ಕೇರಳ ದೈವ ತೆಯ್ಯಂ ದರ್ಶನ ಪಡೆದ ನಿರೂಪಕಿ ಅನುಶ್ರೀ ಮತ್ತು ನಟಿ ಸಂಗೀತಾ ಶೃಂಗೇರಿ

Published : Jan 31, 2023, 04:57 PM ISTUpdated : Jan 31, 2023, 04:58 PM IST

ಕಾಸರಗೋಡು ಮಲ್ಲಮೂಲೆ ದೈವ ತೆಯ್ಯಂ ಹರಿಕೆ ನೀಡಿದ ಕನ್ನಡದ ನಿರೂಪಕಿ ಅನುಶ್ರೀ ಮತ್ತು ನಟಿ ಸಂಗೀತಾ ಶೃಂಗೇರಿ...

PREV
15
ಕೇರಳ ದೈವ ತೆಯ್ಯಂ ದರ್ಶನ ಪಡೆದ ನಿರೂಪಕಿ ಅನುಶ್ರೀ ಮತ್ತು ನಟಿ ಸಂಗೀತಾ ಶೃಂಗೇರಿ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ಸಿನಿಮಾ ಸೆಲೆಬ್ರಿಟಿಗಳು ಹೆಚ್ಚಾಗಿ ದೈವ ಸೇವೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. 

25

ಕನ್ನಡ ಜನಪ್ರಿಯ ನಿರೂಪಕಿ ಮತ್ತು ನಟಿ ಸಂಗೀತಾ ಶೃಂಗೇರಿ ಕಾಸರಗೋಡಿನ ಮಲ್ಲಮೂಲೆ ದೈವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. 

35

ಸಾಮಾಜಿಕ ಜಾಲತಾಣದಲ್ಲಿ ಅನುಶ್ರೀ ಮತ್ತು ಸಂಗೀತಾ ಪೋಟೋ ಹಂಚಿಕೊಂಡಿದ್ದಾರೆ. ಮಲ್ಲಮೂಲೆಯಲ್ಲಿದ್ದ ಎರಡು ದಿನವೂ ಅದ್ಭುತವಾಗಿತ್ತು, ದೈವ ಪೂಜೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಈ ಅನುಭವನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. 

45

ನಾನು ತುಳುನಾಡಿನ ಅಪರೂಪದ ದೈವ ಕೋಲ ಮತ್ತು ಕೇರಳದ ತೆಯ್ಯಂನ ನೋಡಿ ಕಣ್ಣು ತುಂಬಿಕೊಂಡಿರುವೆ. ಇದಕ್ಕೆ ಸಹಾಯ ಮಾಡಿದ ಕಿರಣ್ ರಾಜ್‌ ಮತ್ತು ಭರತ್ ರಾಜ್‌ಗೆ ಧನ್ಯವಾದಗಳು ಎಂದು ಸಂಗೀತಾ ಬರೆದುಕೊಂಡಿದ್ದಾರೆ.

55

ಸುಂದರ ಹಾಗೂ ದೈವೀಕ ಕ್ಷಣಗಳು ಕಾಸರಗೋಡು ಮಲ್ಲಮೂಲೆ ದೈವಸ್ಥಾನದಲ್ಲಿ ಎಂದು ನಿರೂಪಕಿ ಅನುಶ್ರೀ ಬರೆದುಕೊಂಡಿದ್ದಾರೆ. ಅನುಶ್ರೀ ಮೂಲತಃ ಮಂಗಳೂರಿನವರಾಗಿದ್ದು ಅಲ್ಲಿನ ದೈವ ದರ್ಶನ ಕೂಡ ಮಾಡಿದ್ದಾರೆ.  

Read more Photos on
click me!

Recommended Stories