ಕೈಯಲ್ಲಿ ಕೊಡಲಿ ಹಿಡಿದು 'ಕಿಲ್ಲರ್' ಆದ ಜ್ಯೋತಿ ರೈ, ಬ್ಯೂಟಿ ಲುಕ್‌ಗೆ ಫ್ಯಾನ್ಸ್‌ ಬೋಲ್ಡ್‌!‌

First Published | Nov 12, 2024, 5:31 PM IST

ಕನ್ನಡ ಮತ್ತು ತೆಲುಗು ಕಿರುತೆರೆಯ ನಟಿ ಜ್ಯೋತಿ ರೈ ತಮ್ಮ ಮುಂಬರುವ ಸಿನಿಮಾ 'ಕಿಲ್ಲರ್‌' ನಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಕೊಡಲಿ ಹಿಡಿದು ರಗಡ್‌ ಲುಕ್‌ನಲ್ಲಿರುವ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕನ್ನಡದ ಕಿರುತೆರೆಯಲ್ಲಿ ಜನಪ್ರಿಯರಾಗಿ ಬಳಿಕ ತೆಲುಗು ಭಾಷೆಯಲ್ಲೂ ಮಿಂಚಿದ್ದ ನಟಿ ಜ್ಯೋತಿ ರೈ ಈಗ ಕಿಲ್ಲರ್‌ ಆಗಿದ್ದಾರೆ. ತಮ್ಮ ಹೊಸ ಸಿನಿಮಾದ ಪೋಸ್ಟರ್‌ಅನ್ನು ಅವರು ಹಂಚಿಕೊಂಡಿದ್ದಾರೆ.
 

ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಹಾಟ್‌ ಪೋಸ್ಟ್‌ಗಳ ಕಾರಣಕ್ಕಾಗಿಯೇ ಸುದ್ದಿಯಲ್ಲಿರುವ ಜ್ಯೋತಿ ರೈ, ಕೈಯಲ್ಲಿ ಕೊಡಲಿ ಹಿಡಿದು ನೀಡಿರುವ ರಗಡ್‌ ಲುಕ್‌ಅನ್ನು ಫ್ಯಾನ್ಸ್‌ ಮೆಚ್ಚಿದ್ದಾರೆ.

Tap to resize

ಕಿಲ್ಲರ್‌ನ ಮೊದಲ ಶೆಡ್ಯುಲ್‌ ಯಶಸ್ವಿಯಾಗಿ ಕಂಪ್ಲೀಟ್‌ ಆಗಿದೆ. ಇಡೀ ಟೀಮ್‌ನಲ್ಲಿ ಸಖತ್‌ ಶಕ್ತಿ ತುಂಬಿದೆ. ಈ ಸಿನಿಮಾದ ಎಕ್ಸ್ಪೀರಿಯನ್ಸ್‌ ಶೀಘ್ರದಲ್ಲೇ ನಿಮಗೆ ತಿಳಿಯಲಿದೆ. ಅದಕ್ಕಾಗಿ ಸರಿಯಾದ ಸಮಯ ಬರಬೇಕಷ್ಟೇ. ಅದ್ಭುತ ಕ್ರಿಯೇಟಿವ್‌ ವರ್ಕ್‌ ನಡೆಯುತ್ತಿದೆ ಎಂದು ಜ್ಯೋತಿ ರೈ ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ಕೆಲವೊಂದಷ್ಟು ಬೋಲ್ಡ್‌ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಒಂದು ಫೋಟೊದಲ್ಲಿ ಲೂಸ್ ಟೀಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ರೆ, ಮತ್ತೊಂದು ಫೋಟೊದಲ್ಲಿ ನಟಿ ಕ್ರಾಪ್ ಟಾಪ್ ಧರಿಸಿ ಮಾದಕ ಭಂಗಿಯಲ್ಲಿ ಪೋಸ್ ಕೊಟ್ಟಿದ್ದರು.
 

ಇನ್ನೊಂದು ಫೋಟೋದಲ್ಲಿ ಕಾರ್‌ನಲ್ಲಿ ಕುಳಿತು ಜ್ಯೋತಿ ರೈ ಪೋಸ್‌ ನೀಡಿದ್ದಾರೆ. ಇದಕ್ಕೆ ಎಂದಿನಂತೆ, ಹಾಟಿ, ಬ್ಯೂಟಿ ಎನ್ನುವ ಕಾಮೆಂಟ್‌ಗಳು ಅವರ ಅಭಿಮಾನಿಗಳಿಂದ ಬಂದಿದೆ.
 

ಚಡ್ಡಿ, ಮಿಡ್ಡಿ ಧರಿಸಿ ಸಾಮಾನ್ಯವಾಗಿ ಪೋಸ್‌ ನೀಡುವ ಜ್ಯೋತಿ ರೈ ಸೀರೆಯಲ್ಲೂ ಕೆಲವು ಫೋಟೋ ಹಂಚಿಕೊಂಡಿದ್ದರು. ಇದಕ್ಕೆ ಅವರ ಅಭಿಮಾನಿಗಳು, ಬ್ಯಾಕ್‌ಲೆಸ್‌ ಬ್ಲೌಸ್‌ ನಿಮಗೆ ಬಹಳ ಸುಂದರವಾಗಿ ಕಾಣುತ್ತದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: 'ಕುಕ್ಕೆ ಸುಬ್ರಹ್ಮಣ್ಯ ರೋಡ್‌ನಲ್ಲಿ ಭಾರೀ ನಿಧಿ..' ಗುಂಡಿ ತೋಡಲು ಇಳಿದ ರಾಜ್ಯ ಸರ್ಕಾರಕ್ಕೆ ಮಂಗಳಾರತಿ!

ಈ ನಡುವೆ ಜ್ಯೋತಿ ರೈ ಕನ್ನಡ ಬಿಗ್‌ ಬಾಸ್‌ ಹಾಗೂ ತೆಲುಗು ಬಿಗ್‌ ಬಾಸ್‌ಗೆ ಹೋಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದೆಲ್ಲವನ್ನೂ ಆಕೆ ತಿರಸ್ಕರಿಸಿದ್ದರು. ಹಾಗಿದ್ದರೂ, ತೆಲುಗು ಬಿಗ್‌ಬಾಸ್‌ಗೆ ಅವರು ವೈಲ್ಡ್‌ ಕಾರ್ಡ್‌ ಎಂಟ್ರಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: Weather Report: ನ.15ರವರೆಗೆ ಬೆಂಗಳೂರಿನಲ್ಲಿ ಮಳೆಯ ಅಬ್ಬರ, ಐಎಂಡಿ ಅಲರ್ಟ್‌

Latest Videos

click me!