡುತ್ತಿದ್ದರು.

Tap to resize

ಸೆಪ್ಟೆಂಬರ್ 10ರಂದು ಕೆಂಗೇರಿ ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತಿರುವಾಗ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ನಟನಿಗೆ ಬಲವಾದ ಪೆಟ್ಟು ಬಿದ್ದಿದೆ. 

ನಟ ಕಿರಣ್ ರಾಜ್‌ ಎದೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು ಬೆಂಗಳೂರು ಆಸ್ಪತ್ರೆ ಕೆಂಗೇರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ. 

ಕಿರಣ್ ರಾಜ್‌ ಜೊತೆ ಕಾರಿನಲ್ಲಿ ಎಕ್ಸಿಕ್ಯೂಟಿವ್ ಪ್ರಡ್ಯೂಸರ್ ಇದ್ದರು. ಈ ಪ್ರಡ್ಯೂಸರ್ ಸೀಟ್ ಬೆಲ್ಟ್‌ ಹಾಕಿದ್ದ ಕಾರಣ ಸೇಫ್ ಆಗಿದ್ದಾರೆ. ಕಿರಣ್ ಸೀಟ್ ಬೆಲ್ಟ್‌ ಧರಿಸಿರುವ ಬಗ್ಗೆ ಸ್ಪಷ್ಟನೆ ಇಲ್ಲ. 

ಕಿರಣ್ ರಾಜ್‌ ಬಳಿ ಇದ್ದಿದ್ದು ಕಪ್ಪು ಬಣ್ಣದ ಮರ್ಸಿಡಿಸ್-ಬೆನ್ಜ್ ಕಾರು. ಸಾಮಾನ್ಯವಾಗಿ ಭಾರತದಲ್ಲಿ ಈ ಕಾರುಗಳ ಬೆಲೆ 45 ಲಕ್ಷ ರೂಪಾಯಿಗಳಿಂದ ಆರಂಭವಾಗಿ 3 ಕೋಟಿಯವರೆಗೂ ಇದೆ. 

Latest Videos

click me!