'ರಾಧಾ ರಮಣ' ಕಾವ್ಯಾ ಗೌಡ ಪ್ರೆಗ್ನೆಂಟ್; ವಿದೇಶಕ್ಕೆ ಹಾರಿದ ನಟಿ, ಬಂಪ್ ಫೋಟೋ ವೈರಲ್

Published : Dec 02, 2023, 12:12 PM IST

ಎರಡನೇ ವಿವಾಹ ವಾರ್ಷಿಕೋತ್ಸವದಂದು ಗುಡ್ ನ್ಯೂಸ್‌ ರಿವೀಲ್ ಮಾಡಿದ ಕಾವ್ಯಾ ಗೌಡ.  ನಾವು ಮೊದಲೇ ಗೆಸ್‌ ಮಾಡಿದ್ದೆ ಎಂದ ನೆಟ್ಟಿಗರು.....

PREV
17
'ರಾಧಾ ರಮಣ' ಕಾವ್ಯಾ ಗೌಡ ಪ್ರೆಗ್ನೆಂಟ್; ವಿದೇಶಕ್ಕೆ ಹಾರಿದ ನಟಿ, ಬಂಪ್ ಫೋಟೋ ವೈರಲ್

ಕನ್ನಡ ಖ್ಯಾತ ಕಿರುತೆರೆ ನಟಿ ಕಾವ್ಯಾ ಗೌಡ ತಾಯಿಯಾಗುತ್ತಿರುವ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೋ ಜೊತೆ ಹಂಚಿಕೊಂಡಿದ್ದಾರೆ.

27

'ಇದುವರೆಗೂ ನಾವು ಮುಚ್ಚಿಟ್ಟಿದ ಬೆಸ್ಟ್‌ ಸೀಕ್ರೆಟ್‌ ಇದು. ನಮ್ಮೆಲ್ಲಾ ಆಪ್ತರ ಜೊತೆ ಹಂಚಿಕೊಳ್ಳಲು ಇಚ್ಚಿಸುತ್ತೀನಿ....ನಮ್ಮ ಕಂದಮ್ಮ 2024ರಲ್ಲಿ ಆಗಮಿಸಲಿದ್ದಾರೆ'

37

 'ನನ್ನ ಜೀವನ ಹೊಸ ಜರ್ನಿ ಆರಂಭಿಸಲು ಕಾಯುತ್ತಿರುವೆ. ನನ್ನ ಪ್ರೀತಿಯ ಅಕ್ಷರ S. ಎರಡನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಬೆಟರ್ ಹಾಫ್ (ಪತಿ)'

47

ಕಳೆದ 2 ವರ್ಷಗಳಲ್ಲಿ ನಾವು ತುಂಬಾ ಹಂಚಿಕೊಂಡಿದ್ದೀವಿ. ದಿನದಿಂದ ದಿನಕ್ಕೆ ನಿಮ್ಮ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿರುವ ರೀತಿ ನೋಡುತ್ತಿರುವೆ. ತುಂಬಾ ಕೇರ್ ಮಾಡುತ್ತೀರಾ ಮತ್ತು ಮೆಚ್ಯೂರ್ ಆಗಿರುತ್ತೀರಿ'

57

ನೀವು ಎಷ್ಟು ಮುಖ್ಯ ಎಂದು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನನ್ನ ಸಣ್ಣ ಪುಟ್ಟ ಇಷ್ಟಗಳನ್ನು ನೀವು ತಲೆಯಲ್ಲಿ ಇಟ್ಟುಕೊಂಡಿರುವುದು ನನಗೆ ಖುಷಿ ಕೊಡುತ್ತದೆ.

67

ನಾನು ಅಂದುಕೊಂಡಿದಕ್ಕಿಂತ ಹೆಚ್ಚಾಗಿ ನನ್ನ ಹೃದಯ ನಿಮ್ಮನ್ನು ಪ್ರೀತಿಸುತ್ತದೆ. ಜೀವನದಲ್ಲಿ ನಿಮ್ಮನ್ನು ಬಿಟ್ಟು ಬೇರೆ ಯಾವುದೂ ನನಗೆ ಮುಖ್ಯವಲ್ಲ.

77

ಸಾಕಷ್ಟು ಏರಿಳಿತಗಳನ್ನು ನೋಡಿ ನಾವು ಗಟ್ಟಿಯಾಗಿ ಬೆಳೆಯುತ್ತಿದ್ದೀವಿ. ಜೀವನದಲ್ಲಿ ಏನೇ ಒಳ್ಳೆಯದಾದರೂ ಅದಕ್ಕೊಂದು ಕಾರಣ ಇರುತ್ತದೆ. ಕೈ ಹಿಡಿದು ಜೊತೆಯಾಗಿ ಜೀವನ ನಡೆಸಲು ಕಾಯುತ್ತಿರವೆ ' ಎಂದು ಕಾವ್ಯ ಗೌಡ ಬರೆದುಕೊಂಡಿದ್ದಾರೆ. 

Read more Photos on
click me!

Recommended Stories