ಇದು ಕನ್ನಡ ಬಿಗ್ ಬಾಸ್ ವಿನ್ನರ್ ಹಳೆ ಫೋಟೊ! ಯಾರು ಅಂತ ಗೊತ್ತಾಯ್ತಾ? ಗೆಸ್ ಮಾಡಿ

Published : Nov 27, 2024, 11:19 AM ISTUpdated : Nov 27, 2024, 12:17 PM IST

ಕನ್ನಡ ಬಿಗ್ ಬಾಸ್ ಸೀಸನ್ 9 ರ ವಿನ್ನರ್ ರೂಪೇಶ್ ಶೆಟ್ಟಿ ಹಳೆ ಫೋಟೊಗಳು ವೈರಲ್ ಆಗುತ್ತಿದ್ದು, ಹೇಗಿದ್ದೋರು ಹೇಗಾದ್ರು, ಎಷ್ಟೊಂದು ಬದಲಾವಣೇನಾ? ಎಂದು ಕೇಳುವಷ್ಟು ವಿಭಿನ್ನವಾಗಿ ಕಾಣಿಸ್ತಿದ್ದಾರೆ.   

PREV
18
ಇದು ಕನ್ನಡ ಬಿಗ್ ಬಾಸ್ ವಿನ್ನರ್ ಹಳೆ ಫೋಟೊ! ಯಾರು ಅಂತ ಗೊತ್ತಾಯ್ತಾ? ಗೆಸ್ ಮಾಡಿ

ವಿಜೆ, ಆರ್ ಜೆ, ನಟ, ನಿರ್ದೇಶಕರಾಗಿ ಗುರುತಿಸಿಕೊಂಡು ಕನ್ನಡದ ಬಿಗ್ ಬಾಸ್ ಮೂಲಕ ಕನ್ನಡಿಗರ ಮನೆ ಮನೆ ತಲುಪಿದ ನಟ ಅಂದ್ರೆ ಅದು ರೂಪೇಶ್ ಶೆಟ್ಟಿ (Roopesh Shetty). ಮಂಗಳೂರಿಗಷ್ಟೇ ಗೊತ್ತಿದ್ದ ನಟ ಬಿಗ್ ಬಾಸ್ ಕನ್ನಡದ ಮೂಲಕ ಕರುನಾಡಿನ ಮೂಲೆ ಮೂಲೆಯನ್ನು ತಲುಪಿದರು. 
 

28

ಕನ್ನಡದ ಮೊದಲ ಬಿಗ್ ಬಾಸ್ ಓಟಿಟಿಯಲ್ಲಿ (Bigg Boss OTT) ಭಾಗವಹಿಸಿ ಅದರಲ್ಲಿ ಗೆದ್ದು, ನಂತರ ಬಿಗ್ ಬಾಸ್ ಸೀಸನ್ 9 ಕ್ಕೆ ಎಂಟ್ರಿ ಕೊಟ್ಟ ರೂಪೇಶ್ ಶೆಟ್ಟಿ ಅಲ್ಲಿ ತಮ್ಮ ಆಟ, ಮನರಂಜನೆ ಮೂಲಕ ಪ್ರಬಲ ಸ್ಪರ್ಧಿಯಾಗಿ ಗುರುತಿಸಿ, ಬಿಗ್ ಬಾಸ್ ವಿನ್ನರ್ ಪಟ್ಟ ಮುಡಿಗೇರಿಸಿಕೊಂಡರು. 
 

38

ಇದೀಗ ರೂಪೇಶ್ ಶೆಟ್ಟಿ ಹಳೆಯ ಫೋಟೋಗಳನ್ನು ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದು. ಹೆಂಗಿದ್ದೆ ಹೆಂಗಾದೆ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಈ ಹಳೆ ಫೋಟೊ ನೋಡಿದ್ರೆ ಇವರೇನಾ ರೂಪೇಶ್ ಶೆಟ್ಟಿ ಅನಿಸುತ್ತೆ, ಅಷ್ಟು ಬದಲಾಗಿದ್ದಾರೆ. 
 

48

ಆರಂಭದಲ್ಲಿ ಸಣ್ಣಕೆ, ಸಪೂರ ದೇಹಸಿರಿಯನ್ನು ಹೊಂದಿದ್ದ ರೂಪೇಶ್ ಶೆಟ್ಟಿ. ಗಾಗಲ್ಸ್ ಹಾಕಿ, ಸ್ಪೈಕ್ ಹೇರ್ ಸ್ಟೈಲ್ ಮಾಡ್ಕೊಂಡು, ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ರು, ಈವಾಗಿನ ರೂಪೇಶ್ ಶೆಟ್ರನ್ನ ನೋಡಿದ್ರೆ ನಿಜವಾಗಿಯೂ ಇದು ಅವರೇನಾ ಎನ್ನುವಷ್ಟು ವಿಭಿನ್ನತೆ ಕಾಣ ಸಿಗುತ್ತೆ. 
 

58

ರೂಪೇಶ್ ಶೆಟ್ಟಿ ಹಂಚಿಕೊಂಡ ಈ ವಿಡೀಯೋಗ ಸಾನ್ಯಾ ಅಯ್ಯರ್ (Saanya Iyer) ಫೈರ್ ಇಮೋಜಿ ಕಾಮೆಂಟ್ ಮಾಡಿದ್ದಾರೆ, ಇನ್ನು ನಿರೂಪಕ ನಿರಂಜನ್ ದೇಶಪಾಂಡೆ ಚಿಂದಿ ಟ್ರಾನ್ಸ್’ಫಾರ್ಮೇಶನ್ ಎಂದಿದ್ದಾರೆ. ಹೇಗಿದ್ದವ ಹೇಗಾದ ಗೊತ್ತಾ ನಮ್ಮ ಪ್ರೀತಿಯ ರಾಕ್ ಸ್ಟಾರ್, ಝೀರೋ ಟು ಹೀರೋ ಎಂದೆಲ್ಲಾ ಜನ ಕಾಮೆಂಟ್ ಮಾಡಿದ್ದಾರೆ. 
 

68

ಗಡಿನಾಡು ಆಗಿರುವ ಕಾಸರಗೋಡಿನ ಉಪ್ಪಳದಲ್ಲಿ ಜನಿಸಿರುವ ರೂಪೇಶ್ ಶೆಟ್ಟಿ ಮೊದಲಿಗೆ ಯೂಟ್ಯೂಬರ್ ಆಗಿ ಗುರುತಿಸಿಕೊಂಡರು. ಯೂಟ್ಯೂಬಲ್ಲಿ ಕಾಮಿಡಿ ವಿಡೀಯೋಗಳನ್ನು ಶೇರ್ ಮಾಡುತ್ತಿದ್ದ ಆರ್ ಜೆ ಆಗಿ, ವಿಜೆಯಾಗಿ ಗುರುತಿಸಿಕೊಂಡರು. 
 

78

ತುಳು ಸಿನಿಮಾ ದಿಬ್ಬಣದಲ್ಲಿ ಪೋಷಕ ನಟರಾಗಿ ನಟನೆಗೆ ಎಂಟ್ರಿ ಕೊಟ್ಟ ರೂಪೇಶ್, ಕ್ರೀಂ ಸಿನಿಮಾ ಮೂಲಕ ನಾಯಕರಾದರು. ಡೇಂಜರ್ ಝೋನ್ ಎನ್ನುವ ಕನ್ನಡ ಸಿನಿಮಾದಲ್ಲೂ ನಟಿಸಿದ್ದರು. ಆದರೆ ಇವರ ಅದೃಷ್ಟ ಬದಲಾಯಿಸಿದ್ದು, ತುಳು ಚಿತ್ರ ಗಿರ್ಗಿಟ್. ಇದಾದ ನಂತ್ರ ಹಲವು ಹಿಟ್ ಸಿನಿಮಾಗಳನ್ನು ನೀಡಿ ನಟ, ನಿರ್ದೇಶಕರಾಗಿ ಮಿಂಚುತ್ತಿದ್ದಾರೆ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ. 
 

88

ಬಳಿಕ ಬಿಗ್ ಬಾಸ್ ಓಟಿಟಿ, ಬಿಗ್ ಬಾಸ್ ಸೀಸನ್ 9ಯ (Bigg Boss Season 9) ವಿನ್ನರ್ ಆಗುವ ಮೂಲಕ ಮತ್ತೆ ಸದ್ದು ಮಾಡಿದರು. ಯೋಗಿ ಬಾಬು ಜೊತೆ ರೂಪೇಶ್ ಶೆಟ್ಟಿ ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲ ತುಳುವಿನಲ್ಲಿ ಅದ್ವಿತಿ ಶೆಟ್ಟಿ ಜೊತೆ ಹೊಸ ಸಿನಿಮಾ ಕೂಡ ಮಾಡ್ತಿದ್ದಾರೆ ರೂಪೇಶ್. 
 

Read more Photos on
click me!

Recommended Stories