'ಕುಲವಧು' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ನಟಿ ದಿಶಾ ಮದನ್ ಈಗ ಸೋಷಿಯಲ್ ಮೀಡಿಯಾ ಮತ್ತು ಸ್ಯಾಂಡಲ್‌ವುಡ್ ಸೆಲೆಬ್ರಿಟಿ.
ಫ್ರೆಂಚ್ ಬಿರಿಯಾನಿ ಮತ್ತು ಹಂಬಲ್ ಪೊಲೀಟಿಷಿಯನ್ ನೋಗರಾಜ್ ಚಿತ್ರದಲ್ಲಿ ದಿಶಾ ನಟಿಸಿದ್ದಾರೆ. ಗರ್ಭಿಣಿ ಇದ್ದಾಗಲೇ ಸಿನಿಮಾ ಚಿತ್ರೀಕರಣ ಮಾಡಿರುವುದು ಇನ್ನೂ ಸ್ಪೆಷಲ್ ಎಂದಿದ್ದಾರೆ.
ಮಾರ್ಚ್ 1, 2022ರಂದು ದಿಶಾ ಮದನ್ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಹೆಣ್ಣು ಮಗುವಿಗೆ ಅವಿರಾ ಎಂದು ಕೂಡ ಹೆಸರು ರಿವೀಲ್ ಮಾಡಿದ್ದಾರೆ.
2016ರಲ್ಲಿ ಉದ್ಯಮಿ ಶಶಾಂಕ್ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ದಿಶಾ ಮದನ್ 2019ರಲ್ಲಿ ಮೊದಲ ಮಗು ವಿವಾನ್‌ಗೆ ಜನ್ಮ ನೀಡಿದ್ದರು.
ಮೊದಲನೇ ಪ್ರೆಗ್ನೆನ್ಸಿ ಸಮಯದಲ್ಲಿ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದರು, ಎರಡನೇ ಪ್ರೆಗ್ನೆನ್ಸಿಯಲ್ಲಿ ಬೋಲ್ಡ್ ಶೂಟ್ ಮಾಡಿಸಿ ಪ್ರತಿ ಪೇಪರ್‌ನಲ್ಲೂ ಹೆಡ್‌ಲೈನಲ್ಲಿದ್ದರು.
2021ರಲ್ಲಿ ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿತ್ತು, ಎಲ್ಲರೂ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರು. ಹೇಗಿತ್ತು ಈ ಸಮಯ ಎಂದು ಫಾಲೋವರ್ಸ್ ಜೊತೆ ಹಂಚಿಕೊಂಡಿದ್ದಾರೆ.