ಸಮುದ್ರದ ಮಧ್ಯದ ಶಾಂಪೇನ್ ಜೊತೆ ತಾಯಿಯ ಬರ್ತ್‌ಡೇ ಸೆಲಬ್ರೆಟ್‌ ಮಾಡಿದ ನಿಯಾ ಶರ್ಮಾI

First Published | Mar 2, 2022, 6:31 PM IST

ಕಿರುತೆರಯ ನಟಿ ನಿಯಾ ಶರ್ಮಾ (Nia Sharma) ತನ್ನ ಪರ್ಫೇಕ್ಟ್‌ ಫಿಗರ್‌ನಿಂದ ಲಕ್ಷಾಂತರ ಯುವಕರ ನಿದ್ರೆಗೆಡಿಸುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಪ್ರತಿದಿನ ತಮ್ಮ ಮತ್ತು ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕೂಲ್ ಲೈಫ್  ನಿಯಾ ಶರ್ಮಾ ಇತ್ತೀಚೆಗಷ್ಟೇ ತಮ್ಮ ತಾಯಿ ಉಷಾ ಶರ್ಮಾ ಅವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಫೋಟೋತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.

ಉಷಾ ಶರ್ಮಾ ನಿಯಾ ಅವರ ತಾಯಿ (Mother) ಎಂದರೆ ನಂಬುವುದು ಕಷ್ಟವಾಗುತ್ತದೆ. ಅವರು ನಟಿಯ ಸಹೋದರಿಯಂತೆ ಕಾಣುತ್ತಾರೆ. ನಿಯಾ ಶರ್ಮಾ ತನ್ನ ತಾಯಿಯ ಹುಟ್ಟುಹಬ್ಬವನ್ನು (Birthday) ಆಚರಿಸಲು ಗೋವಾಕ್ಕೆ  (Goa) ಹೋಗಿದ್ದರು.

ಅಲ್ಲಿ ಸಮುದ್ರದ ಮಧ್ಯದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಸಂಭ್ರಮವನ್ನುಇಮ್ಮಡಿಗೊಳಿಸಲು ನಿಯಾ ಶಾಂಪೇನ್ (Champagne) ಬಾಟಲಿಯನ್ನು ತೆರೆದರು. ತಾಯಿ ಮಗಳು ಇಬ್ಬರೂ ಶಾಂಪೇನ್ ಕುಡಿಯುತ್ತಾ ಸಮುದ್ರದ ಮಧ್ಯದಲ್ಲಿ ಎಂಜಾಯ್‌ ಮಾಡುವುದು ಕಾಣಬಹುದು.

Tap to resize

ಈ ವಿಶೇಷ ಸಂದರ್ಭಕ್ಕಾಗಿ ನಿಯಾ ಶರ್ಮಾ ಸಖತ್‌ ಸೆಕ್ಸಿ ಔಟ್‌ಫಿಟ್‌ (Out Fit) ಆಯ್ಕೆ ಮಾಡಿಕೊಂಡಿದ್ದರು. ನಿಯಾ ಕಪ್ಪು ಬಣ್ಣದ ಬಿಕಿನಿಯಲ್ಲಿ (Bikini) ಕಾಣಿಸಿಕೊಂಡಿದ್ದರು.ಜೊತಗೆ ಕಪ್ಪು ಬಣ್ಣದ ಕನ್ನಡಕ ಹಾಕಿಕೊಂಡು ನಿಯಾ ಇನ್ನಷ್ಟು ಆಕರ್ಷಕವಾಗಿ ಕಾಣುತ್ತಿದ್ದರು.

ಅದೇ ಸಮಯದಲ್ಲಿ, ಅವರ ತಾಯಿ ನ್ಯೂಡ್ ಕಲರ್ ಗೌನ್ ಧರಿಸಿದ್ದರು. ಇದರೊಂದಿಗೆ ಅವರು ಲೈಟ್ ಮೇಕಪ್ ಮತ್ತು ಪಿಂಕ್ ಲಿಪ್ ಸ್ಟಿಕ್ ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಅವರು ತಮ್ಮ ಮಗಳೊಂದಿಗೆ ಸಾಕಷ್ಟು ಪೋಸ್ ನೀಡಿದರು.

ಉಷಾ ಶರ್ಮಾಳನ್ನು ನೋಡಿ ಯಾರೂ ನಿಯಾ ಶರ್ಮಾ ಅವರ ತಾಯಿ ಎಂದು ಹೇಳಲು ಸಾಧ್ಯವಿಲ್ಲ. ಸ್ಟೈಲಿಂಗ್‌ನಿಂದ ಹಿಡಿದು ಫಿಗರ್‌ (Fitness) ಕಾಪಾಡಿಕೊಳ್ಳುವವರೆಗೆ, ಅವರು ಎಲ್ಲದರಲ್ಲೂ ಪರಿಪೂರ್ಣವಾಗಿ ಕಾಣುತ್ತಾರೆ. ಅವರನ್ನು ನೋಡಿದಾಗ ನಿಯಾ ತನ್ನ ತಾಯಿಯಿಂದಲೇ ಫಿಟ್ ಆಗಿರಲು ಪ್ರೇರಣೆ ಪಡೆದಿದ್ದಾರೆ ಅನ್ನಿಸುತ್ತದೆ. 

ನಿಯಾ ಶರ್ಮಾ ತನ್ನ ತಾಯಿಯ ಜೊತೆ ತುಂಬಾ ಕ್ಲೋಸ್‌ (Special Bonding) ಇದ್ದಾರೆ. ಅವರು ತನ್ನ ತಾಯಿಯನ್ನು ತನ್ನ ಬೆಸ್ಟ್‌ ಫ್ರೆಂಡ್‌ (Best Friend) ಎಂದು ಪರಿಗಣಿಸುತ್ತಾರೆ. ನಿಯಾ ಶರ್ಮಾ ಅವರ ಈ ಪೋಸ್ಟ್‌ಗೆ ಅನೇಕ ಸೆಲೆಬ್ರಿಟಿಗಳು ಸಹ ಕಾಮೆಂಟ್ ಮಾಡಿದ್ದಾರೆ. 

ಅರ್ಜುನ್ ಬಿಜಲಾನಿ, ರುಬಿನಾ ದಿಲಾಯಿಕ್, ಶಂತನು ಮಹೇಶ್ವರಿ ಸೇರಿದಂತೆ ಅನೇಕ ಗಣ್ಯರು ನಿಯಾ ಅವರ ತಾಯಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ಫೋಟೋಗಳಿಗೆ ಕೃತಿಕಾ ಸೆಂಗಾರ್ ಕೂಡ ಪ್ರತಿಕ್ರಿಯಿಸಿದ್ದು, 'ಹುಟ್ಟುಹಬ್ಬದ ಶುಭಾಶಯಗಳು.. ನಾನು ಅವರನ್ನು ಆಂಟಿ ಎಂದು ಕರೆಯುವುದಿಲ್ಲ.. ಅವರು ತುಂಬಾ ಸುಂದರವಾಗಿದ್ದಾರೆ' ಎಂದಿದ್ದಾರೆ. 

ನಿಯಾ ಅವರ ಅಭಿಮಾನಿಗಳು (Fans) ಅವರು ತಮ್ಮ ತಾಯಿ ಎಂದು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ .ಕೆಲಸದ ಮುಂಭಾಗದಲ್ಲಿ, ನಿಯಾ ಶರ್ಮಾ ಕೊನೆಯದಾಗಿ 'ಘುಂಟ್' ಮತ್ತು 'ಫೂಂಕ್ ಲೆ' ನಂತಹ ಎರಡು ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡರು. ಇದಲ್ಲದೆ, ಅವರು ಅತಿಥಿಯಾಗಿ ಬಿಗ್ ಬಾಸ್ 15 ರ ಭಾಗವಾದರು.

Latest Videos

click me!