ಕೇಂದ್ರ ಸಚಿವೆ ಹಾಗೂ ನಟಿ ಸ್ಮೃತಿ ಇರಾನಿ ಅವರು ಇತ್ತೀಚೆಗೆ ಕಪಿಲ್ ಶರ್ಮಾಅವರ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ, ಸ್ಮೃತಿ ಇರಾನಿ ಶೂಟಿಂಗ್ ಮಾಡದೆ ಕೋಪದಿಂದ ಅಲ್ಲಿಂದ ಹೊರಟು ಹೋದ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಸ್ಮೃತಿ ಇರಾನಿ ತಮ್ಮ ಪುಸ್ತಕದ ಪ್ರಚಾರಕ್ಕೆ ಸಂಬಂಧಿಸಿದಂತೆ ಕಪಿಲ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಬೇಕಿತ್ತು . ಆದರೆ ಈಗ ಅವರ ಎಪಿಸೋಡ್ ಸದ್ಯಕ್ಕೆ ರದ್ದುಗೊಳಿಸಲಾಗಿದೆ.
Smriti Irani
ಸ್ಮೃತಿ ಇರಾನಿ ಶೂಟಿಂಗ್‌ಗಾಗಿ ಸೆಟ್‌ಗೆ ಬಂದಾಗ, ಗೇಟ್‌ನಲ್ಲಿದ್ದ ಗಾರ್ಡ್ ಅವರನ್ನು ಗುರುತಿಸಲಿಲ್ಲ. ಸ್ಮೃತಿ ಇರಾನಿ ಅವರ ಚಾಲಕನನ್ನು ಸಿಬ್ಬಂದಿ ತಡೆದು, ಒಳಗೆ ಹೋಗಲು ಅನುಮತಿ ನೀಡಲು ನಿರಾಕರಿಸಿದರು. ಈ ವೇಳೆ ಚಾಲಕ ಮತ್ತು ಗೇಟ್‌ಕೀಪರ್ ನಡುವೆ ಸಾಕಷ್ಟು ವಾಗ್ವಾದ ನಡೆದರೂ, ಸಮಸ್ಯೆ ಬಗೆಹರಿಯಲಿಲ್ಲ. ಇದಾದ ಬಳಿಕ ಸಿಟ್ಟಿಗೆದ್ದ ಸ್ಮೃತಿ ಇರಾನಿ ಶೂಟಿಂಗ್ ಮಾಡದೆ ಅಲ್ಲಿಂದ ವಾಪಸಾದರು.
Smriti Irani
ಸ್ಮೃತಿ ಅವರು ತಮ್ಮ ಲಾಲ್ ಸಲಾಮ್ ಪುಸ್ತಕದ ಪ್ರಚಾರಕ್ಕಾಗಿ ಕಪಿಲ್ ಶರ್ಮ ಶೋಗೆ ಆಗಮಿಸಿದ್ದರು. ಸ್ಮೃತಿ ಇರಾನಿ ಕಪಿಲ್ ಶರ್ಮಾ ಅವರ ಸೆಟ್‌ಗೆ ಚಾಲಕ ಮತ್ತು ಇಬ್ಬರೊಂದಿಗೆ ಶೂಟಿಂಗ್‌ಗೆ ಆಗಮಿಸಿದ್ದರು.
ಚಿತ್ರೀಕರಣಕ್ಕೆ ಕರೆದಿರುವುದಾಗಿ ಹೇಳಿದಾಗ, ನನಗೆ ಅಂತಹ ಯಾವುದೇ ಮಾಹಿತಿ ಇಲ್ಲ, ಆದ್ದರಿಂದ ಅವರನ್ನು ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಉತ್ತರಿಸಿದರು. ಅಷ್ಟರಲ್ಲಿ ಫುಡ್ ಡೆಲಿವರಿ ಮಾಡುವವರು ಅಲ್ಲಿಗೆ ಬಂದಾಗ ಗಾರ್ಡ್ ತಡೆಯಲೇ ಇಲ್ಲ. ಸೀದಾ ಒಳಗೆ ಹೋದರು. ಇದನ್ನು ನೋಡಿದ ಸ್ಮೃತಿ ಇರಾನಿ ತಾಳ್ಮೆ ಕಳೆದು ಕೊಂಡು, ಮರಳಿದರು.
smriti irani
ಈ ಘಟನೆಯ ನಂತರ ಸಿಬ್ಬಂದಿ ತುಂಬಾ ಭಯಗೊಂಡಿದ್ದಾರೆ. ಈ ವಿಷಯ ತಿಳಿದ ಕಪಿಲ್ ಶರ್ಮಾ ಹಾಗೂ ಅವರ ಪ್ರೊಡಕ್ಷನ್ ಹೌಸ್ ಕೇಂದ್ರ ಸಚಿವರ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಆದರೆ ಯಾವುದೂ ಪ್ರಯೋಜನವಾಗಲಿಲ್ಲ. ಗೇಟ್‌ಕೀಪರ್‌ಗೆ ತಾನು ನಿಲ್ಲಿಸಿದ್ದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಎಂದು ತಿಳಿದು ತೀವ್ರ ಗಾಬರಿಗೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.