ಕನ್ನಡ ಕಿರುತೆರೆಯ ವಿಜಯ್, ರಾಮಚಾರಿ, ವೈಷ್ಣವ್, ರಾಮನ ರಿಯಲ್ ವಯಸ್ಸೆಷ್ಟು?

Published : Sep 14, 2023, 05:26 PM ISTUpdated : Sep 14, 2023, 05:46 PM IST

ಕನ್ನಡದ ಜನಪ್ರಿಯ ಮನೊರಂಜನಾ ಟಿವಿ ಚಾನಲ್‌ಗಳಾದ ಜೀ ಕನ್ನಡ, ಕಲರ್ಸ್‌ ಕನ್ನಡ ಹಾಗೂ ಉದಯ ಟಿವಿಗಳಲ್ಲಿ ಕಾಣಿಸಿಕೊಳ್ಳುವ ಧಾರವಾಹಿ ನಾಯಕ ನಟರು ನಿಮ್ಮನ್ನು ರಂಜಿಸುತ್ತಿದ್ದಾರೆ. ಆದರೆ, ನಿಮಗಿಷ್ಟವಾದ ನಟರ ವಯಸ್ಸೆಷ್ಟು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ. 

PREV
110
ಕನ್ನಡ ಕಿರುತೆರೆಯ ವಿಜಯ್, ರಾಮಚಾರಿ, ವೈಷ್ಣವ್, ರಾಮನ ರಿಯಲ್ ವಯಸ್ಸೆಷ್ಟು?

ಕನ್ನಡದ ಪ್ರಸಿದ್ಧ ಧಾರವಾಹಿಗಳಲ್ಲಿ ಒಂದಾದ ಪುಟ್ಟಕ್ಕನ ಮಕ್ಕಳು ಧಾರವಾಹಿಯ ನಾಯಕ ನಟ ಧನುಷ್‌ ಎನ್.ಎಸ್. (Dhanush NS) ಅವರಿಗೆ ಕೇವಲ 25 ವರ್ಷ ಎನ್ನಲಾಗಿದೆ. ಇವರು 1998ರಲ್ಲಿ ಜನಿಸಿದ್ದಾರೆ ಎನ್ನಲಾಗಿದೆ.

210

ಇನ್ನು ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಧಾರವಾಹಿಯ ಧನುಷ್‌ಗೌಡ (Dhanush Gowda) ಅವರಿಗೆ 26 ವರ್ಷವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಅವಕಾಶ ಸಿಗುವ ಸಾಧ್ಯತೆಯೂ ಕಂಡುಬರುತ್ತಿದೆ.

310

ತ್ರಿಪುರ ಸುಂದರಿ ಧಾರವಾಹಿಯ ನಾಯಕ ಅಭಿನವ್‌ ವಿಶ್ವನಾಥನ್‌ (Abhinav Vishwanathan) 27 ವರ್ಷ ವಯಸ್ಸಾಗಿದೆ. ಇನ್ನು ಧಾರವಾಹಿಯಲ್ಲಿ ದೇವಲೋಕದಿಂದ ಚಿಕ್ಕ ವಯಸ್ಸಿನಲ್ಲಿಯೇ ಭೂಮಿಗೆ ಬಂದಿದ್ದು, ಪುನಃ ದೇವಲೋಕಕ್ಕೆ ಕರೆದೊಯ್ಯಲು ತ್ರಿಪುರ ಸುಂದರಿ ಬಂದಿದ್ದಳೆ.

410

ಬಿಗ್‌ಬಾಸ್‌ ಖ್ಯಾತಿಯ ಹಾಗೂ 'ಲಕ್ಷ್ಮೀ ಬಾರಮ್ಮ' ಧಾರವಾಹಿಯ ನಾಯಕ ಶಮಂತ್‌ ಬ್ರೋ ಗೌಡ (Shamanth Bro Gowda) ಅವರಿಗೆ 28 ವರ್ಷ ವಯಸ್ಸಾಗಿದೆ. ಇವರು 1995ರಲ್ಲಿ ಜನಿಸಿದ್ದಾರೆ ಎಂದು ತಿಳಿದುಬಂದಿದೆ.

510

ರಾಮಾಚಾರಿ ಧಾರವಾಹಿಯಲ್ಲಿ ಆಚಾರ್ಯರ ಕುಟುಂಬದ ಮಗನಾಗಿ ಕಾಣಿಸಿಕೊಂಡಿರುವ ರಿತ್ವಿಕ್‌ ಕೃಪಾಕರ್‌ (Rithvik Krupakar)  ಅವರಿಗೆ 30 ವರ್ಷ ಎನ್ನಲಾಗಿದೆ. ಇವರು 2013ರಲ್ಲಿ ತಮ್ಮ ಪದವಿ ವ್ಯಾಸಂಗ ಮುಗಿಸಿದ್ದಾರೆ. ರಾಮಾಚಾರಿ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ.
 

610

'ನೀನಾದೆನಾ' ಧಾರವಾಹಿಯಲ್ಲಿ ರೌಡಿಯಾಗಿ ಕಾಣಿಸಿಕೊಂಡು ಜಡ್ಜ್‌ ಮಗಳಿಗೆ ತಾಳಿ ಕಟ್ಟಿದ ನಾಯಕ ದಿಲೀಪ್‌ ಆರ್‌ ಶೆಟ್ಟಿ (Dileep R Shetty) ಅವರಿಗೆ 30 ವರ್ಷವಾಗಿದೆ. ಮದುವೆಯ ನಂತರ ಹೆಂಡತಿ ಮಾತಿನಂತೆ ದುಡಿಯಲು ಮುಂದಾಗಿದ್ದಾನೆ.
 

710

ಕನ್ನಡದ 'ಸೀತಾರಾಮ' ಧಾರವಾಹಿ ಸೇರಿದಂತೆ ತೆಲುಗು ಧಾರವಾಹಿಯಲ್ಲೂ ಮಿಂಚುತ್ತಿರುವ ಕನ್ನಡಿಗ ಗಗನ್‌ ಚಿನ್ನಪ್ಪ (Gagan Chinnappa) ಅವರಿಗೆ 33 ವರ್ಷ ಎನ್ನಲಾಗಿದೆ. ಅವರು 1990 ಅಕ್ಟೋಬರ್‌ 11ರಂದು ಜನಿಸಿದ್ದಾರೆ.

810

ಕಲರ್ಸ್‌ ಕನ್ನಡದ ಲಕ್ಷಣ ಧಾರವಾಹಿಯಲ್ಲಿ ನಾಯಕನಾಗಿ ಪಾತ್ರ ಮಾಡುತ್ತಿರುವ ಜಗನ್‌ ಚಂದ್ರಶೇಖರ್‌ (Jagan Chandrashekhar) ಅವರಿಗೆ ಈಗ 36 ವರ್ಷವಾಗಿದೆ. ಅವರು 1987 ಜೂ.13ರಂದು ಜನಿಸಿದ್ದಾರೆ. ಈ ಹಿಂದೆಯೂ ಹಲವು ಧಾರವಾಹಿಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.
 

910

ಜೀ ಕನ್ನಡ ವಾಹಿನಿಯ ಹಿಟ್ಲರ್‌ ಕಲ್ಯಾಣ ಧಾರವಾಹಿಯ ನಾಯಕ ದಿಲೀಪ್‌ ರಾಜ್‌ (Dileep Raj) ಅವರಿಗೆ ಈಗ 44 ವರ್ಷವಾಗಿದೆ. ಕನ್ನಡದಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ ಅವರು 1978ರ ಸೆ.02ರಂದು ಜನಿಸಿದ್ದಾರೆ ಎಂದು ತಿಳಿದುಬಂದಿದೆ.

1010

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ ರಾಜೇಶ್‌ ನಟರಂಗ ಅವರು (Rajesh Nataranga) 18 ಏಪ್ರಿಲ್ 1977 ರಂದು ಬೆಂಗಳೂರಿನಲ್ಲಿ ಜನಿಸಿದರು. ಈಗ 46 ವರ್ಷ ವಯಸ್ಸಾಗಿದೆ. ಪಾತ್ರಗಳಿಗೆ ವಯಸ್ಸಿನ ಮಿತಿ ಇಲ್ಲವೆನ್ನುವಂತೆ ಈಗಲೂ ಕೂಡ ಜೀ ಕನ್ನಡದಲ್ಲಿ ಬರುವ ಅಮೃತಧಾರೆ ಧಾರವಾಹಿಯಲ್ಲಿ ನಾಯಕನಾಗಿಯೇ ಪಾತ್ರ ಮಾಡುತ್ತಿದ್ದಾರೆ. 

Read more Photos on
click me!

Recommended Stories