ರೇಣುಕಾ -ಯಲ್ಲಮ್ಮ ಧಾರಾವಾಹಿಯಲ್ಲಿ ರೇಣುಕೆಯಾಗಿ ಗಟ್ಟಿಮೇಳದ ನಟಿ ಮಹತಿ

First Published May 29, 2024, 5:50 PM IST

ಗಟ್ಟಿಮೇಳ ಸೀರಿಯಲ್ ನಲ್ಲಿ ನಾಯಕಿ ಅಮೂಲ್ಯಳ ಸಣ್ಣ ತಂಗಿ ಅಂಜು ಆಗಿ ನಟಿಸಿದ್ದ ನಟಿ ಮಹತಿ ವೈಷ್ಣವಿ, ಈಗ ರೇಣುಕಾ ಯಲ್ಲಮ್ಮ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. 
 

ಝೀಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ನಾಯಕಿಯ ಮುದ್ದಿನ ಪುಟ್ಟ ತಂಗಿ ಅಂಜಲಿ ಪಾತ್ರಕ್ಕೆ ಜೀವ ತುಂಬಿದ ನಟಿ ಮಹತಿ ವೈಷ್ಣವಿ (Mahathi Vaishnavi Bhat), ಬಾಲ ಕಲಾವಿದೆಯಾಗಿ ನಟಿಸಿದ ಮಹತಿ ಈಗ ನಾಯಕಿಯಾಗಿದ್ದಾರೆ. 

ಡ್ರಾಮಾ ಜೂನಿಯರ್ಸ್ (Drama Juniors) ಮೂಲಕ ಕನ್ನಡ ಕಿರುತೆರೆಗೆ ಪರಿಚಿತರಾದ ಮಹತಿ ವೈಷ್ಣವಿ, ಡ್ರಾಮಾ ಜೂನಿಯರ್ಸ್ ಸೀಸನ್ ಒಂದರಲ್ಲಿ ಅದ್ಭುತವಾಗಿ ಅಭಿನಯಿಸಿ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಳಿಕ ಸಿಂಧೂರ ಧಾರಾವಾಹಿಯಲ್ಲಿ ಅಂಜಲಿಯಾಗಿ ಕಿರುತೆರೆಗೆ ಎಂಟ್ರಿಕೊಟ್ಟ ಮಹತಿ, ನಂತರ ಗಟ್ಟಿಮೇಳದ ಅಂಜಲಿಯಾಗಿ ಜನಪ್ರಿಯತೆ ಗಳಿಸಿದರು. 

ಸೀರಿಯಲ್ ಮಾತ್ರವಲ್ಲ ಮಹತಿ ಸಿನಿಮಾಗಳಲ್ಲಿಯೂ ಮಿಂಚಿದ್ದಾರೆ. ನಾವು ಎಳೆಯರು ನಾವು ಗೆಳೆಯರು ಎನ್ನುವ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ಮಹತಿ ನಟಿಸಿದ್ದರು, ಇದಲ್ಲದೇ ಇತ್ತೀಚೆಗಷ್ಟೇ ಬಿಡುಗಡೆಯಾದ ತತ್ಸಮ ತದ್ಭವ ಸಿನಿಮಾದಲ್ಲಿ ಮೇಘನಾ ರಾಜ್ (Meghana Raj) ಮಗಳ ಪಾತ್ರದಲ್ಲೂ ಮಹತಿ ಅದ್ಭುತ ಅಭಿನಯ ನೀಡಿದ್ದಾರೆ. 

ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ" ಧಾರಾವಾಹಿಯಲ್ಲಿ ರೇಣುಕೆ ಪಾತ್ರದಲ್ಲಿ ಮಹತಿ ವೈಷ್ಣವಿ ನಟಿಸುತ್ತಿದ್ದಾರೆ. ಉಧೋ ಉಧೋ ರೇಣುಕಾ ಯಲ್ಲಮ್ಮರ ಬಾಲ್ಯ ಮುಗಿದಿದ್ದು, ಈಗ ಯೌವ್ವನಾವಸ್ಥೆಯಲ್ಲಿ ರೇಣುಕೆ ಮತ್ತು ಯಲ್ಲಮ್ಮನ ಕಥೆ ಆರಂಭವಾಗಿದ್ದು, ಇದರಲ್ಲಿ ಬೆಳೆದು ನಿಂತ ರೇಣುಕೆಯಾಗಿ ಮಹತಿ ಅಭಿನಯಿಸುತ್ತಿದ್ದಾರೆ.  
 

ಈ ಭಕ್ತಿಪ್ರಧಾನ ಸೀರಿಯಲ್ ನಲ್ಲಿ ರೇಣುಕೆ ಪಾತ್ರಕ್ಕಾಗಿ ಮಹತಿ ಬಹಳಷ್ಟು ಕಲಿತಿದ್ದಾರಂತೆ. ಸಕಲ ವಿದ್ಯೆಗಳನ್ನು ಬಲ್ಲ ಮಹಾರಾಣಿಯಾಗಿರೋದರಿಂದ ಮಹತಿ ಕುದುರೆ ಸವಾರಿ, ಬಿಲ್ಲುಗಾರಿಕೆ ಎಲ್ಲವನ್ನೂ ಸ್ವಲ್ಪ ಸ್ವಲ್ಪ ಕಲಿತ್ತಿದ್ದಾರೆ. ಪಾತ್ರಕ್ಕಾಗಿ ಎಲ್ಲವನ್ನೂ ಕಲಿಯೋಕೆ ಸಿದ್ಧ ಎನ್ನುತ್ತಾರೆ ಈ ನಟಿ. ಅಷ್ಟೇ ಅಲ್ಲ, ಈ ಪಾತ್ರಕ್ಕಾಗಿ ತೂಕವನ್ನು ಸಹ ಇಳಿಸಿಕೊಂಡಿದ್ದಾರೆ ಇವರು. 
 

ಈಗಾಗಲೇ ಹೊಸ ಅಧ್ಯಾಯದ ಚಿತ್ರೀಕರಣ ಶುರುವಾಗಿದ್ದು, ರೇಣುಕೆಯಾಗಿ ಮಹತಿ ಬಣ್ಣ ಹಚ್ಚಿದರೆ, ಯಲ್ಲಮ್ಮನ ಪಾತ್ರದಲ್ಲಿ ಅನನ್ಯ ಮೈಸೂರ್ (Ananya Mysore) ನಟಿಸುತ್ತಿದ್ದಾರೆ. ಅಮೋಘ ವಿನ್ಯಾಸದ ಸೆಟ್‌ ಮತ್ತು ಗ್ರಾಫಿಕ್ಸ್‌ನಿಂದ ಪ್ರಸಾರವಾಗುತ್ತಿರುವ ಧಾರಾವಾಹಿಯ ಪ್ರೋಮೋಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.  ಲೋಕ ಕಲ್ಯಾಣಕ್ಕಾಗಿ ಹಾಗೂ ದುಷ್ಟ ಸಂಹಾರಕ್ಕಾಗಿ ದೇವಿ ಅಂಶದ ಎರಡು ಶಕ್ತಿಗಳು ಒಂದಾಗಿ ಮುಂಬರುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾರೆ ? ಎಂಬುದು ಈ ಧಾರಾವಾಹಿಯ ಕಥೆಯಾಗಿದೆ. 
 

ಇನ್ನು ಮಹತಿ ವಿದ್ಯಾಭ್ಯಾಸದ ಬಗ್ಗೆ ಹೇಳೋದಾದರೆ ಗಟ್ಟಿಮೇಳ ಸೀರಿಯಲ್ ಸಮಯದಲ್ಲಿ ಶೂಟಿಂಗ್ ಜೊತೆಗೆ SSLC ಓದುವನ್ನು ಮಾಡುತ್ತಿದ್ದ ಇವರು 95% ಮಾರ್ಕ್ ಪಡೆದಿದ್ದರು. ಇದೀಗ ಪಿಯುಸಿಯಲ್ಲೂ ಸಹ  98% ಅಂಕಗಳನ್ನು ಪಡೆದಿದ್ದಾರೆ. ಗಟ್ಟಿಮೇಳದ ಸೀರಿಯಲ್ ಮುಗಿದ ಬಳಿಕ CET ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಇದೀಗ CET ಉತ್ತಮವಾಗಿ ಬರೆದಿದ್ದು, ಇದೀಗ ಮತ್ತೆ ಧಾರಾವಾಹಿಯಲ್ಲಿ ನಟಿಸೋದಕ್ಕೆ ರೆಡಿಯಾಗಿದ್ದಾರೆ ಮಹತಿ ವೈಷ್ಣವಿ. 

Latest Videos

click me!