ಕೋಲ್ಡ್‌ಪ್ಲೇ ನಿಮಗೆ ಗೊತ್ತೇ ಇದೆ ಅಲ್ವಾ? ಇದೇ ವರ್ಷ ಜನವರಿಯಲ್ಲಿ ಭಾರತದಲ್ಲಿ ಕಿಚ್ಚೆಬ್ಬಿಸಿದ್ದ ಶೋ ಇದಾಗಿತ್ತು. ತಮ್ಮ ಲೈವ್ ಶೋಗಳ ಮೂಲಕವೇ ಪ್ರಪಂಚದಾದ್ಯಂತ ಜನಪ್ರಿಯತೆ ಪಡೆದಿದೆ ಈ ಗ್ರೂಪ್. ಈ ಬಾಂಡ್‌ನಲ್ಲಿ ಕ್ರಿಸ್ ಮಾರ್ಟಿನ್ (ಪಿಯಾನೋ), ಜಾನಿ ಬಕ್‌ಲ್ಯಾಂಡ್ (ಗಿಟಾರ್), ಗೈ ಬೆರ್ರಿಮನ್ (ಬಾಸ್), ವಿಲ್ ಚಾಂಪಿಯನ್ (ಡ್ರಮ್ಸ್, ತಾಳವಾದ್ಯ) ಇದ್ದಾರೆ. ಕ್ರಿಸ್ ಮಾರ್ಟಿನ್ ಈ ಬಾಂಡ್‌ನ ಸಿಂಗರ್ ಆಗಿದ್ದಾರೆ.