ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯ ಪರಿಚಯವಾದ ಮಾಡೆಲ್ ಚಂದು ಗೌಡ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
27
2020ರಲ್ಲಿ ಬಹುಕಾಲದ ಗೆಳತಿ ಶಾಲಿನಿ ಜೊತೆ ಚಂದು ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಗಸ್ಟ್ 2022ರಲ್ಲಿ ಮುದ್ದಾದ ಹೆಣ್ಣು ಮಗುವನ್ನು ಬರ ಮಾಡಿಕೊಂಡರು.
37
ವಿಶೇಷವಾದ ರೀತಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ತಿಳಿಸಿದ ಚಂದು ಮಗಳ ಮುಖವನ್ನು ತೋರಿಸಿ ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದರು. ಹೀಗಾಗಿ ಫ್ಯಾಮಿಲಿ ಫೋಟೋ ಅಪ್ಲೋಡ್ ಮಾಡುವ ಮೂಲಕ ಮಗಳನ್ನು ಪರಿಚಯಯಿಸಿಕೊಟ್ಟಿದ್ದಾರೆ.
47
ಚಂದು ಮತ್ತು ಪತ್ನಿ ಶಾಲಿನಿ ವೈಟ್ ಆಂಡ್ ಬ್ಲೂ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಹೆಣ್ಣು ಮಗುವಿಗೆ ಬಿಳಿ woolen ಬಟ್ಟೆ ಸುತ್ತಿದ್ದಾರೆ.
57
'ಕವಿತಾ ನಾಗರಾಜ್ ಕ್ಲಿಕ್ ಮಾಡಿರುವ ಈ ಸುಂದರವಾದ ಫೋಟೋಗಳು ಕ್ಲಿಕ್ ಮಾಡಿದಕ್ಕೆ. ಇದು ನನ್ನ ಮಗಳ ಮೊದಲ ಫೋಟೋಶೂಟ್' ಎಂದು ಚಂದು ಬರೆದುಕೊಂಡಿದ್ದಾರೆ.
67
ಮಗಳ ಹೆಸರನ್ನು ಇನ್ನೂ ರಿವೀಲ್ ಮಾಡಿಲ್ಲ ಆ ಕ್ಯೂರಿಯಾಸಿಟಿಯನ್ನು ಉಳಿಸಿಕೊಂಡಿದ್ದಾರೆ. ಚಂದು ಗೌಡಗೆ ಮೊದಲಿನಿಂದಲ್ಲೂ ಸೂಪರ್ ಬೈಕ್ ಮತ್ತು ಕಾರುಗಳ ಕ್ರೇಜ್ ಹೆಚ್ಚಿದೆ.
77
ದ್ವಿಪಾತ್ರ, ಫ್ಲಾಟ್ #9, ಜಾಕ್‌ಪಾಟ್, ಕುಷ್ಕ, ಕೃಷ್ಣ ಗಾರ್ಮೆಂಟ್ಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೀ ಕನ್ನಡ ತ್ರಿನಯನಿ ಧಾರಾವಾಹಿ ಜನಪ್ರಿಯತೆ ತಂದುಕೊಟ್ಟಿತ್ತು.