ಬಾಯ್‌ಫ್ರೆಂಡ್‌ಗೆ ಕಿಸ್ ಮಾಡಿದ ತೇಜಸ್ವಿನಿ ಆನಂದ್‌ಕುಮಾರ್; ಅನುಪಮಾ ಗೌಡ ತಂಗಿ ಫೋಟೋ ವೈರಲ್

First Published Apr 24, 2024, 9:35 AM IST

ಅಕ್ಕ ಇನ್ನೂ ಮದ್ವೆ ಆಗಿಲ್ಲ ಆಗಲೇ ತಂಗಿ ರೊಮ್ಯಾನ್ಸ್‌......ಬಾಯ್‌ಫ್ರೆಂಡ್‌ ಜೊತೆಗಿರುವ ತೇಜಸ್ವಿನಿ ಫೋಟೋ ವೈರಲ್...... 

ಕನ್ನಡ ಕಿರುತೆರೆ ಜನಪ್ರಿಯ ನಟಿ ಹಾಗೂ ನಿರೂಪಕಿ ತೇಜಸ್ವಿನಿ ಅನಂದ್‌ಕುಮಾರ್ ಸಹೋದರಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ.

ಅನುಪಮಾ ಗೌಡ ತಂಗಿ ಆಗಿರುವ ತೇಜಸ್ವಿನಿ ಅನಂದ್‌ಕುಮಾರ್ ತಮ್ಮ ಬಾಯ್‌ಫ್ರೆಂಡ್‌ ಜೊತೆಗಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. 

ಅಲ್ಲದೆ ಒಂದೆರಡು ಫೋಟೋಗಳಲ್ಲಿ ಕಿಸ್ ಮಾಡುತ್ತಿರುವುದೂ ಇದೆ. ಹೀಗಾಗಿ ಎಲ್ಲೆಡೆ ಮದುವೆ ಫಿಕ್ಸ್ ಆಗಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. 

ತಂಗಿ ಪ್ರೀತಿ ಮಾಡಿ ಹೇಗೋ ಲೈಫ್‌ ಸೆಟ್ ಮಾಡಿಕೊಳ್ಳುತ್ತಿದ್ದಾಳೆ ನೀವು ಯಾಕೆ ಇನ್ನೂ ಸಿಂಗಲ್ ಎಂದು ಅನುಪಮಾಳನ್ನು ಆಗಾಗ ನೆಟ್ಟಿಗರು ಪ್ರಶ್ನೆ ಮಾಡುತ್ತಾರೆ.

ಒಂದೆರಡು ಕನ್ನಡ ಸೀರಿಯಲ್‌ಗಳಲ್ಲಿ ನಟಿಸಿರುವ ತೇಜಸ್ವಿನಿ ಯುಟ್ಯೂಬ್ ಚಾನೆಲ್‌ ಹೊಂದಿದ್ದಾರೆ. ಸಾಕಷ್ಟು ಆನ್‌ಲೈನ್‌ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 

'ನನ್ನ ಪ್ರಪಂಚವನ್ನು ಸುಂದರ ಮಾಡಿರುವೆ. ಜೀವನದಲ್ಲಿ ನಾನು ಭೇಟಿ ಮಾಡಿರುವ ಅದ್ಭುತ ವ್ಯಕ್ತಿ ನೀನು. ಯಾರೂ ಕಾಟ ಕೊಡದಷ್ಟು ಕಾಟ ನಿನಗೆ ನಾನು ಕೊಡುವೆ...ಯಾರೂ ಕೊಡಲಾಗದಷ್ಟು ಪ್ರೀತಿ ಕೊಡುವೆ' ಎಂದು ತೇಜಸ್ವಿನಿ ಬರೆದುಕೊಂಡಿದ್ದಾರೆ. 

ತೇಜಸ್ವಿನಿ ಪ್ರೀತಿ ಮಾಡುತ್ತಿರುವ ಹುಡುಗನ ಹೆಸರು ದರ್ಶನ್ ಶಿವು. ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್ ರೀಲ್ಸ್‌ನಲ್ಲಿ ಸಖತ್ ಹೆಸರು ಮಾಡಿದ್ದಾರೆ. 

click me!