ಗಂಡಾ ಹೆಣ್ಣಾ? ಸೀಮಂತದ ದಿನವೇ ಮಗುವಿನ ಲಿಂಗ ರಿವೀಲ್ ಮಾಡಿದ ಕಿರುತೆರೆ ನಟಿ ಅರ್ಚನಾ!

First Published | Sep 15, 2023, 10:54 AM IST

ಬೇಬಿ ಶವರ್ ದಿನವೇ ಮಗುವಿನ ಲಿಂಗ ಬಹಿರಂಗ ಪಡಿಸಿದ ಕಿರುತೆರೆ ನಟಿ ಅರ್ಚನಾ ಲಕ್ಷ್ಮಿನರಸಿಂಹ ಸ್ವಾಮಿ..... 

ಮನೆ ದೇವ್ರು ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿರುವ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ ವೈವಾಜಿಕ ಜೀವನಕ್ಕೆ ಕಾಲಿಟ್ಟ ನಂತರ ವಿದೇಶದಲ್ಲಿ ನೆಲೆಸಿದ್ದಾರೆ.

ಅರ್ಚನಾ ಮತ್ತು ವಿಘ್ನೇಶ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಜನರೊಟ್ಟಿಗೆ ಮಾಹಿತಿ ಹಂಚಿಕೊಳ್ಳುತ್ತಾರೆ. 

Tap to resize

ವಿದೇಶದಲ್ಲಿದ್ದರೂ ಸಂಪ್ರದಾಯದ ಪ್ರಕಾರ ಅರ್ಚನಾ ಸರಳವಾಗಿ ಸೀಮಂತ ಮಾಡಿಸಿಕೊಂಡರು. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.

ವಿದೇಶದಲ್ಲಿ ಮಗುವಿನ ಲಿಂಗ ತಿಳಿದುಕೊಳ್ಳಲು ಸಂಪೂರ್ಣ ಹಕ್ಕಿರುತ್ತದೆ. ಹೀಗಾಗಿ ಅಲ್ಲಿ ಜೆಂಡರ್ ರಿವೀಲ್ ಪಾರ್ಟಿಯನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಾರೆ.

ಸಂಪೂರ್ಣವಾಗಿ ಪಿಂಕ್ ಬಣ್ಣದ ಥೀಮ್‌ನಲ್ಲಿ ಅರ್ಚನಾ ತಮ್ಮ ಬೇಬಿ ಜೆಂಡರ್ ರಿವೀಲ್ (Baby Gendre reveal)  ಹಾಗೂ ಬೇಬಿ ಶವರ್ ಮಾಡಿಕೊಂಡಿದ್ದಾರೆ.

ಈ ಮೂಲಕ ತಮ್ಮ ಕುಟುಂಬಕ್ಕೆ ಮುದ್ದಾದ ಲಕ್ಷ್ಮಿಯನ್ನು ಬರ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಹೌದು! ಅರ್ಚನಾ ಹೆಣ್ಣು ಮಗುವಿಗೆ ತಾಯಿಯಾಗಲಿದ್ದಾರೆ.

Latest Videos

click me!