Bigg Boss 18 ರ ಸೀಸನ್‌ಗೆ ಭಾಯಿಜಾನ್ ಸಲ್ಮಾನ್ ಖಾನ್ ಪಡೆದ ಸಂಭಾವನೆ ಎಷ್ಟು?

Published : Sep 10, 2024, 08:58 PM IST

ಹಿಂದಿ ಆವೃತ್ತಿಯ ಬಿಗ್ ಬಾಸ್ 18ರ ಹೊಸ ಸೀಸನ್ ಮಾಧ್ಯಮ ವರದಿಗಳ ಪ್ರಕಾರ, ಅಕ್ಟೋಬರ್ 18ರ ಮೊದಲ ವಾರದಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಈ ಬಾರಿಯೂ ಸಲ್ಮಾನ್ ಖಾನ್ ಹೋಸ್ಟ್ ಆಗಿರುವುದು ವೀಕ್ಷಕರಲ್ಲಿ ಉತ್ಸಾಹ ಇಮ್ಮಡಿಸಿದೆ

PREV
15
Bigg Boss 18 ರ ಸೀಸನ್‌ಗೆ ಭಾಯಿಜಾನ್ ಸಲ್ಮಾನ್ ಖಾನ್ ಪಡೆದ  ಸಂಭಾವನೆ ಎಷ್ಟು?

ಬಿಗ್ ಬಾಸ್ ಹಿಂದಿ ಸೀಸನ್ 18 (Bigg Boss Hindi Season 18) ರ ಶೋ ಈಗ ಟ್ರೆಂಡಿಂಗ್‌ನಲ್ಲಿದೆ. ಈ ಬಾರಿ ಬಿಗ್ ಬಾಸ್ ಸಲ್ಮಾನ್ ಖಾನ್ ಬದಲಾಗುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಮುಂದಿನ ಬಿಗ್ ಬಾಸ್ ಶೋ ಯಾರು ನಡೆಸಿಕೊಡಲಿದ್ದಾರೆ ಎಂಬುದು ಭಾರೀ ಕುತೂಹಲ ಕೆರಳಿಸಿತ್ತು. ಇದೀಗ ಬಾಲಿವುಡ್ ನ ಹ್ಯಾಂಡ್ಸಮ್ ಹೀರೋ ಸಲ್ಮಾನ್ ಖಾನ್ ಬಹುತೇಕ ಖಚಿತವಾಗಿದೆ.  ಅಂದಹಾಗೆ ಈ ಬಾರಿ ಬಿಗ್ ಬಾಸ್ 18 ರಲ್ಲಿ ಸಲ್ಮಾನ್ ಖಾನ್ ಎಷ್ಟು ಸಂಭಾವನೆ ಪಡೆಯಲಿದ್ದಾರೆ ಎಂಬ ಕುತೂಹಲ ನಿಮ್ಮ ಕಾಡುತ್ತಿದೆಯೇ? ಇಲ್ಲಿದೆ ನೋಡಿ ಹೊಸ ಸುದ್ದಿ

25

ಕಿರುತೆರೆಯ 'ಬಿಗ್ ಬಾಸ್ 18' ವಿವಾದಾತ್ಮಕ ಮತ್ತು ಅಷ್ಟೇ ಜನಪ್ರಿಯ ರಿಯಾಲಿಟಿ ಶೋ ಆಗಿದೆ. 18ನೇ ಸೀಸನ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಸಲ್ಮಾನ್ ಖಾನ್ ಅವರ ಶೋ ಮುಂದಿನ ತಿಂಗಳಲ್ಲೇ ಪ್ರಾರಂಭವಾಗಲಿದೆ. ಸಲ್ಮಾನ್ ಖಾನ್ ಮತ್ತೊಮ್ಮೆ ಬಿಗ್ ಬಾಸ್ ಹೋಸ್ಟ್ ಮಾಡುವುದನ್ನು ನೋಡಲು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಬಿಗ್ ಬಾಸ್ ಸೀಸನ್ ಅಕ್ಟೋಬರ್ 18 ರ ಮೊದಲ ವಾರದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಸದ್ಯದಲ್ಲೇ ಪ್ರೋಮೋ ಬಿಡುಗಡೆಯಾಗಲಿದೆ.

35

ಬಿಗ್ ಬಾಸ್ 18 ರ ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ, ಆದರೆ ಸಲ್ಮಾನ್ ಖಾನ್ ಕಾರ್ಯಕ್ರಮದ ಪ್ರೋಮೋವನ್ನು ಚಿತ್ರೀಕರಿಸಿದ್ದಾರೆ. ಕೆಲವು ದಿನಗಳ ಹಿಂದೆ ಬಿಗ್ ಬಾಸ್ ಸೆಟ್ ನಲ್ಲಿ ಸಲ್ಮಾನ್ ಖಾನ್ ಅವರ ವಿಡಿಯೋ ವೈರಲ್ ಆಗಿತ್ತು. ಏತನ್ಮಧ್ಯೆ, ಸಲ್ಮಾನ್ ಖಾನ್ ಈ ಸೀಸನ್ ಅನ್ನು ಹೋಸ್ಟ್ ಮಾಡುವುದಿಲ್ಲ ಎಂಬ ವದಂತಿಗಳು ಹಬ್ಬಿದ್ದವು, ಆದರೆ ಯಾವಾಗ ಸಲ್ಮಾನ್ ಖಾನ್ ನೇರವಾಗಿ ಬಿಗ್ ಬಾಸ್‌ನ ಸೆಟ್‌ಗಳಿಗೆ ಹಿಂತಿರುಗಿದರೋ ಅನಂತರ ಈ ವದಂತಿಗಳಿಗೆ ತೆರೆಬಿದ್ದಿತು. ಸಲ್ಮಾನ್ ಖಾನ್ ಬಿಗ್ ಬಾಸ್ ಅನ್ನು ಹೋಸ್ಟ್ ಮಾಡಲಿದ್ದಾರೆ ಎಂದು ತಿಳಿದ ನಂತರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಏಕೆಂದರೆ ಸಲ್ಮಾನ್ ಖಾನ್ ಅಲ್ಲದೇ ಬೇರೆ ಯಾರಿಗೂ ಬಿಗ್ ಬಾಸ್ ಹೋಸ್ಟ್ ಹೊಂದುವುದಿಲ್ಲ ಎನ್ನುತ್ತಾರೆ ವೀಕ್ಷಕರು.

45

ಬಿಗ್ ಬಾಸ್ 18 ಸೀಸನ್ ಯಾವಾಗ ಪ್ರಾರಂಭ?

ಪ್ರತಿ ಸೀಸನ್‌ನಲ್ಲೂ ಬಿಗ್ ಬಾಸ್ ಅಭಿಮಾನಿಗಳು ಕ್ರೇಜ್ ಹೆಚ್ಚಿಸುತ್ತದೆ. ಅದೇ ರೀತಿ ಈ ಬಾರಿಯೂ ಸಹ ಬಿಗ್ ಬಾಸ್ 18ರ ಸೀಸನ್ ಭಾರೀ ಟ್ರೆಂಡಿಂಗ್‌ ನ್ಯೂಸ್ ಆಗಿದೆ. ಕಿರುತೆರೆಯಲ್ಲಿ ಬಿಗ್ ಬಾಸ್‌ನ 17 ಯಶಸ್ವಿ ಸೀಸನ್‌ಗಳ ನಂತರ, ಈಗ ತಯಾರಕರು ಶೀಘ್ರದಲ್ಲೇ 18 ನೇ ಸೀಸನ್ ಅನ್ನು ಪ್ರೇಕ್ಷಕರಿಗೆ ತರಲಿದ್ದಾರೆ. ಇದೇ ವೇಳೆ ಬಿಗ್ ಬಾಸ್ 18ರ ಮನೆಯ ಥೀಮ್ ಕೂಡ ರಿವಿಲ್ ಆಗಿದೆ.  ಬಿಗ್ ಬಾಸ್ 18ಕ್ಕೆ ಬರುವ ಸ್ಪರ್ಧಿಗಳ ಕುರಿತು ಹಲವು ಸುದ್ದಿಗಳು ಹೊರಬಿದ್ದಿವೆ. ಬಿಗ್ ಬಾಸ್ 18 ರ ಸೀಸನ್ ಅಕ್ಟೋಬರ್ 5, 2024 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

55

ಬಿಗ್ ಬಾಸ್ 18ಕ್ಕೆ ಸಲ್ಮಾನ್ ಖಾನ್ ಶುಲ್ಕ ಎಷ್ಟು? 

ಈ ಸೀಸನ್ ಕೂಡ ಸಲ್ಮಾನ್ ಖಾನ್ ಹೋಸ್ಟ್ ಮಾಡಲಿದ್ದಾರೆ. ಈ ನಡುವೆ ಬಿಗ್ ಬಾಸ್ ಶೋಗಾಗಿ ಸಲ್ಮಾನ್ ಖಾನ್ ಸಂಭಾವನೆ ಹೆಚ್ಚಿಸಿರುವ ಸುದ್ದಿ ಹೊರಬೀಳುತ್ತಿದೆ. ಬಿಗ್ ಬಾಸ್ 17 ವೀಕೆಂಡ್ ಕಾ ವಾರ್ ಗಾಗಿ ಸಲ್ಮಾನ್ ಖಾನ್ 12 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ. ಅಂದ್ರೆ ಸಲ್ಮಾನ್ ಖಾನ್ ಅವರ ಸಂಚಿಕೆಗೆ ನಿರ್ಮಾಪಕರು ಆರು ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗಿತ್ತು. ಇದರ ಪ್ರಕಾರ ಇಡೀ ಶೋಗೆ ಸಲ್ಮಾನ್ ಖಾನ್ 50 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಸಲ್ಮಾನ್ ಕಾರ್ಯಕ್ರಮದ ಸಂಭಾವನೆ ಹೆಚ್ಚಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಬಿಗ್ ಬಾಸ್ 18 ಶೋಗಾಗಿ 60 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories