Amrutha Ramamurthi: ಕೆಂಡಸಂಪಿಗೆ, ಆಸೆ, ಕುಲವಧು, ಮೇಘ ಮಯೂರಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಅಮೃತಾ ರಾಮಮೂರ್ತಿ ಅವರು ಕೆಲ ಸೀರಿಯಲ್ ಸೆಟ್‌ನಲ್ಲಿ ಏನೇನು ನಡೆಯುತ್ತೆ ಎಂದು ನ್ಯೂಸೋ ನ್ಯೂಸು ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಅಮೃತಾ ರಾಮಮೂರ್ತಿ ಅವರು ಈ ಬಗ್ಗೆ ಮಾತನಾಡಿದ್ದು, “ 2025 ಜನವರಿಯಲ್ಲಿ ನಾನೊಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದೆ. ಆ ಧಾರಾವಾಹಿಯಿಂದ ನನಗೆ ತುಂಬ ಕಷ್ಟ ಆಗ್ತಿತ್ತು. ನನ್ನ ವಯಕ್ತಿಕ ಸ್ವಭಾವಕ್ಕೆ ಅದು ತದ್ವಿರುದ್ಧವಾಗಿತ್ತು. ಅದನ್ನು ನನಗೆ ಜೀರ್ಣಿಸಿಕೊಳ್ಳೋಕೆ ಆಗ್ತಿರಲಿಲ್ಲ. ನಾನೊಬ್ಬಳು ತಾಯಿ, ಆದರೆ ಆ ಧಾರಾವಾಹಿಯಲ್ಲಿ ಅವಳು ಮಗುವನ್ನು ತಿರಸ್ಕಾರ ಮಾಡಿರುತ್ತಾಳೆ. ಇದನ್ನು ನಾನು ತುಂಬಾ ಸೀರಿಯಸ್ ಆಗಿ ತಗೊಂಡುಬಿಟ್ಟೆ. ಅದು ಕ್ಯಾರೆಕ್ಟರ್, ಕ್ಯಾರೆಕ್ಟರ್ ತರ ತಗೋ ಅಂತ ತುಂಬಾ ಜನ ನನಗೆ ಹೇಳೋರು. ಆದರೆ ನನಗೆ ಅದು ಆಗಲಿಲ್ಲ. ಜನರು ಪಾತ್ರಕ್ಕೆ ಬೈಯ್ಯುತ್ತಿದ್ದರು. ಆದರೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಆರಂಭಿಸಿದರು, ನಾನು ತುಂಬ ಟೈಮ್ ಡಿಪ್ರೆಶನ್‌ನಲ್ಲಿದ್ದೆ” ಎಂದು ಹೇಳಿದ್ದಾರೆ.
24
ಬಾತ್ರೂಮ್‌ಗೆ ಲಕ್ಷುರಿ
“ಬಣ್ಣದ ಬದುಕಿನಲ್ಲಿ ಕಲಾವಿದರು ತೆರೆ ಮೇಲೆ ಬಂದಾಗ ಇವರ ಲೈಫ್ ವಾವ್ ಇರುತ್ತೆ ಅಂತ ಯೋಚನೆ ಮಾಡ್ತಾರೆ. ತೆರೆ ಹಿಂದೆ ಏನು ನಡೆಯುತ್ತದೆ ಎಂದು ಯಾರಿಗೂ ಅರ್ಥವೂ ಆಗಲ್ಲ. ನಾವು ಕೇಳೋದನ್ನು ಲಕ್ಷುರಿ ಅಂತ ಅಂದುಕೊಳ್ಳುತ್ತಾರೆ. ಒಂದು ಹೆಣ್ಣುಮಕ್ಕಳಿಗೆ ಅಂತ ಬಾತ್‌ರೂಮ್ ಕೇಳಿದರೆ ಅದು ಲಕ್ಷುರಿ ಅಂತ ಅಂದುಕೊಳ್ತಾರೆ” ಎಂದು ಹೇಳಿದ್ದಾರೆ.
34
ನಮಗೆ ಫ್ರೀ ಟೈಮ್ ಸಿಗಲ್ಲ
“ಇವರಿಗೆ ಬಾತ್ರೂಮ್ ಕೊಡಬೇಕಾ? ಸೆಪರೇಟ್ ಏನು ಕ್ಯಾರವಾನ್ ತರಿಸಬೇಕಾ? ನಮಗೆ ಕ್ಯಾರವಾನ್ ಅಲ್ಲಿ ಕೂತ್ಕೊಳ್ಳೋಷ್ಟು ಪುರುಸೊತ್ತು ಕೊಡಲ್ಲ. ದಿನ 12 ಸೀನ್ ಹಾಕ್ತಾರೆ, ಅಷ್ಟೆಲ್ಲ ಟೈಮ್ ಇರಲ್ಲ, ನಾವು ಕೆಲಸ ಮಾಡ್ತಿರಬೇಕು. ಇನ್ನೊಬ್ಬರು ಕ್ಲೋಸ್ ಶಾಟ್ಸ್ ಮಾಡಬೇಕಾದ್ರೆ ಐದು ನಿಮಿಷ ಫ್ರೀ ಟೈಮ್ ಸಿಗಬಹುದು. ಅದನ್ನು ಬಿಟ್ಟರೆ ಊಟ ತಿಂಡಿ ಟೈಮ್‌ಗೆ ಬ್ರೇಕ್ ಅಂತ ಸಿಗುವುದು. ನನಗೆ ಸಿಗುವ ಪಾತ್ರಗಳಿಗೆ ಬ್ರೇಕ್ ಸಿಗೋದಿಲ್ಲ” ಎಂದು ಹೇಳಿದ್ದಾರೆ.
“ಇದ್ದಿದ್ದು ಇದ್ದಂಗೆ ಹೇಳುವುದರಿಂದನೇ ತುಂಬ ಜನರ ಜಾಸ್ತಿ ಪ್ರೀತಿ ಗಳಿಸ್ತೀರಾ ಅಂತ ಖುಷಿಯಾಯ್ತು. ಏನು ಗೊತ್ತಿಲ್ಲ ಸರ್, ಒಂದೊಂದು ಸಲ ಅತಿರೇಕ ಅಂತ ಕೂಡ ಅನಿಸಬಹುದೇನೋ ಗೊತ್ತಿಲ್ಲ. ಕೆಲವರು ಈ ಬಗ್ಗೆ ಪ್ರಶ್ನೆ ಮಾಡ್ತಾರೆ, ಇನ್ನೂ ಕೆಲವರು ಮಾಡೋದಿಲ್ಲ. ನಿಜ ಹೇಳಬೇಕು ಅಂದ್ರೆ ಆ ಒಂದು ಸೀರಿಯಲ್ ಆದಮೇಲೆ ನಾನು ಇಂಡಸ್ಟ್ರಿಯನ್ನು ಬಿಟ್ಟುಬಿಡೋದು ಅಂತ ಡಿಸೈಡ್ ಮಾಡಿದ್ದೆ” ಎಂದು ಅಮೃತಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.