Kannada Actress's Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಕಾವ್ಯಾ ಗೌಡ!

Suvarna News   | Asianet News
Published : Dec 03, 2021, 01:13 PM ISTUpdated : Dec 03, 2021, 01:31 PM IST

ವೈವಾಹಿಕ ಜೀವನಕ್ಕೆ ಕಾಲಿಟ್ಟ 'ರಾಧಾ ರಮಣ' ಮತ್ತು 'ಗಾಂಧಾರಿ' ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ ಮತ್ತು ಸೋಮಶೇಖರ್. ಸೋಷಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿರುವ ಫೋಟೋಗಳಿವು..... 

PREV
17
Kannada Actress's Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಕಾವ್ಯಾ ಗೌಡ!

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಕಾವ್ಯಾ ಗೌಡ (Kavya Gowda) ಮತ್ತು ಉದ್ಯಮಿ ಸೋಮಶೇಖರ್‌ (Somashekar) ಅವರೊಂದಿಗೆ ಡಿಸೆಂಬರ್ 2ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

27

ನವೆಂಬರ್ 29ರಂದು ಮದುವೆ ಸಂಭ್ರಮ ಶುರುವಾಗಿದ್ದು, ಎಲ್ಲವೂ ಪ್ಲಾನ್ ಮಾಡಿದಂತೆ ಬಿಗ್ ಫ್ಯಾಟ್ ವೆಡ್ಡಿಂಗ್ (Big fat Indian Wedding) ಎಂದಿದ್ದಾರೆ. 

37

ಮೊದಲು ಬ್ಯಾಚುಲರ್ ಪಾರ್ಟಿ, ಸಂಗೀತ, ಮೆಹೆಂದಿ, ನಿಶ್ಚಿತಾರ್ಥ(Engagement), ಅರಿಶಿಣ ಶಾಸ್ತ್ರ, ಆರತಕ್ಷತೆ ಮತ್ತು ಮುಹೂರ್ತ. ಹೀಗೆ 5 ದಿನಗಳ ಸಂಭ್ರಮ ಇದಾಗಿತ್ತು. 

47

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಕಾವ್ಯಾ ಗೌಡ, ಮದುವೆಯ ಪ್ರತಿ ಕ್ಷಣಗಳನ್ನೂ ಅಪ್ಲೋಡ್ ಮಾಡುತ್ತಿದ್ದಾರೆ. ದೀಪಕ್ ವಿಜಯ್ ಫೋಟೋ ಸೆರೆ ಹಿಡಿದಿರುವುದು. 

57

ಸೋಮಶೇಖರ್ ಅವರು ಮಾಡಿಸುತ್ತಿರುವ ಈ ಮದುವೆಗೆ ಖ್ಯಾತ ಈವೆಂಟ್ ಪ್ಲಾನರ್ (Event Planner) ಧ್ರುವ ಹೂವಿನ ಅಲಂಕಾರ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಮದುವೆ ಆಗಿದ್ದಾರೆ. 

67

ಪ್ರತಿ ದಿನವೂ ಕಾವ್ಯಾ ಡಿಸೈನರ್ ಉಡುಪು ಧರಿಸಿದ್ದಾರೆ. ಹಾಗೇ ಖ್ಯಾತ ಮೇಕಪ್ ಆರ್ಟಿಸ್ಟ್‌ಗಳು ಮೇಕಪ್ ಮಾಡಿದ್ದಾರೆ. ಪತಿ ಸೋಮಶೇಖರ್‌ ಜೊತೆ Twinning ಮಾಡಿದ್ದಾರೆ. 

77

ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆ ಗಣ್ಯರು ಮದುವೆಗೆ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ.

Read more Photos on
click me!

Recommended Stories