ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್‌ ಅದ್ಧೂರಿ ಸೀಮಂತ; ಫೋಟೋ ವೈರಲ್

First Published | Oct 17, 2023, 10:50 AM IST

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್ ಮತ್ತು ಫಣಿ ವರ್ಮ. ಸೀಮಂತ ಫೋಟೋ ವೈರಲ್....

ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ತೇಜಸ್ವಿನಿ ಪ್ರಕಾಶ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಮಿಂಚಿರುವ ತೇಜಸ್ವಿನಿ ಪ್ರಕಾಶ್ ಸೀಮಂತ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. 

Tap to resize

ಹಸಿರು ಮತ್ತು ಹಳದಿ ಕಾಂಬಿನೇಷನ್‌ ರೇಶ್ಮೆ ಸೀರೆಯಲ್ಲಿ ತೇಜಸ್ವಿನಿ ಮಿಂಚಿದ್ದಾರೆ. ಪತಿ ಫಣಿ ವರ್ಮ ಜುಬ್ಬ ಪೈಜಾಮದಲ್ಲಿ ಕಾಣಿಸಿಕೊಂಡಿದ್ದಾರೆ.

'ಸೀಮಂತ ಕಾರ್ಯಕ್ರಮ ಮಾಡುವುದು ನಮ್ಮ ಪ್ರೆಗ್ನೆನ್ಸಿ ಮತ್ತು ಮದರ್‌ಹುಡ್ ಬ್ಯೂಟಿಫುಲ್ ಜರ್ನಿಯನ್ನು ಎಂಜಾಯ್ ಮಾಡಲು. ಮಗು ಮತ್ತು ತಾಯಿ ಆರೋಗ್ಯವಾಗಿರಲು ಆಶೀರ್ವಾದ ಮಾಡಲು' ಎಂದು ತೇಜಸ್ವಿನಿ ಬರೆದುಕೊಂಡಿದ್ದಾರೆ.

2022ರಲ್ಲಿ ಮಾರ್ಚ್ ತಿಂಗಳಿನಲ್ಲಿ ತೇಜಸ್ವಿನಿ ಮತ್ತು ಫನಿ ವರ್ಮ ಅದ್ಧೂರಿಯಾಗಿ ಮದುವೆ ಮಾಡಿಕೊಂಡರು. ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರು ಆಗಮಿಸಿದ್ದರು.

ಹೆಣ್ಣಾಗಲಿ ಗಂಡಾಗಲಿ ಒಟ್ಟಾರೆ ಮಗು ಆರೋಗ್ಯವಾಗಿರಲಿ ಎಂದು ಅನೇಕರು ಕಾಮೆಂಟ್ ಮೂಲಕ ವಿಶ್ ಮಾಡಿದ್ದಾರೆ. ಅಲ್ಲದೆ ಗುಡ್ ನ್ಯೂಸ್ ಕೊಡುವ ದಿನ ಯಾವತ್ತು ಎಂದು ಪ್ರಶ್ನಿಸಿದ್ದಾರೆ.

Latest Videos

click me!