ಜೀ ಕನ್ನಡ (Zee Kannada) ವಾಹಿನಿಯಲ್ಲಿ ಜನಪ್ರಿಯ ಕಾರ್ಯಕ್ರಮ ಚೋಟಾ ಚಾಂಪಿಯನ್ ನಂತರ ಈಗ ಜೋಡಿ ನಂ 1 ರಿಯಾಲಿಟಿ ಶೊ ಆರಂಭವಾಗಿದೆ.
ಜೋಡಿ ನಂ 1 ಕಾರ್ಯಕ್ರಮವನ್ನು ಕುರಿ ಪ್ರತಾಪ್ ಮತ್ತು ಶ್ವೇತಾ ಚಂಗಪ್ಪ ನಿರೂಪಣೆ ಮಾಡುತ್ತಿದ್ದಾರೆ. ವೀಕ್ಷಕರು ಹೆಚ್ಚಾಗಿ ಗಮನಿಸುವುದು ಚಂಗಪ್ಪ ಸೀರೆಯನ್ನು.
ಹೌದು! ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದಲ್ಲಿ ಶ್ವೇತಾ ಧರಿಸಿದ್ದ ಲೆಹೆಂಗಾ ದಾವಣಿ ಸರಿಯಾಗಿರಲಿಲ್ಲ ಎಂದು ನೆಟ್ಟಿಗರು ಸಮಾಧಾನ ವ್ಯಕ್ತ ಪಡಿಸಿದ್ದರು.
ಹೀಗಾಗಿ ಎರಡನೇ ಎಪಿಸೋಡ್‌ಗೆ ಶ್ವೇತಾ ಚಂಗಪ್ಪ ಮೈಸೂರ್ ಸಲ್ಕ್ ಧರಿಸಿ ಮಿಂಚಿದ್ದಾರೆ. ಕಾರ್ಯಕ್ರಮಕ್ಕೆ ಹೇಗೆ ರೆಡಿಯಾಗುತ್ತಾರೆಂದು ವಿಡಿಯೋ ಕೂಡ ಮಾಡಿದ್ದಾರೆ.
'ನನಗೆ ಸೀರೆ ಧರಿಸುವುದು ಅಂದ್ರೆ ತುಂಬಾನೇ ಇಷ್ಟ. ನನ್ನ ಪ್ರಕಾರ ಪ್ರತಿಯೊಬ್ಬ ಭಾರತ ನಾರಿ ಸೀರೆಯಲ್ಲಿ ಅದ್ಭುತವಾಗಿ ಕಾಣಿಸುತ್ತಾರೆ' ಎಂದು ಶ್ವೇತಾ ಬರೆದುಕೊಂಡಿದ್ದಾರೆ.
'ಸೀರೆ ಒಂದು ಪ್ರತಿಯೊಬ್ಬ ಹೆಣ್ಣು ಮಗಳು ಅಟ್ರ್ಯಾಕ್ಟಿವ್ ಆಗಿ ಕಾಣುವಂತೆ ಮಾಡುವುದು. ಅಲ್ವಾ? ಈ ಲುಕ್ ಎರಡನೇ ಎಪಿಸೋಡ್‌ಗೆ' ಎಂದು ಶ್ವೇತಾ ಹೇಳಿದ್ದಾರೆ.