PHOTOS: ಸೀರಿಯಲ್‌ TRP ಬಂದಿದ್ದೇ ಬಂದಿದ್ದು, ಸಿಂಗಾಪುರದಲ್ಲಿ ಗುರುತು ಸಿಗದಂಥ ಅವತಾರದಲ್ಲಿ ಮೇಘಾ ಶೆಟ್ಟಿ!

Published : May 01, 2025, 04:05 PM ISTUpdated : May 02, 2025, 10:39 AM IST

ಆಗಾಗ ಫೋಟೋಶೂಟ್‌ಗಳ ಮೂಲಕ ಸೌಂಡ್‌ ಮಾಡ್ತಿರುವ ನಟಿ ಮೇಘಾ ಶೆಟ್ಟಿ ಅವರು ಈಗ ಸಿಂಗಾಪುರ ಪ್ರವಾಸದಲ್ಲಿದ್ದಾರೆ. ಅಲ್ಲಿನ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

PREV
18
PHOTOS: ಸೀರಿಯಲ್‌ TRP ಬಂದಿದ್ದೇ ಬಂದಿದ್ದು, ಸಿಂಗಾಪುರದಲ್ಲಿ ಗುರುತು ಸಿಗದಂಥ ಅವತಾರದಲ್ಲಿ ಮೇಘಾ ಶೆಟ್ಟಿ!

ಮೇಘಾ ಶೆಟ್ಟಿ ಅವರು ʼಮುದ್ದು ಸೊಸೆʼ ಧಾರಾವಾಹಿಯ ನಿರ್ಮಾಣ ಮಾಡಿದ್ದಾರೆ. ಈ ಧಾರಾವಾಹಿಗೆ ಒಳ್ಳೆಯ ಟಿಆರ್‌ಪಿ ಕೂಡ ಬರುತ್ತಿದೆ. ಈ ಖುಷಿಯ ನಡುವೆ ಅವರು ವಿದೇಶಿ ಪ್ರವಾಸ ಮಾಡಿದ್ದಾರೆ. 
 

28

ʼಜೊತೆ ಜೊತೆಯಲಿʼ ಧಾರಾವಾಹಿ ದೊಡ್ಡ ಹಿಟ್‌ ಆದಬಳಿಕ ಮೇಘಾ ಶೆಟ್ಟಿ ಅವರು ಸಿನಿಮಾದತ್ತ ಮುಖ ಮಾಡಿದರು. ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ಅವರು ನಟಿಸಿದರು.
 

38

ಸಿನಿಮಾದಲ್ಲಿ ಮೇಘಾ ಶೆಟ್ಟಿ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ಅವರಿಗೆ ಇಲ್ಲಿ ಇನ್ನೂ ಹೇಳಿಕೊಳ್ಳುವ ಯಶಸ್ಸು ಸಿಕ್ಕಿಲ್ಲ.
 

48

ಲಾಕ್‌ಡೌನ್‌ ಸಮಯದಲ್ಲಿ ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ್ದ ಅವರೀಗ ಸಿನಿಮಾ ಕಡೆಗೆ ಸಂಪೂರ್ಣ ಗಮನ ಕೊಟ್ಟಿದ್ದಾರೆ. ಇನ್ನು ಸಣ್ಣಗಾಗಿ ಸಖತ್‌ ಆಗಿ ಕಾಣಿಸ್ತಿದ್ದಾರೆ.

58

ಮೇಘಾ ಶೆಟ್ಟಿ ಅವರು ಸಿಂಗಾಪುರದಲ್ಲಿ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಬಾಲಿವುಡ್‌ ನಟಿಯಂತೆ ಅವತಾರ ತಾಳಿ ಫೋಟೋಗೆ ಪೋಸ್‌ ನೀಡಿದ್ದಾರೆ. 
 

68

ನಟಿ ಮೇಘಾ ಶೆಟ್ಟಿ ಅವರು ಈಗಾಗಲೇ ನಟ ಧನ್ವೀರ್‌, ಡಾರ್ಲಿಂಗ್‌ ಕೃಷ್ಣ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ತಮಿಳು ಚಿತ್ರರಂಗಕ್ಕೂ ಕೂಡ ಅವರು ಕಾಲಿಟ್ಟಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

78

ಮೇಘಾ ಶೆಟ್ಟಿ ಅವರು ಸಿಂಗಾಪುರದ ಸುಂದರ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಸುಂದರ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

88

ಉಳಿದ ನಟಿಯರಿಗೆ ಹೋಲಿಕೆ ಮಾಡಿದರೆ ನಟಿ ಮೇಘಾ ಶೆಟ್ಟಿ ಅವರು ಅಷ್ಟಾಗಿ ಟ್ರಿಪ್‌ ಮಾಡೋದಿಲ್ಲ. ಅಂದಹಾಗೆ ವಿದೇಶದ ಡಿಫರೆಂಟ್‌ ಫುಡ್‌ ಸವಿದಿದ್ದಾರೆ. 

Read more Photos on
click me!

Recommended Stories