SHINIKA : ದೀಪಿಕಾ ದಾಸ್ -ಶೈನ್ ಶೆಟ್ಟಿ ಮದುವೆ ಬಗ್ಗೆ ಸಿಗ್ತು ಸುಳಿವು

Published : Jan 31, 2023, 04:37 PM IST

ಬಿಗ್​ಬಾಸ್​ ಸೀಸನ್​ 7ರಲ್ಲಿ ಸಖತ್ ಫೇಮಸ್ ಆದ ಜೋಡಿಗಳು ಎಂದರೆ ದೀಪಿಕಾ ದಾಸ್ ಶೈನ್ ಶೆಟ್ಟಿ. ಇಬ್ಬರೂ ಉತ್ತಮ ಸ್ನೇಹಿತರು ಎಂದು ಹೇಳುತ್ತಿದ್ದರೂ ಅಭಿಮಾನಿಗಳು ಮಾತ್ರ ಇಬ್ಬರ ಮದ್ವೆ ಯಾವಾಗ ಆಗುತ್ತೆ ಎಂದು ಕಾಯ್ತಾನೇ ಇದ್ದಾರೆ. ಇಬ್ಬರು ಜೊತೆಯಾಗಿ ಫೋಟೋ ಹಂಚಿಕೊಂಡ್ರೆ ಸದ್ಯದಲ್ಲಿ ಮದ್ವೆ ಸುದ್ದಿ ಕೊಡ್ತಿದ್ದಾರೆ ಅಂತಿದ್ದಾರೆ ಜನ. 

PREV
18
SHINIKA : ದೀಪಿಕಾ ದಾಸ್ -ಶೈನ್ ಶೆಟ್ಟಿ ಮದುವೆ ಬಗ್ಗೆ ಸಿಗ್ತು ಸುಳಿವು

ನಾಗಿಣಿ ಸೀರಿಯಲ್​ ಮೂಲಕ ಜನಪ್ರಿಯತೆ ಪಡೆದ ನಟಿ ದೀಪಿಕಾ ದಾಸ್​​​ ಬಿಗ್​ಬಾಸ್​ ಸೀಸನ್​ 7ರಲ್ಲಿ (Bigg Boss Season 7) ಟಾಪ್​ 4 ಸ್ಪರ್ಧಿಯಾಗಿ ಹೊರ ಹೊಮ್ಮಿದ್ದರು. ಈ ಸೀಸನ್​ನಲ್ಲಿ ನಟಿ ದೀಪಿಕಾ ದಾಸ್​ ಹೆಸರು ನಟ ಶೈನ್​ ಶೆಟ್ಟಿ ಜೊತೆ ಥಳುಕು ಹಾಕಿಕೊಂಡಿತ್ತು. ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. 

28

ಶೈನ್ ಶೆಟ್ಟಿ (Shine Shetty) ಬಿಗ್ ಬಾಗ್ ಸೀಸನ್ 7ರಲ್ಲಿ ವಿನ್ನರ್ ಆಗಿ ಹೊರ ಹೊಮ್ಮಿದ್ದರು. ಬಳಿಕ ಅವರು ಸಿನಿಮಾ, ಜಾಹೀರಾತು ಮಾಡೆಲಿಂಗ್ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಬ್ಯುಸಿಯಾಗಿದ್ದಾರೆ. ಇವರ ಮದ್ವೆ ಸುದ್ದಿಯಂತೂ ಪ್ರತಿಬಾರಿಯೂ ಸುದ್ದಿಯಾಗುತ್ತಿದೆ, ಆದರೆ ಶೆಟ್ರು ಮಾತ್ರ ಯಾವುದಕ್ಕೂ ಉತ್ತರ ನೀಡದೆ ಸುಮ್ಮನೆ ಇದ್ದಾರೆ. 

38

ದೀಪಿಕಾ ದಾಸ್ (Deepika Das) ಕನ್ನಡ ಬಿಗ್​ ಬಾಸ್ ಸೀಸನ್ 9ರಲ್ಲಿ ಮತ್ತೆ ಸ್ಪರ್ಧಿಸಿ ಫೈನಲ್​ಗೆ ತಲುಪಿದ್ದರು, ಆದರೆ ಅವರು ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಅವರು ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಮಾತ್ರ ಅವರು ಈ ವರ್ಷ ಮದುವೆಯಾಗ್ತಾರೆ ಎಂದು ನೆಟ್ಟಿಗರು ಸದಾ ಗುಲ್ಲೆಬ್ಬಿಸುತ್ತಿದ್ದಾರೆ. 

48

ಮದುವೆ ಬಗ್ಗೆ ಹೆಚ್ಚೇನೂ ಮಾತನಾಡದ ದೀಪಿಕಾ ದಾಸ್ ಒಂದೆಡೆ ಮದುವೆಯಾಗಲು ಇನ್ನೂ ನಾಲ್ಕು ವರ್ಷ ಬೇಕು. ಮದುವೆಯಾಗಲು ಇಷ್ಟವಾಗೋ ಹುಡುಗ ಬೇಕು. ಆ ಹುಡುಗ ಸುಳ್ಳು ಹೇಳಬಾರದು. ಒಳ್ಳೆ ಮನಸಿರಬೇಕು ಎಂದು ಹೇಳಿದ್ದರು. ಆದರೆ ಅಭಿಮಾನಿಗಳು ಮಾತ್ರ ಈ ವರ್ಷವೇ ಅವರ ಮದುವೆ ಮಾಡುವ ಉತ್ಸಾಹದಲ್ಲಿದ್ದಾರೆ.

58

ಟ್ರಾವೆಲ್ ಪ್ರಿಯರಾದ ದೀಪಿಕಾ ದಾಸ್ ತನ್ನ ಸಂಗಾತಿಯಾಗುವವರಿಗೆ ಸಹ ಟ್ರಿಪ್ ಹೋಗುವ ಮನಸಿರಬೇಕು. ಯಾವಾಗಲೂ ನನ್ನ ಜೊತೆ ಟ್ರಿಪ್ ಮಾಡಲು ಸಿದ್ಧರಿರಬೇಕು ಎಂದಿದ್ದಾರೆ. ಅದಕ್ಕೂ ಕಾಲೆಳೆದ ನೆಟ್ಟಿಗರು ಅಂತೂ ಮದುವೆಯಾದ ನಂತರ ಶೈನ್ ಶೆಟ್ಟಿ ನಮ್ಮ ಕೈಗೆ ಸಿಗಲ್ಲ, ಸುತ್ತಾಡೋಕಿರುತ್ತಲ್ಲ ಎಂದಿದ್ದಾರೆ.

68

ಇಬ್ಬರೂ ಫ್ಯಾಷನ್ ಶೋ (Fashion Show) ಒಂದರಲ್ಲಿ, ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಅದು ಬಿಟ್ಟು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಒಬ್ಬರೊಬ್ಬರ ಬಗ್ಗೆ ಹೇಳಿಕೊಂಡಿದ್ದು ಸಹ ಕಡಿಮೆಯೇ. ಆದರೆ ಜನ ಮಾತ್ರ ಇಬ್ಬರೂ ಮದ್ವೆಯಾಗೋದು ಖಂಡಿತಾ ಎನ್ನುತ್ತಲೇ ಇದ್ದಾರೆ. ಅದಕ್ಕೆ ಸರಿಯಾಗಿ ಈ ಜೋಡಿ ಇದೀಗ ಜೊತೆಯಾಗಿ ಫೋಟೋ ಹಂಚಿಕೊಂಡಿದ್ದು, ಮದುವೆಯಾಗುವ ಸೂಚನೆ ನೀಡಿದ್ದಾರೆ.

78

ದೀಪಿಕಾ ದಾಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎರಡು ಫೋಟೋ ಶೇರ್ ಮಾಡಿದ್ದು, ಮೊದಲ ಫೋಟೋದಲ್ಲಿ ಶೈನ್ ಮುಖ ಕಾಣದಂತೆ ತಲೆ ಬಗ್ಗಿಸಿದ್ದಾರೆ. ಅದಕ್ಕೆ ದೀಪಿಕಾ Guess who?? Swipe left to know…. Surprise ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಎರಡನೇ ಫೋಟೋದನ್ನು ಶೆಟ್ರು ಕಣ್ಣು ಮಿಟುಕಿಸುತ್ತಾ ಫೋಟೋಗೆ ಫೋಸ್ ನೀಡಿದ್ದಾರೆ.

88

ಫೋಟೋ ಶೇರ್ ಮಾಡಿದ್ದೇ ತಡ ಅಭಿಮಾನಿಗಳು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಬೇಗನೆ ನೀವಿಬ್ರೂ ಮದ್ವೆ ಆಗಿ, ಶೈನಿಕ ಇದು ಅಭಿಮಾನಿಗಳ ಪ್ರೀತಿಯ ಪ್ರತೀಕ, ನಿಮ್ಮ ಕ್ಯೂಟ್ ಪೇರ್ ನೋಡೋಕೆ ಚೆಂದ , ಬೇಗ ಮದ್ವೆಯಾಗಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅದೇನೇ ಇದ್ರೂ ಈ ಜೋಡಿಯ ಮದುವೆ ನೋಡೋಕೆ ಕಿರುತೆರೆ ಅಭಿಮಾನಿಗಳು ಕಾಯುತ್ತಿರುವುದು ಮಾತ್ರ ಸುಳ್ಳಲ್ಲ.

Read more Photos on
click me!

Recommended Stories