ದೇವರಂಥ ಅಳಿಯನಲ್ಲ, ದೇವರ ರೂಪದಲ್ಲೇ ಬಂದಿದ್ದಾನೆಂದು ಖುಷಿ ಪಟ್ಟ ಶ್ರೀರಸ್ತು ಶುಭಮಸ್ತು ನಟಿ ಸಿರಿ ಅಮ್ಮ!

First Published | Sep 11, 2024, 7:48 AM IST

ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶ್ರೀರಸ್ತು ಶುಭಮಸ್ತು ನಟಿ ಚಂದನ ರಾಘವೇಂದ್ರ ತಮ್ಮ ಮದುವೆಯ ಸುಂದರವಾದ ವಿಡಿಯೋ ಹಂಚಿಕೊಂಡಿದ್ದಾರೆ. 

ನಟಿ ಚಂದನ ರಾಘವೇಂದ್ರ ಅಂದ್ರೆ ಯಾರೂ ಅಂತ ಬಹುಶಃ ನಿಮಗೆ ಗೊತ್ತಿರಲ್ಲ, ಆದ್ರೆ ಶ್ರೀರಸ್ತು ಶುಭಮಸ್ತು (Srirastu Subhamastu) ಧಾರಾವಾಹಿಯ ಸಿರಿ ಅಂದ್ರೆ ಖಂಡಿತಾ ಎಲ್ಲರಿಗೂ ಗೊತ್ತಾಗುತ್ತೆ, ತಮ್ಮ ಮುದ್ದಾದ ಅಭಿನಯದಿಂದಲೇ ವೀಕ್ಷಕರ ಗಮನ ಸೆಳೆದ ನಟಿ ಚಂದನ ರಾಘವೇಂದ್ರ. 
 

ಇತ್ತೀಚೆಗಷ್ಟೇ ಚಂದನ (Chandana Raghavendra) ಬೆಂಗಳೂರಿನ ಪ್ರೈವೆಟ್ ರೆಸೋರ್ಟ್ ಒಂದರಲ್ಲಿ ಸಂಕೇತ್ ಎನ್ನುವವರ ಜೊತೆ ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರು. ಇವರ ಮದುವೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದವು. 
 

Tap to resize

ಇದೀಗ ಚಂದನ ತಮ್ಮ ಮದುವೆ ಸಂಭ್ರಮದ ಸುಂದರ ಕ್ಷಣಗಳನ್ನು ಸೆರೆಹಿಡಿದಿರುವ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮುದ್ದಾದ ವಿಡಿಯೋ ನೋಡಿ ನೆಟ್ಟಿಗರು ಜೋಡಿ ಶುಭ ಹಾರೈಸಿದ್ದಾರೆ. 
 

ಮದುವೆಯ ವಿಡಿಯೋದಲ್ಲಿ ಸಿರಿ ಆಲಿಯಾಸ್ ಚಂದನ ಮದುವೆ ಬಗ್ಗೆ ತಮ್ಮ ಎಕ್ಸೈಟ್’ಮೆಂಟ್, ಖುಷಿಯನ್ನು ವ್ಯಕ್ತಪಡಿಸಿದ್ದು, ಜೊತೆಗೆ ಮನೆಯವರು ಸಂಭ್ರಮಿಸಿದ ಪ್ರತಿಯೊಂದು ಕ್ಷಣಗಳನ್ನು ಆನಂದಿಸಿದ ವಿಡಿಯೋ ಇದಾಗಿತ್ತು, ಮದುವೆ ನಂತರದ ಒಂದಿಷ್ಟು ಸಂಪ್ರದಾಯಗಳನ್ನೂ ಸಹ ವಿಡಿಯೋದಲ್ಲಿ ಕಾಣಬಹುದು. 
 

ಚಂದನ ಮದುವೆ ಬಗ್ಗೆ ಅವರ ತಾಯಿ ಕೂಡ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದು, ತಮ್ಮ ಅಳಿಯನ ಬಗ್ಗೆ ಕೂಡ ಮನ ಬಿಚ್ಚಿ ಮಾತನಾಡಿದ್ದಾರೆ. ಎಲ್ಲರೂ ದೇವರಂತ ಅಳಿಯ ಸಿಕ್ಕ ಅಂತ ಖುಷಿ ಪಡ್ತಾರೆ. ಆದ್ರೆ ನಾನು ದೇವರೇ ಅಳಿಯನ ರೂಪದಲ್ಲಿ ಬಂದಿದ್ದಾರೆ ಅಂತ ಖುಷಿ ಪಡ್ತಿದ್ದೀನಿ, ಸಂಕೇತ್ ತುಂಬಾನೆ ಒಳ್ಳೆಯ ಹುಡುಗ ಎಂದಿದ್ದಾರೆ. 
 

ಮದುವೆಯ ಬಳಿಕ ಚಂದನ ಮತ್ತು ಸಂಕೇತ್ ಇಬ್ಬರೂ ಒಬ್ಬರ ಮೇಲೆ ಇನ್ನೊಬ್ಬರು ಪದ ಕಟ್ಟಿ ಹಾಡಿದ್ದು, ಪುರೋಹಿತರು ಪದ ಹೇಳಿದ್ದು, ಕುಟುಂಬ ಸಮೇತ ನಗುತ್ತಾ, ಈ ಸಂಪ್ರದಾಯವನ್ನು ಜೊತೆಯಾಗಿ ಆಚರಿಸಿದ್ದು, ಚಂದನ ತಮ್ಮ ಪತಿಯನ್ನು ಮೋಹನಾಂಗ ಎಂದು ತಮಾಷೆ ಮಾಡೋ ರೀತಿಯಲ್ಲಿ ಕಾಲು ಎಳೆದು ಹಾಡುವ ಮೂಲಕ ಎಂಜಾಯ್ ಮಾಡಿದ್ದಾರೆ.
 

ಅಷ್ಟೇ ಅಲ್ಲ, ಮದುವೆ ಮುಂಚಿನ ಪೂಜೆ, ಸಂಪ್ರದಾಯಗಳು, ಶಾಸ್ತ್ರಗಳು, ತಾಳಿ ಶಾಸ್ತ್ರ, ಕಾಲುಂಗುರ, ಸಪ್ತಪದಿ ಶಾಸ್ತ್ರ, ಧಾರೆ ಶಾಸ್ತ್ರ, ಕನ್ಯಾ ದಾನದ ಸುಂದರ ಕ್ಷಣಗಳನ್ನು ಅಷ್ಟೇ ಸುಂದರವಾಗಿ ಸೆರೆ ಹಿಡಿಯಲಾಗಿದೆ. ಚಂದನಾ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅದ್ಧೂರಿ ಮದುವೆಯ ಸುಮ್ದರ ಕ್ಷಣಗಳ ವಿಡಿಯೋವನ್ನು ನೀವೂ ಕಾಣಬಹುದು. 
 

Latest Videos

click me!