Rakesh Poojary Sister Wedding: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದು ಅಕಾಲಿಕ ಮರಣವನ್ನಪ್ಪಿದ ರಾಕೇಶ್ ಪೂಜಾರಿಯ ಕನಸಿನಂತೆ, ಅವರ ಸಹೋದರಿಯ ಮದುವೆಯನ್ನು ಕಾಮಿಡಿ ಕಿಲಾಡಿಗಳು ತಂಡ ಸಾಥ್ ಕೊಟ್ಟು ಅದ್ಧೂರಿಯಾಗಿ ನಡೆಸಿದ್ದಾರೆ. ಫೋಟೊಗಳು ಇಲ್ಲಿವೆ.
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾದ ರಾಕೇಶ್ ಪೂಜಾರಿ, ಎಲ್ಲರನ್ನೂ ನಕ್ಕು ನಗಿಸಿ, ಸಿನಿಮಾಗಳಲ್ಲಿ ಮಿಂಚುವ ಹೊತ್ತಿಗೆ ಹೃದಯಾಘಾತದಿಂದಾಗಿ ಅಕಾಲಿಕ ಮರಣವನ್ನಪ್ಪಿದ ಕಾಮಿಡಿ ಕಿಲಾಡಿಗಳು ಸೀಸನ್ 3’ರ ವಿನ್ನರ್ ರಾಕೇಶ್ ಪೂಜಾರಿ ಅವರ ಸಹೋದರಿ ಮದುವೆ ಅದ್ಧೂರಿಯಾಗಿ ನಡೆದಿದೆ.
26
ತಂಗಿಯ ಮದುವೆ ಕನಸು ಕಂಡಿದ್ದ ರಾಕೇಶ್
ರಾಕೇಶ್ ಪೂಜಾರಿಯ ದೊಡ್ಡ ಕನಸು ಎಂದರೆ ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎನ್ನುವುದು. ಅದನ್ನೇ ಅವರು ಹಲವಾರು ಸಂದರ್ಭಗಳಲ್ಲಿ ವೇದಿಕೆಯಲ್ಲಿ ಸ್ನೇಹಿತರಲ್ಲಿ ಹೇಳಿದ್ದರು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು, ತಂಗಿಯ ಮದುವೆ ಮಾಡುವ ಮುನ್ನವೇ ಇಹಲೋಕ ತ್ಯಜಿಸಿದ್ದ ರಾಕೇಶ್.
36
ರಾಕೇಶ್ ಕನಸಿನಂತೆ ಅದ್ಧೂರಿ ಮದುವೆ
ಇದೀಗ ಎಪ್ರೀಲ್ 26ರಂದು , ರಾಕೇಶ್ ಪೂಜಾರಿ ಅವರ ತಂಗಿ ರಕ್ಷಿತಾ ಅವರ ವಿವಾಹವು ಸುನಿಲ್ ಎಂಬುವರ ಜೊತೆ ಅದ್ಧೂರಿಯಾಗಿ ನಡೆಯಿತು. ರಾಕೇಶ್ ಕನಸಿನಂತೆ ಕಾಮಿಡಿ ಕಿಲಾಡಿಗಳು ತಂಡ, ಅಂದರೆ ರಾಕೇಶ್ ಸ್ನೇಹಿತರು ಎಲ್ಲರೂ ಜೊತೆ ಸೇರಿ, ರಾಕೇಶ್ ಕುಟುಂಬದ ಜೊತೆ ನಿಂತು ತಂಗಿಯ ಮದುವೆಯನ್ನು ಅದ್ಧೂರಿಯಾಗಿ ನಡೆಸಿಕೊಟ್ಟಿದ್ದಾರೆ.
ರಾಕೇಶ್ ಪೂಜಾರಿ ಅವರ ತಂಗಿ ರಕ್ಷಿತಾ ವಿವಾಹವು ಉಡುಪಿಯ ಮಿಷನ್ ಕಾಂಪೌಂಡ್ ಚರ್ಚ್ ಹಾಲ್ ನಲ್ಲಿ ಏಪ್ರಿಲ್ 26 ರಂದು ವಿಜೃಂಭಣೆಯಿಂದ ನಡೆಯಿತು.ಮದುವೆ ಸಮಾರಂಭದಲ್ಲಿ ಕಾಮಿಡಿ ಕಿಲಾಡಿಗಳು ತಂಡ ಓಡಾಡಿಕೊಂಡು ಮದುವೆಯನ್ನು ಸುಂದರವಾಗಿ ನಡೆಸಿಕೊಟ್ಟಿದ್ದಾರೆ ಎನ್ನಲಾಗಿದೆ.
56
ಯಾರೆಲ್ಲಾ ಭಾಗಿಯಾಗಿದ್ದರು
ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ನಯನಾ, ಪ್ರವೀಣ್ ಜೈನ್, ದೀಪಿಕಾ ಗೌಡ, ಅನೀಶ್ ಪೂಜಾರಿ ಮತ್ತು ದಿವ್ಯಾ ಸೇರಿದಂತೆ ಮುಂತಾದವರು ಮನೆ ಮಕ್ಕಳಂತೆ ಜೊತೆಗಿದ್ದು, ಸಂಭ್ರಮದಿಂದ ಮದುವೆ ನಡೆಸಿಕೊಟ್ಟರು. ಇಲ್ಲಿದೆ ಮದುವೆಯ ಸುಂದರ ಫೋಟೊಗಳು. ಮದುವೆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
66
ಅಕಾಲಿಕವಾಗಿ ಸಾವನ್ನಪ್ಪಿದ ರಾಕೇಶ್ ಪೂಜಾರಿ
ತಮ್ಮ ನಟನೆ ಹಾಗೂ ಕಾಮಿಡಿಯಿಂದ ಜನಮನ ಗೆದ್ದಿದ್ದ ರಾಕೇಶ್ ಪೂಜಾರಿ, ಕಾಂತಾರ ಸಿನಿಮಾ ಶೂಟಿಂಗ್ ಮುಗಿಸಿ, ತಮ್ಮ ಸ್ನೇಹಿತರ ಮದುವೆ ಸಮಾರಂಭದಲ್ಲಿ ಸಂಗೀತ್ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದರು, ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.