ಬ್ಲ್ಯಾಕ್ ನೆಟ್ಟೆಡ್ ತುಂಡುಡುಗೆ ಧರಿಸಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ಗಟ್ಟಿಮೇಳ ನಟಿ

First Published | Nov 30, 2023, 5:26 PM IST

ಗಟ್ಟಿಮೇಳ ಸೀರಿಯಲ್ ನಲ್ಲಿ ಆರತಿ ಪಾತ್ರ ನಿರ್ವಹಿಸುತ್ತಿರುವ ಆರತಿ ಪಡುಬಿದ್ರಿಯ ಬೋಲ್ಡ್ ಅವತಾರ ನೋಡಿ, ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ಬ್ಲ್ಯಾಕ್ ಡ್ರೆಸ್ ನಲ್ಲಿ ಸಖತ್ತಾಗಿ ಮಿಂಚುತ್ತಿದ್ದಾರೆ ನಟಿ. 
 

ಗಟ್ಟಿಮೇಳ ಸೀರಿಯಲ್‌ನಲ್ಲಿ ಅಕ್ಕ ಆರತಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಆರತಿ ಪಡುಬಿದ್ರಿ (Arathi Padubidri). ಇವರದ್ದು ಸೀರಿಯಲ್‌ನಲ್ಲಿ ತುಂಬಾ ಸಿಂಪಲ್ ಆಗಿರುವ, ಸಾಧು ಸ್ವಭಾವದ ಜೊತೆಗೆ ಯಾವಾಗಲೂ ಸೀರೆ ಉಡುವಂತಹ ಪಾತ್ರ. ಆದರೆ ನಿಜ ಜೀವನದಲ್ಲಿ ಇವರು ಸಖತ್ ಸ್ಟೈಲಿಶ್. 
 

ಇತ್ತೀಚಿಗೆ ಇವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಹರಿಯಬಿಟ್ಟಿರುವ ಫೋಟೋ ನೋಡಿ ಪಡ್ಡೆ ಹುಡುಗರ ನಿದ್ದೆ ಕೆಟ್ಟೋಗಿದೆ ಅಂತೆ. ಯಾಕೆಂದರೆ ನಟಿ ಆರತಿ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಕಪ್ಪು ಬಣ್ಣದ ನೆಟ್ಟೆಡ್ ತುಂಡುಡುಗೆ ಧರಿಸಿದ್ದು, ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. 
 

Tap to resize

ಯಾವುದೋ ಬೀಚ್ ನಲ್ಲಿ ಬಂಡೆ ಕಲ್ಲುಗಳ ಮೇಲೆ ಕಾಲನ್ನು ಇಟ್ಟು ಒರಗಿ ನಿಂತಿರುವ ಆರತಿ, ಬಿಕಿನಿ ಧರಿಸಿ, ಅದರ ಮೇಲೆ ಕಪ್ಪು ಬಣ್ಣದ ನೆಟ್ಟೆಡ್ ಜಾಕೆಟ್ ಧರಿಸಿದ್ದಾರೆ. ಪೂರ್ತಿ ಟ್ರಾನ್ಸಪರೆಂಟ್ ಆಗಿ ಕಾಣುತ್ತಿರುವ ಈ ಬೋಲ್ಡ್ ಡ್ರೆಸ್ಸಲ್ಲಿ (bold dress) ನಟಿ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. 
 

ತುಂಬಾನೆ ಹಾಟ್ ಮತ್ತು ಸ್ಟನ್ನಿಂಗ್ (hot and stunning) ಆಗಿ ಕಾಣುತ್ತಿದ್ದೀರಿ ಮೇಡಂ ಎಂದು ಕೆಲವರು ಕಾಮೆಂಟ್ ಮಾಡಿದ್ರೆ ಮತ್ತೆ ಕೆಲವರು ಬೋಲ್ಡ್ ಆಗಿ ಕಾಣುತ್ತೀರಿ ಎಂದು ಹೇಳಿದ್ದಾರೆ. 
 

ಬ್ಲ್ಯಾಕ್ ಡ್ರೆಸ್ ನಲ್ಲಿ (black dress) ನಿಜಕ್ಕೂ ವಾವ್ ಆಗಿ ಕಾಣಿಸುತ್ತೀರಿ, ನೀವು ನಂಬರ್ 1 ಬ್ಯೂಟಿ ಎಂದು ನೆಟ್ಟಿಗರು ತಮ್ಮ ನೆಚ್ಚಿನ ನಟಿಯ ಸೌಂದರ್ಯದ ಗುಣಗಾನ ಮಾಡಿದ್ದಾರೆ. ಜೊತೆಗೆ ಬೆಂಕಿ ಹತ್ತಿಸಿದ್ದೀರಿ ಎಂದು ಸಹ ಕಾಮೆಂಟ್ ಮಾಡಿದ್ದಾರೆ. 
 

ಇನ್ನು ಆರತಿ ಬಗ್ಗೆ ಹೇಳೋದಾದ್ರೆ ನಟನೆ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಬೆಳೆಸಿರುವ ಆರತಿ ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್ (physiotherapy) ಅಂದ್ರೆ ವೈದ್ಯೆ. ಜೊತೆಗೆ ಮಾಡೆಲಿಂಗ್ ಕೂಡ ಮಾಡುತ್ತಾರೆ ಈ ಚೆಲುವೆ. ಅಲ್ಲಿಂದಲೇ ನಟನೆಯತ್ತ ಒಲವು ಮೂಡಿತು ಇವರಿಗೆ. 

ಆರತಿ ಈ ಮೊದಲು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ ಹೂಮಳೆ ಸೀರಿಯಲ್ ನಲ್ಲಿ ನಾಯಕ ಯಧುವೀರ್ ಅಕ್ಕನಾಗಿ ನಟಿಸಿದ್ದರು. ಅಷ್ಟೇ ಅಲ್ಲ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ (dance reality show) ನಟಿಸಿದ್ದಾರೆ. ಸದ್ಯ ಗಟ್ಟಿಮೇಳ ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದಾರೆ. 
 

Latest Videos

click me!