ಬಾಲ್ಯ ವಿವಾಹವಾದ ಕಿರುತೆರೆ ನಟಿ ಚಂದ್ರಕಲಾ; ಆತ್ಮಹತ್ಯೆಗೆ ನಿರ್ಧಾರ ಮಾಡಿದ್ಯಾಕೆಕೆ?

First Published Jan 6, 2023, 6:33 PM IST

ಕನ್ನಡ ಕಿರುತೆರೆಯಲ್ಲಿ ಎಂಥದ್ದೇ ಪಾತ್ರಗಳನ್ನು ಕೊಟ್ಟರೂ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿರೋ ನಟಿ ಎಂದರೆ ಅದು ಚಂದ್ರಕಲಾ ಮೋಹನ್ ಎಂದರೆ ತಪ್ಪಾಗಲಾರದು. ತೆರೆ ಮೇಲೆ ಹೆಚ್ಚಾಗಿ ಖಡಕ್ ಪಾತ್ರಗಳಲ್ಲೇ ಮಿಂಚಿತ್ತಿರುವ ಇವರ ರಿಯಲ್ ಲೈಫ್ ಸ್ಟೋರಿ ಮಾತ್ರ ಕಣ್ಣೀರು ತರಿಸುವಂತದ್ದು.

ಪುಟ್ಟಗೌರಿ ಮದುವೆಯ ಅಜ್ಜಮ್ಮನಾಗಿ ಹೆಚ್ಚು ಜನಪ್ರಿಯತೆ ಗಳಿಸಿದ ಚಂದ್ರಕಲಾ ಮೋಹನ್, ಒಬ್ಬ ಬಹುಮುಖ ಪ್ರತಿಭೆ (versatile actor) ಎಂದೇ ಹೇಳಬಹುದು. ಬಳಿಕ ಕಮಲಿಯಲ್ಲಿ ಅನಿಖಾ ಅಮ್ಮಮ್ಮನಾಗಿ ಖಡಕ್ ವಿಲನ್ ಪಾತ್ರದಲ್ಲಿ ನಟಿಸಿ ಎಂಥದ್ದೇ ಪಾತ್ರ ಕೊಟ್ಟರೂ ನಿರ್ವಹಿಸಲು ತಾನು ಸೈ ಎನಿಸಿಕೊಂಡಿದ್ದರು.

ಬಣ್ಣದ ಲೋಕದಲ್ಲಿ ತುಂಬಾ ರಫ್‌ ಆಂಡ್‌ ಟಫ್ ಆಗಿ ಅಭಿನಯಿಸುವ ಇವರ ರಿಯಲ್ ಲೈಫ್ ಕಥೆ (real life story) ಒಂದು ಧಾರಾವಾಹಿಯಂತಿದೆ. ಹೌದು, ಧಾರಾವಾಹಿಗಳಲ್ಲಿ ಹೆಚ್ಚಾಗಿ ಒಳ್ಳೆಯವರನ್ನು ಹೆದರಿಸುವ ಖಡಕ್ ವಿಲನ್ ಆಗಿ ನಟಿಸಿ ಜನರನ್ನು ರಂಜಿಸಿರುವ ಚಂದ್ರಕಲಾ ಬದುಕು ಮಾತ್ರ ಕಣ್ಣೀರು ತರಿಸುವಂತದ್ದಾಗಿದೆ. 

ಚಂದ್ರಕಲಾ ಮೋಹನ್ ಕಿರುತೆರೆಯಲ್ಲಿ ಮಾತ್ರವಲ್ಲದೆ, ಹಿರಿತೆರೆಯಲ್ಲೂ ಅಭಿನಯಿಸಿದ್ದಾರೆ. 2018ರಲ್ಲಿ ತೆರೆಕಂಡ ಅಭಿಸಾರಿಕೆ ಎಂಬ ಚಿತ್ರದಲ್ಲಿ ಚಂದ್ರಕಲಾ ನಟಿಸಿದ್ದಾರೆ. ತುಳು ಸಿನಿಮಾ ಪಿಲಿಬೈಲ್ ಯಮುನಕ್ಕದಲ್ಲೂ ಚಂದ್ರಕಲಾ ಕಾಣಿಸಿಕೊಂಡಿದ್ದಾರೆ. ಸದ್ಯ ಇವರು ದಾಸ ಪುರಂದರ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳಿಂದ ನಟನಾ ಜಗತ್ತಿನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಚಂದ್ರಕಲಾ ಮೋಹನ್, ಇದುವರೆಗೆ ಸೀರಿಯಲ್, ಸಿನಿಮಾ, ನಾಟಕ ಸೇರಿ ಸುಮಾರು ನೂರಕ್ಕೂ ಅಧಿಕ ವಿವಿಧ ಪಾತ್ರಗಳನ್ನು ನಿಭಾಯಿಸಿಕೊಮ್ಡು ಬಂದಿದ್ದಾರೆ. ಇವರ ಜೀವನದ ಕಥೆ ಮಾತ್ರ ಪ್ರತಿಯೊಬ್ಬರ ಕಣ್ಣಲ್ಲೂ ನೀರು ಹಾಕಿಸುವಂತಿದೆ. 

ಚಂದ್ರಕಲಾ ವಯಸ್ಸಿಗೂ ಮೀರಿದ ರೋಲ್ ಮಾಡುವ ಮೂಲಕ ಪಾತ್ರಗಳಿಗೆ ವಯಸ್ಸು, ಗ್ಲಾಮರ್ ಮುಖ್ಯವಲ್ಲ ಮನಸ್ಸು ಮುಖ್ಯ, ಅಭಿನಯ ಮಾಡುವ ಸಾಮಾರ್ಥ್ಯ ಮುಖ್ಯ ಎನ್ನುತ್ತಾರೆ. ಯಾವುದೇ ಪಾತ್ರವಾಗಲಿ ಅದಕ್ಕೆ ಜೀವ ತುಂಬುವುದು ಕಲಾವಿದನ ಕರ್ತವ್ಯ. ಇಂದು ನಾನು ಲಕ್ಷಾಂತರ ಜನರ ಪ್ರೀತಿಗೆ ಪಾತ್ರಳಾಗಿದ್ದೇನೆ ಎಂದರೆ ಅದಕ್ಕೆ ನನ್ನ ಪತಿಯೇ ಪ್ರಮುಖ ಕಾರಣ ಎನ್ನುತ್ತಾರೆ ಈ ನಟಿ.

ಹತ್ತನೇ ವಯಸ್ಸಿನಲ್ಲಿ ರಂಗಭೂಮಿ ಪ್ರವೇಶಿಸಿದ ಚಂದ್ರಕಲಾ 13 ನೇ ವಯಸ್ಸಿನಲ್ಲಿ ಬಾಲ್ಯ ವಿವಾಹವಾದರಂತೆ (child marriage). ಎಳೆಯ ಪ್ರಾಯದಲ್ಲೇ ಸಂಸಾರದ ಹೊಣೆ ಹೊತ್ತವರಿಗೆ ಗಂಡನ ಪ್ರೋತ್ಸಾಹದ ಫಲವಾಗಿ ಇಂದು ಕಿರುತೆರೆಯಲ್ಲಿ ಇಷ್ಟೊಂದು ಜನಪ್ರಿಯತೆ ಗಳಿಸಲು ಸಾಧ್ಯವಾಯಿತು. ಬಾಲ್ಯದಲ್ಲೇ ಮದುವೆಯಾದುದರಿಂದ ಕಷ್ಟಗಳು ಸಹ ಚಂದ್ರಕಲಾ ಬೆನ್ನೇರಿ ಬಂದಿದ್ದವು. ಆದಾರೂ ಕಷ್ಟಪಟ್ಟು ಇವರು ಗಂಡನ ಪ್ರೋತ್ಸಾಹದಿಂದ ನಾಟಕ, ಸೀರಿಯಲ್, ಸಿನಿಮಾಗಳಲ್ಲಿ ನಟಿಸುತ್ತಾ ಬಂದರು. ಆದರೆ ಅವರಿಗೆ ಅದೇ ಸಮಯದಲ್ಲಿ ಮತ್ತೊಂದು ಆಘಾತ ಎದುರಾಗಿತ್ತು. 

ಚಂದ್ರಕಲಾ ಅವರ ಎರಡನೇ ಮಗ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಬಂತು. ಮಗನ ಚಿಕಿತ್ಸೆ ಮತ್ತು ಮಗನನ್ನು ಉಳಿಸಲು ತಮ್ಮ ಕೈಯಲ್ಲಿದ್ದುದನ್ನೆಲ್ಲಾ ಖಾಲಿ ಮಾಡಬೇಕಾಗಿ ಬಂತು, ಆದರೆ ಮಗ ಮಾತ್ರ ಚೇತರಿಕೆ ಕಾಣಲಿಲ್ಲ. ಕೈಯಲ್ಲಿ ಬಿಡಿಗಾಸೂ ಇಲ್ಲದ ಸ್ಥಿತಿ ಉಂಟಾಗಿತ್ತಂತೆ ಈ ನಟಿಗೆ.

ಇದೆಲ್ಲಾ ಪರಿಸ್ಥಿತಿ ನೋಡಿದಾಗ ಒಂದು ಬಾರಿ ಮಕ್ಕಳಿಗೆ ವಿಷ ನೀಡಿ ಸಾಯುವ ನಿರ್ಧಾರ ಕೂಡ ಮಾಡಿಕೊಂಡಿದ್ದರಂತೆ. ಆದರೆ ಆ ಸಂಕಷ್ಟದ ಸಂದರ್ಭದಲ್ಲಿ  ನಟ ಶರಣ್ ಮತ್ತು ಕೃಷ್ಣ ರುಕ್ಮಿಣಿ ಧಾರವಾಹಿಯ ನಿರ್ದೇಶಕ ರವಿ ಆರ್‌ ಗರಣಿ ಇವರು ಧೈರ್ಯ ತುಂಬಿ, ಮುನ್ನುಗ್ಗಲು ನೆರವಾದರು ಎನ್ನುತ್ತಾರೆ ಚಂದ್ರಕಲಾ. ಇದೀಗ ಮಗ ಕೊಂಚ ಚೇತರಿಸಿಕೊಂಡಿದ್ದಾನೆ ನಿಜಾ, ಆದರೆ ದೇಹದಲ್ಲಿ ಯಾವುದೇ ಚಲನೆ ಇಲ್ಲ, ವೀಲ್ ಚೇರ್ ನಲ್ಲೇ ದಿನ ಕಳೆಯಬೇಕಾದ ಪರಿಸ್ಥಿತಿ, ಇಂತಹ ಪರಿಸ್ಥಿತಿ ಯಾವ ತಾಯಿಗೂ ಬಾರದಿರಲಿ ಕಣ್ಣೀರು ಹಾಕುತ್ತಾರೆ ಚಂದ್ರಕಲಾ ಮೋಹನ್.

'ಪುಟ್ಟಗೌರಿ ಮದುವೆ', 'ರಂಗನಾಯಕಿ', 'ಕಮಲಿ' ಸೇರಿದಂತೆ ಹಲವಾರು ಸೀರಿಯಲ್‌ಗಳಲ್ಲಿ  ಅದ್ಭುತ ಅಭಿನಯ ಮಾಡುತ್ತಾ, ಜನ ಮನಕ್ಕೆ ಹತ್ತಿರವಾಗಿರುವ ಚಂದ್ರಕಲಾ ಮೋಹನ್ (Chandrakala Mohan) ಇನ್ನು ಮುಂದೆ ಕೂಡ ಹೀಗೆ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿಕೊಂಡು ಬರಲಿ ಎಂದು ಶುಭ ಹಾರೈಸೋಣ. 

click me!