ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದುಕೊಂಡ ದಿವ್ಯಾ ಮತ್ತು ಗೋವಿಂದೇ ಗೌಡ.
2019ರಲ್ಲಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇವರ ನಿಶ್ಚಿತಾರ್ಥ ಮಾಡಿಕೊಂಡು, ಅದೇ ವರ್ಷ ಮಾರ್ಚ್ 14ರಂದು ಶೃಂಗೇರಿಯಲ್ಲಿ ಸಪ್ತಪದಿ ತುಳಿದಿದ್ದರು.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸೆಲೆಬ್ರಿಟಿ ಕಪಲ್ ಹಳ್ಳಿ ಸ್ಟೈಲ್ ಮತ್ತು ಪುನೀತ್ ರಾಜ್‌ಕುಮಾರ್ ಫೋಟೋ ಶೂಟ್ ಮಾಡಿಸಿ ಸಂತೋಷದ ವಿಚಾರ ಹಂಚಿಕೊಂಡರು.
ಕೆಲವು ದಿನಗಳ ಹಿಂದೆ ಸಿನಿಮಾ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿ ಸೀಮಂತವೂ ನಡೆದಿತ್ತು. ಅದೇ ದಿನ ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದರು.
ಈಗ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟ್ಟ ಮಕ್ಕಳಿಗೆ ಕೂದಲು ಬೇಕಾಗುತ್ತದೆ ಎಂದು ತಮ್ಮ ಉದ್ದ ಕೂದಲನ್ನು ದಾನ ಮಾಡಿದ್ದಾರೆ.
'ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ತಯಾರಿಸಲು ಕೂದಲು ದಾನ. ಒಂದೊಳ್ಳೆ ಕೆಲಸಕ್ಕೆ ನಾವೆಲ್ಲರೂ ಕೈ ಜೋಡಿಸೋಣ. ಬನ್ನಿ ಅದೆಷ್ಟೋ ಕ್ಯಾನ್ಸರ್ ಪೀಡಿತ ಮಹಿಳೆಯರು ಹಾಗೂ ಮಕ್ಕಳು ತಮ್ಮ ಕೂದಲು ಉದುರುವುದನ್ನು ನೋಡಿಯೇ ಖಿನ್ನತೆಗೆ ಒಳಗಾಗುತ್ತಾರೆ, ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ನೀಡಿ ಅವರ ಮುಖದಲ್ಲಿ ಮಂದಹಾಸ ಮೂಡಿಸೋಣ' ಎಂದು ದಿವ್ಯಾ ಬರೆದುಕೊಂಡಿದ್ದಾರೆ.