11 ತಿಂಗಳು ಕಠಿಣ ವರ್ಕೌಟ್ ಮತ್ತು ಡಯಟ್ ಮಾಡಿದ್ದಕ್ಕೆ ಎರಡು ಸಿನಿಮಾ ಆಫರ್‌ ಬಂತು: ಶೈನ್ ಶೆಟ್ಟಿ

Published : May 06, 2024, 11:21 AM IST

ಎರಡು ಸಿನಿಮಾಗಳಿಗೆ ಸಹಿ ಮಾಡಿದ ಶೈನ್ ಶೆಟ್ಟಿ. ಫಿಟ್ನೆಸ್‌ಗೆ 11 ತಿಂಗಳು ಕಳೆದ ಬಿಗ್ ಬಾಸ್ ಸ್ಪರ್ಧಿ....  

PREV
16
11 ತಿಂಗಳು ಕಠಿಣ ವರ್ಕೌಟ್ ಮತ್ತು ಡಯಟ್ ಮಾಡಿದ್ದಕ್ಕೆ ಎರಡು ಸಿನಿಮಾ ಆಫರ್‌ ಬಂತು: ಶೈನ್ ಶೆಟ್ಟಿ

ಕನ್ನಡ ಕಿರುತೆರೆ ಜನಪ್ರಿಯ ನಟ ಶೈನ್ ಶೆಟ್ಟಿ ಕೈಯಲ್ಲಿ ಎರಡು ಬಿಗ್ ಪ್ರಾಜೆಕ್ಟ್ ಸಿನಿಮಾಗಳಿದೆ. ಚಿತ್ರಕ್ಕೆಂದು ಫಿಟ್ನೆಸ್‌ ಬಗ್ಗೆ ಗಮನ ಕೊಟ್ಟಿದ್ದಾರೆ. 

26

ಸುಮಾರು 11 ದಿನಗಳ ಕಾಲ ಕಠಿಣ ವರ್ಕೌಟ್ ಮತ್ತು ಡಯಟ್ ಫಾಲೋ ಮಾಡಿ ಸಿಕ್ಸ್‌ ಪ್ಯಾಕ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

36

ಜಸ್ಟ್‌ ಮ್ಯಾರಿಡ್‌ ಮತ್ತು ನಿದ್ರಾದೇವಿ ನೆಕ್ಸ್ಟ್‌ ಡೋರ್‌ ಎಂಬ ಎರಡು ಹೊಸ ಚಿತ್ರಗಳಿಗೆ ಶೈನ್ ನಾಯಕರಾಗಿದ್ದಾರೆ. ಚಿತ್ರಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.

46

ಫಿಟ್ನೆಸ್‌ ನನಗೋಸ್ಕರ ಈ ಪಯಣವನ್ನು ಶುರು ಮಾಡಿದ್ದು, ಸ್ವಲ್ಪ ನನಗಾಗಿ ಸಮಯ ಮಾಡಿಕೊಂಡು ಸಿನಿಮಾಗಳ ನಡುವೆ ಫಿಟ್ನೆಸ್‌ ಗಮನ ಕೊಡಲು ಶುರು ಮಾಡಿದೆ.

56

11 ತಿಂಗಳ ಕಾಲ ತಪಸ್ಸು ಮಾಡಿದಂತೆ ಹಾಕಿದ ಶ್ರಮ ಜೀವನದಲ್ಲಿ ಶಿಸ್ತನ್ನು ಕಲಿಸಿದೆ. ಈ ಶಸ್ತಿನ್ನು ಇನ್ನೂ ಮುಂದುವರೆಸಿದ್ದೇನೆ, ಸಣ್ಣಗಾದ ಮೇಲೆ ಸಿನಿಮಾ ಆಫರ್‌ಗಳು ಬಂತು.

66

ಒಬ್ಬ ನಟ ಮುಖದಿಂದ ಮಾತ್ರವಲ್ಲ ಇಡೀ ದೇಹದಿಂದ ನಟಿಸಬೇಕಾಗುತ್ತದೆ. ಅ ಪಾತ್ರಕ್ಕೆ ದೇಹ ಒಗ್ಗಿಕೊಳ್ಳಬೇಕು ಎಂದು  ಶೈನ್ ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರೆ.

Read more Photos on
click me!

Recommended Stories