ಕನ್ನಡ ಕಿರುತೆರೆಯಲ್ಲಿ ತಮ್ಮ ಮುಗ್ಧ ಅಭಿನಯದ ಮೂಲಕವೇ ಜನಪ್ರಿಯತೆ ಪಡೆದ ನಟಿ ಲಾವಣ್ಯ ಭಾರಧ್ವಜ್. ಸದ್ಯ ತೆಲುಗು ಕಿರುತೆರೆಯಲ್ಲಿ ನಟಿಸುತ್ತಿದ್ದರೆ. ಆದರೆ ಇದೀಗ ಗುಡ್ ನ್ಯೂಸ್ ಕೊಟ್ಟು ಸೀರಿಯಲ್ ನಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದೆ.
ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ನಟಿ ಲಾವಣ್ಯ ಭಾರಧ್ವಜ್. ‘ರಾಜಾ ರಾಣಿ’, ‘ಸಂಘರ್ಷ’, ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ತಮ್ಮ ಅಭಿನಯದ ರಸದೌತಣವನ್ನು ಸೀರಿಯಲ್ ಪ್ರೇಮಿಗಳಿಗೆ ಉಣ ಬಡಿಸಿದ್ದಾರೆ ಲಾವಣ್ಯ.
26
ಶ್ರೀರಸ್ತು ಶುಭಮಸ್ತು ಮೂಲಕ ಮನಗೆದ್ದ ಚೆಲುವೆ
ಲಾವಣ್ಯ ಭಾರಧ್ವಜ್ ‘‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಪೂರ್ಣಿ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಆ ಮುಗ್ಧ ಪಾತ್ರವನ್ನು, ಪೂರ್ಣಿ ಪಾತ್ರದ ಭಾವನಾತ್ಮಕ ಕ್ಷಣಗಳನ್ನು, ಪೂರ್ಣಿ ಮತ್ತು ಅವಿ ಜೋಡಿಯನ್ನು, ಪೂರ್ಣಿ ಮತ್ತು ಮಾವನ ಸುಂದರವಾದ ಸಂಬಂಧವನ್ನು ಧಾರಾವಾಹಿಯಲ್ಲಿ ಅದ್ಭುತವಾಗಿ ಚಿತ್ರಿಸಿದ್ದರು.
36
ತೆಲುಗಿನಲ್ಲಿ ನಟಿಸುತ್ತಿದ್ದಾರೆ ಲಾವಣ್ಯ
‘‘ಶ್ರೀರಸ್ತು ಶುಭಮಸ್ತು’ ಮುಕ್ತಾಯಗೊಂಡ ಬಳಿಕ ಲಾವಣ್ಯ ಭಾರಧ್ವಜ್ ತೆಲುಗಿನ ‘ಇಲ್ಲುಇಲ್ಲಲು ಪಿಲ್ಲಲು’ ಧಾರಾವಾಹಿಯಲ್ಲಿ ಪ್ರೇಮಾ ಪಾತ್ರದಲ್ಲಿ ನಟಿಸುತ್ತಿದ್ದರು. ಈ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರು ಲಾವಣ್ಯ. ಇದೀಗ ಧಾರಾವಾಹಿಯಿಂದ ಲಾವಣ್ಯ ಹೊರಬಂದಿದ್ದಾರೆ ಎನ್ನುವ ಸುದ್ದಿ ಇದೆ.
ಸೋಶಿಯಲ್ ಮೀಡಿಯಾದಲ್ಲಿ ಲಾವಣ್ಯ ಸ್ಟಾರ್ ಮಾ ವಾಹಿನಿಯ ಇಲ್ಲುಇಲ್ಲಲು ಪಿಲ್ಲಲು’ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಇದಕ್ಕೆ ಕಾರಣ ಲಾವಣ್ಯ ಗರ್ಭಿಣಿ ಎನ್ನುವ ಸುದ್ದಿ ಇದೆ. ಆದರೆ ಈ ಬಗ್ಗೆ ಲಾವಣ್ಯ ಆಗಲಿ ಶಶಿ ಹೆಗ್ಡೆ ಇನ್ನೂ ಕೂಡ ಕನ್ಫರ್ಮ್ ಮಾಡಿಲ್ಲ.
56
ಲಾವಣ್ಯ -ಶಶಿ ಹೆಗ್ಡೆ
ಶಶಿ ಮತ್ತು ಲಾವಣ್ಯ ಇಬ್ಬರೂ ರಾಜಾ ರಾಣಿ ಸೀರಿಯಲ್ ನಲ್ಲಿ ಅಣ್ಣ ತಂಗಿಯಾಗಿ ನಟಿಸುತ್ತಿದ್ದ ಸಮಯದಲ್ಲಿ ಲವ್ವಲ್ಲಿ ಬಿದ್ದಿದ್ದರು. ಆರಂಭದಲ್ಲಿ ಶಶಿ ಹೆಗ್ಡೆಯನ್ನು ಅಣ್ಣ ಎಂದೇ ಕರೆಯುತ್ತಿದ್ದ ಲಾವಣ್ಯ, ಬಳಿಕ ಲವ್ ಮಾಡೀ, ನಂತರ ಪೋಷಕರ ಒಪ್ಪಿಗೆ ಪಡೆದು 2022 ರಲ್ಲಿ ಇಬ್ಬರೂ ಮದುವೆನೂ ಆದ್ರು. ಇದೀಗ ನಾಲ್ಕನೇ ವರ್ಷದ ಸಂಭ್ರಮದಲ್ಲಿದ್ದಾರೆ ಜೋಡಿ.
66
ನಾಲ್ಕು ವರ್ಷ ಡೇಟಿಂಗ್ ಮಾಡಿದ ಜೋಡಿ
ಈ ಜೋಡಿ 4 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದು ಮತ್ತು ಮದುವೆಯಾಗಿ ಸಹ ನಾಲ್ಕು ವರ್ಷ ಪೂರ್ಣಗೊಳಿಸಿರುವ ಈ ಜೋಡಿ ಇದೀಗ ಪೋಷಕರಾಗಿ ಭಡ್ತಿ ಪಡೆಯುವ ಸಂಭ್ರಮದಲ್ಲಿದ್ದಾರೆ ಎನ್ನಲಾಗುತ್ತಿದ್ದು, ಈ ಸುದ್ದಿಯನ್ನು ಆದಷ್ಟು ಬೇಗ ಶಶಿ ಹೆಗ್ಡೆ -ಲಾವಣ್ಯ ರಿವೀಲ್ ಮಾಡಬೇಕಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.