6 ತಿಂಗಳ ಕಾಲ ವಿದೇಶದಲ್ಲಿ ಬಾಣಂತನ ಮಾಡಿಸಿಕೊಂಡ ಕಿರುತೆರೆ ನಟಿ ಅರ್ಚನಾ; ತಾಯಿಗೆ ಭಾವುಕ ಬೀಳ್ಕೊಡುಗೆ

Published : Jan 05, 2024, 04:03 PM IST

ವಿದೇಶದಲ್ಲಿ ನೆಲೆಸಿರುವ ಕಿರುತೆರೆ ನಟಿ ಅರ್ಚನಾ. ಬಾಣಂತನದ ನಂತರ ತಾಯಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ನಟಿ.

PREV
110
6 ತಿಂಗಳ ಕಾಲ ವಿದೇಶದಲ್ಲಿ ಬಾಣಂತನ ಮಾಡಿಸಿಕೊಂಡ ಕಿರುತೆರೆ ನಟಿ ಅರ್ಚನಾ; ತಾಯಿಗೆ ಭಾವುಕ ಬೀಳ್ಕೊಡುಗೆ

ಕನ್ನಡ ಮತ್ತು ತಮಿಳು ಧಾರಾವಾಹಿಗಳಲ್ಲಿ ನಟಿಸಿರುವ ಅರ್ಚನಾ ಲಕ್ಷ್ಮಿ ನರಸಿಂಹಸ್ವಾಮಿ 6 ತಿಂಗಳ ಕಾಲ ವಿದೇಶದಲ್ಲಿ ಬಾಣಂತನ ಮಾಡಿಸಿಕೊಂಡಿದ್ದಾರೆ.

210

ಬಾಣಂತನ ಮಾಡಿದ ನಂತರ ತಾಯಿ ಭಾರತಕ್ಕೆ ತೆರಳುತ್ತಿದ್ದಾರೆ. 6 ತಿಂಗಳು ಒಟ್ಟಿಗೆ ಇದ್ದು ಈಗ ಕಳುಹಿಸಿಕೊಡಲು ಬೇಸರವಾಗುತ್ತಿದೆ ಎಂದು ಭಾವುಕ ಪೋಸ್ಟ್ ಹಾಕಿದ್ದಾರೆ. 

310

 6 ತಿಂಗಳು ಅಮ್ಮನೊಟ್ಟಿಗೆ ಸಮಯ ಕಳೆದು ಇದ್ದಕ್ಕಿದ್ದಂತೆ ಅವರನ್ನು ಕಳುಹಿಸುವುದಕ್ಕೆ ತುಂಬಾ ಕಷ್ಟವಾಗುತ್ತಿದೆ ಎಂದು ಅರ್ಚನಾ ಬರೆದುಕೊಂಡಿದ್ದಾರೆ.

410

ಸದಾ ಖುಷಿಯಾಗಿರುವ ವ್ಯಕ್ತಿ ಅಮ್ಮ, ನಮ್ಮ ಜೊತೆ ಖುಷಿಯಾಗಿದ್ದರು ಈಗ ಅಷ್ಟೇ ಖುಷಿಯಲ್ಲಿ ಹೊರಡುತ್ತಿದ್ದಾರೆ. ಎಲ್ಲದರಲ್ಲೂ ಪಾಸಿಟಿವ್ ನೋಡುತ್ತಾರೆ.

510

'ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಸದಾ ಹೇಗೆ ಹೊಸ ವಿಚಾರಗಳನ್ನು ಕಲಿಯಬೇಕು ಅಂತ ತೋರಿಸಿಕೊಟ್ಟಿದ್ದಾರೆ. ತುಂಬಾ ಸ್ಮಾರ್ಟ್‌ ಆಗಿ ಡ್ರೆಸ್ ಮಾಡಿಕೊಳ್ಳುತ್ತಾರೆ'

610

 'ಅಲಿಯಾ ಮತ್ತು ಮಗಳನ್ನು ಒಂದೇ ತರ ನೋಡಿಕೊಂಡರು. ಮೊಮ್ಮಗಳ ಮೇಲೆ ಸ್ವಲ್ಪ ಜಾಸ್ತಿ ಕಾಳಜಿ ಮತ್ತು ಪ್ರೀತಿ, ಅದನ್ನು ಒಪ್ಪಿಕೊಳ್ಳಬೇಕು'

710

6 ತಿಂಗಳ ಕಾಲ ಆಕೆಯ ಶ್ರಮವನ್ನು ಮೆಚ್ಚಬೇಕು. ಶೀಘ್ರದಲ್ಲಿ ಆಕೆ ಮತ್ತೊಮ್ಮೆ ಇಲ್ಲಿಗೆ ಬರಲಿ ಎಂದು ವಿಶ್ ಮಾಡುತ್ತೀನಿ. ಸಂಪ್ರದಾಯ ಮತ್ತು ಶಾಸ್ತ್ರಗಳ ಬಗ್ಗೆ ಹೇಳಿಕೊಟ್ಟರು.

810

ಆಕೆ ಆಲ್‌ ರೌಂಡರ್‌ ಆಗಿ ಪ್ರತಿಯೊಂದು ಕೆಲಸವನ್ನು ಮ್ಯಾನೇಜ್ ಮಾಡುತ್ತಿದ್ದರು. ನೀನು ಇರುವಷ್ಟು ಅರ್ಧ ಕೆಲಸ ಮಾಡುವುದು ಹೆಚ್ಚು ಅಮ್ಮ.

910

ಮನೆ ದೇವ್ರು ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿರುವ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ ವೈವಾಜಿಕ ಜೀವನಕ್ಕೆ ಕಾಲಿಟ್ಟ ನಂತರ ವಿದೇಶದಲ್ಲಿ ನೆಲೆಸಿದ್ದಾರೆ.

1010

ವಿದೇಶದಲ್ಲಿದ್ದರೂ ಸಂಪ್ರದಾಯದ ಪ್ರಕಾರ ಅರ್ಚನಾ ಸರಳವಾಗಿ ಸೀಮಂತ ಮಾಡಿಸಿಕೊಂಡಿದ್ದರು, ಅಂದೇ ಮಗುವಿನ ಲಿಂಗ ರಿವೀಲ್ ಮಾಡಿದ್ದರು. ಹೆಣ್ಣು ಮಗು ಎಂದು ತಿಳಿದು ಸಂಭ್ರಮಿಸಿದ್ದರು. 

Read more Photos on
click me!

Recommended Stories