ಬಾಂಬ್ ಬೆದರಿಕೆ ಸುದ್ದಿಗೂ ಮುನ್ನ ಮಗ ಮನೆ ಸೇರಿದ್ದ: ನಟಿ ಶ್ವೇತಾ ಚಂಗಪ್ಪ

First Published Dec 2, 2023, 4:25 PM IST

ಸ್ಕೂಲ್‌ ಸಿಬ್ಬಂದಿಗಳ ಜೊತೆ ಮಾತನಾಡಿ ಸುರಕ್ಷತಾ ಕ್ರಮಗಳು ಬಗ್ಗೆ ತಿಳಿದುಕೊಳ್ಳಬೇಕು ಎಂದ ಶ್ವೇತಾ.

ಡಿಸೆಂಬರ್ 1ರಂದು ಬೆಂಗಳೂರಿನಲ್ಲಿ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್‌ ಬಂದಿತ್ತು. ಇದಕ್ಕೆ ಗಾಬರಿಯಾಗಿ ಮಕ್ಕಳನ್ನು ವಾಪಸ್ ಕಳಿಸುವಂತೆ ಪೋಷಕರು ಸ್ಕೂಲ್‌ ಮುಂದೆ ಸೇರಿದರು. 

ಈ ವಿಚಾರದ ಬಗ್ಗೆ ಕಿರುತೆರೆ ನಟ ಹಾಗೂ ನಿರೂಪಕಿ ಶ್ವೇತಾ ಚಂಗಪ್ಪ ಪ್ರತಿಕ್ರಿಯೆ ನೀಡಿದ್ದಾರೆ. 'ಬಾಂಬೆ ಬೆದರಿಕೆ ಇಮೇಲ್ ಬಂದಿರುವುದು ತಿಳಿದು ಆತಂಕವಾಗಿದೆ. 

Latest Videos


ಮುಂದೆ ಏನಾಗಲಿ ಅನ್ನೋ ಯೋಚನೆ ಇದೆ. ಸ್ಕೂಲ್‌ಗಳಿಗೆ ಬೆದರಿಕೆ ಮೇಲ್ ಹಾಕಿರುವ ಉದ್ದೇಶ ಏನೆಂದು ತಿಳಿದುಕೊಳ್ಳಬೇಕು.  ಮಾಧ್ಯಮಗಳಲ್ಲಿ ಬಾಂಬ್ ಮೇಲೆ ಸುದ್ದಿ ಆಗುವ ಮೊದಲೇ ನನ್ನ ಮಗ ಮನೆಗೆ ಬಂದಿದ್ದ. 

ಕೇಳಿ ಶಾಕ್ ಆಗಿದ್ದು ನಿಜ. ಮಕ್ಕಳನ್ನು ಸ್ಕೂಲ್‌ನಲ್ಲಿ ಬಿಟ್ಟು ಪೋಷಕರು ಎಷ್ಟು ಗಾಬರಿಯಾಗಿರುತ್ತಾರೆ ಅನ್ನೋದು ಯೋಚನೆ ಮಾಡಲು ಸಾಧ್ಯವಿಲ್ಲ. 

ಈ ರೀತಿ ಬೆದರಿಕೆ ಕರೆ ಬರುತ್ತಿದ್ದರೆ ಖಂಡಿತಾ ಮಕ್ಕಳನ್ನು ಸ್ಕೂಲ್‌ಗೆ ಕಳುಹಿಸುವುದಕ್ಕೂ ಪೋಷಕರು ಯೋಚನೆ ಮಾಡಬೇಕು ಎಂದು ಶ್ವೇತಾ ಇಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಸ್ಕೂಲ್ ಸಿಬ್ಬಂದಿಗಳ ಜೊತೆ ಆಗಾಗ ಮಾತುಕತೆ ಮಾಡಿ ರಕ್ಷಣೆ ಕ್ರಮಗಳನ್ನು ತಿಳಿದುಕೊಳ್ಳಬೇಕು. ಈ ರೀತಿ ಸಂಬಂಧಗಳು ನನ್ನ ಯೋಚನೆಗಳನ್ನು ಕೆಟ್ಟ ದಾರಿಗೆ ತೆಗೆದುಕೊಂಡು ಹೋಗುತ್ತದೆ. 

click me!