ನಿಮ್ಮ ಮನಸ್ಥಿತಿ ಎಂಥದ್ದು ಅಂತ ತೋರ್ಸುತ್ತೆ; ಕೊನೆಗೂ ಟೀಕೆಗಳಿಗೆ ಖಡಕ್ ಉತ್ತರ ಕೊಟ್ಟ ನಿವಿ-ಚಂದು!

Published : Jan 06, 2024, 11:48 AM IST

ಪದೇ ಪದೇ ಬೇಕೆಂದು ನೆಗೆಟಿವ್ ಕಾಮೆಂಟ್ ಮಾಡುವ ಮಂದಿಗೆ ಸಿಂಪಲ್ ಆಗಿ ಉತ್ತರ ಕೊಟ್ಟ ಸೆಲೆಬ್ರಿಟಿ ಜೋಡಿ. ಮೆಚ್ಯೂರಿಟಿ ಮೆಚ್ಚಿಕೊಂಡ ನೆಟ್ಟಿಗರು.

PREV
17
ನಿಮ್ಮ ಮನಸ್ಥಿತಿ ಎಂಥದ್ದು ಅಂತ ತೋರ್ಸುತ್ತೆ; ಕೊನೆಗೂ ಟೀಕೆಗಳಿಗೆ ಖಡಕ್ ಉತ್ತರ ಕೊಟ್ಟ ನಿವಿ-ಚಂದು!

ಕನ್ನಡ ಜನಪ್ರಿಯ Rapper ಚಂದನ್ ಶೆಟ್ಟಿ ಮತ್ತು ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ಸ್‌ಗಳನ್ನು ಎದುರಿಸುತ್ತಾರೆ.

27

ಪದೇ ಪದೇ ನೆಗೆಟಿವ್ ಕಾಮೆಂಟ್ ಮಾಡಿ ಟೀಕೆ ಮಾಡುವವರಿಗೆ ಉತ್ತರ ಕೊಟ್ಟಿದ್ದಾರೆ ಚಂದನ್ ಮತ್ತು ನಿವಿ. ಈ ವಯಸ್ಸಿನಲ್ಲಿ ಇವರಿಗೆ ಇರುವ ಮೆಚ್ಯೂರಿಟಿ ಮೆಚ್ಚಿದ್ದಾರೆ ನೆಟ್ಟಿಗರು. 

37

ಜನರು ಟೀಕೆ ಮಾಡಲಿ ಪರ್ವಾಗಿಲ್ಲ. ಕೆಲವೊಮ್ಮೆ ಟೀಕೆಗಳು ನಮ್ಮ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕ್ರಿಟಿಕ್ಸ್‌ ಹೇಳುವ ಮಾತುಗಳನ್ನು ಕೇಳಿದಾಗ ಅಲ್ಲೇ ಗೊತ್ತಾಗುತ್ತದೆ ಆತ ನಿಜಕ್ಕೂ ಟೀಕೆ ಮಾಡುತ್ತಿದ್ದಾರಾ ಇಲ್ಲ ಉರ್ಕೊಂಡು ಈ ರೀತಿ ಮಾತುಗಳನ್ನು ಹೇಳುತ್ತಿದ್ದಾನ ಅಂತ.  

47

ನಿಜವಾದ ಕ್ರಿಟಿಕ್ ಮಾಡುವ ಟೀಕೆ ಅರ್ಥವಾಗುತ್ತದೆ. ಆತ ಸರಿಯಾಗಿ ಹೇಳುತ್ತಿದ್ದಾನೆ ಅದನ್ನು ಸರಿ ಮಾಡಿಕೊಂಡು ನಾನು ಇಂಪ್ಲಿಮೆಂಟ್ ಮಾಡಿಕೊಳ್ಳಬೇಕು ಅಂತ ಅನಿಸುತ್ತದೆ. 

57

ಚೆನ್ನಾಗಿದ್ದರೂ ಚೆನ್ನಾಗಿಲ್ಲ ಅಂತ ಹೇಳುವವರು ಇದ್ದೇ ಇರುತ್ತಾರೆ  ಅದನ್ನು ತಡೆಯಲು ಸಾಧ್ಯವಿಲ್ಲ ಏಕೆಂದರೆ ಅದು ಅವರ ಗುಣ ಆಗಿರುತ್ತದೆ ಎಂದು ಚಂದನ್ ಖಾಸಗಿ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.

67

ಆರಂಭದಲ್ಲಿ ಟೀಕೆಗಳಿಗೆ ಬೇಸರ ಆಗುತ್ತಿತ್ತು. ಈಗ ಕಾಮೆಂಟ್ಸ್‌ನ ಓಡಲು ಹೋಗುವುದಿಲ್ಲ. ಹೆಲ್ತಿ ಫೀಡ್ ಬ್ಯಾಕ್‌ನ ಒಪ್ಪಿಕೊಳ್ಳಬಹುದು ಆದರೆ ಕೆಲವೊಮ್ಮೆ ಕೆಟ್ಟ ಪದಗಳನ್ನು ಬಳಸುತ್ತಾರೆ. 

77

ಕೆಟ್ಟದಾಗಿ ಕಾಮೆಂಟ್ ಮಾಡುವವರ ಮನಸ್ಥಿತಿ ಹೇಗಿರುತ್ತದೆ ಎಂದು ತೋರಿಸುತ್ತದೆ. ಎಷ್ಟೋಂದು ಪಾಸಿಟಿವ್ ಕಾಮೆಂಟ್ ಮತ್ತು ಲೈಕ್‌ಗಳು ಇರುತ್ತದೆ ಅದರ ಮೇಲೆ ಗಮನ ಕೊಡುವೆ ಎಂದಿದ್ದಾರೆ ನಿವೇದಿತಾ ಗೌಡ. 

Read more Photos on
click me!

Recommended Stories