Kanyakumari: ವಿಶೇಷ ಪಾತ್ರದಲ್ಲಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ಶ್ರೀ!

Suvarna News   | Asianet News
Published : Dec 03, 2021, 04:55 PM IST

 ಕನ್ನಿಕಾಗೆ ಜೋಡಿಯಾಗಲು ಬರ್ತಿದ್ದಾನೆ ಶ್ರೀ.  ಇಡೀ ಊರಿನ ಜನರು ಹಬ್ಬಿಸಿರುವ ಸುಳ್ಳು ಸುದ್ದಿಗೆ ಬೀಳುತ್ತಾ ಬ್ರೇಕ್?

PREV
17
Kanyakumari: ವಿಶೇಷ ಪಾತ್ರದಲ್ಲಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ಶ್ರೀ!

ಕಿರುತೆರೆ ಮತ್ತು ಬೆಳ್ಳಿ ತೆರೆ ಜನಪ್ರಿಯ ನಟ ಶ್ರೀ (Shri) ಇದೀಗ ಕನ್ಯಾಕುಮಾರಿ (Kanyakumari) ಧಾರಾವಾಹಿ ತಂಡಕ್ಕೆ ಸಾಥ್ ಕೊಟ್ಟಿದ್ದಾರೆ. 

27

ಕನಿಕಾಳನ್ನು ಮದುವೆಯಾಗಲು ಬಂದಿರುವ ಅರ್ಜುನ್ ಪ್ರಸಾದ್ (Arjun Prasad) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೆ ಪ್ರಸಾರವಾಗಿರುವ ಎಪಿಸೋಡ್‌ನಲ್ಲಿ ಅವರು ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. 
 

37

ಇಡೀ ಊರಿನ ಜನ ಕನ್ನಿಕಾಳಲ್ಲಿ ದುರ್ಗಿ (Durgi) ಶಕ್ತಿ ಇದೆ. ಆಕೆಯನ್ನು ಮದುವೆ ಆಗುವುದು ಕಷ್ಟ ಎನ್ನುತ್ತಿದ್ದ ಸಮಯದಲ್ಲಿಯೇ ಅರ್ಜುನ್ ದೇವರ ಗುಡಿಯಲ್ಲಿ ಹುಡುಗಿ ನೋಡಿ ಮದುವೆ ಆಗಲು ರೆಡಿಯಾಗಿದ್ದಾರೆ. 

47

ಕನ್ನಿಕಾ ಈ ಮದುವೆಯನ್ನು ಒಪ್ಪಿಕೊಳ್ಳಬೇಕು, ಎನ್ನುವ ಕಾರಣಕ್ಕೆ ಸ್ನೇಹಿತ ಚರಣ್ (Charan) ಎಲ್ಲಾ ರೀತಿ ಸಪೋರ್ಟ್ ಮಾಡುತ್ತಾರೆ. ಕನ್ನಿಕಾ ಉಡುವ ಸೀರೆಯಿಂದ ಹಿಡಿದು, ಹುಡುಗನ ಜೊತೆ ಎನು ಮಾತನಾಡಬೇಕು ಎಂದೂ ಹೇಳಿಕೊಡುತ್ತಾನೆ. 

57

ಇನ್ನು ಶ್ರೀ ಕೊನೆಯದಾಗಿ ಇಷ್ಟ ದೇವತೆ (Ista Devate) ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ, ಸೋಷಿಯಲ್ ಮೀಡಿಯಾದಲ್ಲಿ ಎಲ್ಲಾ ವಿಷಯಗಳನ್ನು ಅಪ್ಡೇಟ್ ಮಾಡುತ್ತಲೇ ಇರುತ್ತಾರೆ. 

67

ಇರುವುದೆಲ್ಲವ ಬಿಟ್ಟು, ಸಿನಿಮಾ ನಂತರ ಗಜಾನನ ಆ್ಯಂಡ್ ಗ್ಯಾಂಗ್ ಮತ್ತು ಹೊಂದಿಸಿ ಬರೆಯಿರಿ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಬಹುತೇಕ ಚಿತ್ರೀಕರಣವೂ ಮುಗಿದಿದೆ. 

77

ಲವ್ ಮಾಕ್ಟೀಲ್ (Love Mocktail) ಖ್ಯಾತಿಯ ರಚನಾ ಜೊತೆ ಲೆಟ್ಸ್‌ ಬ್ರೇಕಪ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಫಸ್ಟ್ ರೊಮ್ಯಾಂಟಿಕ್ ಪೋಸ್ಟರ್ ಬಿಡುಗಡೆಯಾಗಿದೆ.

Read more Photos on
click me!

Recommended Stories