ಮಜಾ ಭಾರತ, ರಾಜಾ ರಾಣಿ ಮತ್ತು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಿರೂಪಣೆ ಮಾಡಿದ ಸೈ ಎನಿಸಿಕೊಂಡಿರುವ ಅನುಪಮಾ ಈಗ ಜಾಕ್‌ಪಾಟ್ ಕಾರ್ಯಕ್ರಮದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ಯಶಸ್ವಿ ನಿರೂಪಕರಿಗೆ ಇರಬೇಕಾದ ಗುಣಗಳು ಏನೆಂದು ಖಾಸಗಿ ಮಾಧ್ಯಮದಲ್ಲಿ ಪ್ರಶ್ನೆ ಮಾಡಿದಾಗ ಅನುಪಮಾ ತುಂಬಾ ಸಿಂಪಲ್ ಮತ್ತು ಕ್ಲಿಯರ್ ಆಗಿ ಉತ್ತರ ಕೊಟ್ಟಿದ್ದಾರೆ.
'ಯಶಸ್ಸಿಗಾಗಿ ಇನ್ನಪಬ್ಬರನ್ನು ಅನುಕರಿಸಬಾರದು. ಸ್ವಂತಿಕೆ, ನೈಜ ಸ್ವಭಾವ ನಿರೂಪಕರಿಗೆ ಬಹಳ ಮುಖ್ಯ. ಸಮರ್ಪಣಾ ಭಾವನೆ ಇರಬೇಕು' ಎಂದು ಅನುಪಮಾ ಹೇಳಿದ್ದಾರೆ.
'ನಿರೂಪಣೆಯಲ್ಲಿ ಪ್ರೇಕ್ಷಕರು ಗುರುತಿಸುವ ತಪ್ಪುಗಳನ್ನು ನಾವು ಸರಿ ಪಡಿಸಿಕೊಳ್ಳಬೇಕು. ಅದನ್ನು ನಾನು ಕೂಡ ಅನುಸರಿಸಿದ್ದೇನೆ' ಎಂದಿದ್ದಾರೆ ಅನುಪಮಾ.
'ಎಲ್ಲರಿಗೂ ಕಲಾವಿದರಾಗುವಾ ಅದೃಷ್ಟ ಇರುವುದಿಲ್ಲ. ಆ ಅದೃಷ್ಟ ನನ್ನ ಪಾಲಿಗೆ ಒಲಿದಿದೆ. ನಿರೂಪಣೆಗಿಂತ ನನಗೆ ನಟನೆ ಬಹಳ ಇಷ್ಟ'
'ಕನ್ನಡ ಸಿನಿಮಾ ಮತ್ತು ಧಾರಾವಾಹಿಗಳಿಂದ ಮುಂದೆ ಉತ್ತಮ ಅವಕಾಶ ಬಂದರೆ ಖಂಡಿತಾ ನಟಿಸುತ್ತೇನೆ. ನನ್ನಲ್ಲಿರುವ ನಟನಾ ಕೌಶಲವನ್ನು ಸುಮ್ಮನೆ ಕೂರಲು ಬಿಡುವುದಿಲ್ಲ' ಎಂದಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋ ಮತ್ತು ಯುಟ್ಯೂಬ್ ಚಾನೆಲ್ ಆರಂಭಿಸಿದ ನಂತರ ಅನುಪಮಾ ಗೌಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ.
Vaishnavi Chandrashekar