ಕನ್ನಡ ಕಿರುತೆರೆಯ ಜನಪ್ರಿಯ ಸ್ಟಾರ್ ಹಾಗೂ ನಿರೂಪಕಿ ಜಾನ್ವಿ ಮೊದಲ ಸಲ ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್ ಮಾಡುವ ಕಿಡಿಗೇಡಿಗಳ ಮೇಲೆ ಗರಂ ಆಗಿದ್ದಾರೆ.
28
ಪಬ್ಲಿಕ್ ಲೈಫ್‌ಗೆ ಬಂದ ಮೇಲೆ ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್ ನಾವು ಎದುರಿಸಲೇ ಬೇಕು. ನಾನು ಸಕಲೇಶಪುರದಲ್ಲಿ ವಾಸ ಮಾಡುವಾಗಲೂ ಗಾಸಿಪ್ ಇತ್ತು, ಗೋವಾಗೆ ಹೋಗಿದ್ದಾರೆ ಅಂತ ನಿಜ ಹೇಳಬೇಕು ಅಂದ್ರೆ ನಾನು ಗೋವಾ ನೋಡಿದ್ದೇ ಮಗ ಆದ ಮೇಲೆ.
38
ಗಾಸಿಪ್‌ಗಳನ್ನು ನೋಡಿ ಶಾಕ್ ಆಗುತ್ತಿತ್ತು...ನಾವು ಇಲ್ಲೇ ಇರುತ್ತೀವಿ ಯಾರು ಹುಟ್ಟಿಸುತ್ತಾರೆ ಅಂತ. ನಾವು ಕೆಲಸದ ಮೇಲೆ ಹೆಚ್ಚಿಗೆ ಓಡಾಡುತ್ತೀವಿ ಅಲ್ಲದೆ ಮಾಡರ್ನ್ ಡ್ರೆಸ್ ಹಾಕುತ್ತೀವಿ...ಜನರ ಕಣ್ಣಿಗೆ ಹೆಚ್ಚಿಗೆ ಬೀಳುವುದೇ ಕೆಟ್ಟ ವಿಚಾರಗಳ ಮೇಲೆ.
48
ಸೋಷಿಯಲ್ ಮೀಡಿಯಾವನ್ನು ಒಳ್ಳೆ ರೀತಿಯಲ್ಲಿ ಬಳಸಿಕೊಂಡು ಅನೇಕರು ಜೀವನ ಕಟ್ಟುಕೊಂಡಿದ್ದಾರೆ..ಅನೇಕರಿಗೆ ಜನಪ್ರಿಯತೆ, ಕಮರ್ಷಿಯಲ್ಸ್ ಅಲ್ಲದೆ ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡಿದ್ದಾರೆ.
58
ಸಣ್ಣ ಪುಟ್ಟ ಟ್ರೋಲ್ ನೋಡಿದಾಗ ನನಗೆ ನಗು ಬರುತ್ತದೆ ಆದರೆ ಮಿತಿ ಮೀರಿ ಟ್ರೋಲ್ ಮಾಡಿದಾಗ ಇವರಿಗೆ ಮಾಡಲು ಕೆಲಸ ಇಲ್ವಾ? ಮನೆಯಲ್ಲಿ ಅಕ್ಕ ತಂಗಿ ಇಲ್ಲಾ? ಎಷ್ಟೋಂದು ಪೇಜ್‌ಗಳು ಇರುವ ಕಾರಣ ಇದಕ್ಕೆ ಬ್ರೇಕ್ ಹಾಕೋಕೆ ಆಗಲ್ವಾ ಅನಿಸುತ್ತದೆ.
68
ಆಗ ಬೇಸರ ಆಗಿರುವುದು ನಿಜ. ನನ್ನ ವಿಚಾರಕ್ಕೆ ಟ್ರೋಲ್ ಮಾಡಿದಾಗಲೂ ನನಗೆ ಬೇಸರ ಆಗಿದೆ. ನಮ್ಮ ಜೀವನದ ಬಗ್ಗೆ ಏನೂ ಐಡಿಯಾ ಇರುವುದಿಲ್ಲ ಎಲ್ಲೋ ಮೂಲೆಯಲ್ಲಿ ಕುಳಿತುಕೊಂಡು ಕಾಮೆಂಟ್ ಮಾಡುತ್ತಾರೆ.
78
ಯುಟ್ಯೂಬ್‌ಗಳಲ್ಲಿ ಸಂದರ್ಶನ ಕೊಟ್ಟಿರುವುದಿಲ್ಲ ಆದರೂ ನಾನು ಹೇಳಿದೆ ಎಂದು ಸುದ್ದಿ ಮಾಡುತ್ತಾರೆ. ನನ್ನ ಮನಸ್ಸಿಗೆ ಬೆಲೆ ಕೊಡುವುದು ಜಾಸ್ತಿ...ಹೀಗಾಗಿ ಯಾರೇ ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ.
88
ಕಾಮೆಂಟ್ಸ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು...ರಾತ್ರಿ ನೆಮ್ಮದಿಯಾಗಿ ನಿದ್ರೆ ಮಾಡುತ್ತೀನಿ. ಸೋಷಿಯಲ್ ಮೀಡಿಯಾದಿಂದ ಒಳ್ಳೆ ಕೆಲಸಕ್ಕೆ ಉಪಯೋಗಿಸಿಕೊಳ್ಳಿ.