ಪತಿ ಜೊತೆ ಲಂಡನ್ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗಿಯಾದ ಕನ್ನಡತಿ ದೀಪಿಕಾ ದಾಸ್

First Published | Nov 12, 2024, 2:57 PM IST

ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್ ಲಂಡನ್ ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಪತಿ ಜೊತೆ ಭಾಗಿಯಾಗಿದ್ದಾರೆ. 
 

ಕನ್ನಡ ಕಿರುತೆರೆ ಮತ್ತು ಬಿಗ್ ಬಾಸ್ ನಲ್ಲಿ ಮಿಂಚಿದ ಚೆಲುವೆ ದೀಪಿಕಾ ದಾಸ್ (Deepika Das) ಸದ್ಯ ವಿದೇಶದಲ್ಲಿ ಪತಿ ಜೊತೆ ಎಂಜಾಯ್ ಮಾಡುತ್ತಿದ್ದು, ಇದೀಗ ಲಂಡನ್ ನಲ್ಲಿದ್ದಾರೆ ಈ ಜೋಡಿ. ವಿಶೇಷ ಕಾರ್ಯಕ್ರಮದಲ್ಲಿ ಈ ಜೋಡಿ ಜೊತೆಯಾಗಿ ಭಾಗವಹಿಸಿದ್ದಾರೆ. 
 

ಲಂಡನ್ ನಲ್ಲಿ ಕನ್ನಡ ಸಂಘಟನೆಯವರು ಕನ್ನಡ ರಾಜ್ಯೋತ್ಸವ (Kannada Rajyotsava) ಹಾಗೂ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಈ ಆಚರಣೆಯಲ್ಲಿ ದೀಪಿಕಾ ದಾಸ್ ಹಾಗೂ ಅವರ ಪತಿ ದೀಪಕ್ ಗೌಡ ಭಾಗಿಯಾಗಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

Tap to resize

ದೀಪಿಕಾ ದಾಸ್ ಕೆಂಪು ಬಣ್ಣದ ಗೋಲ್ಡನ್ ಬಾರ್ಡರ್ ಇರುವ ಸೀರೆಯನ್ನು ಉಟ್ಟಿದ್ದು, ಅದಕ್ಕೆ ಗೋಲ್ಡನ್ ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಪೋಸ್ ಕೊಟ್ಟಿದ್ದು, ತುಂಬಾನೆ ಸುಂದರವಾಗಿ ಕಾಣಿಸ್ತಿದ್ದಾರೆ. 
 

ಕನ್ನಡಿಗರು ಯುಕೆ ಸಂಸ್ಥೆಯ ಎಲ್ಲಾ ಸದಸ್ಯರಿಗೆ ಧನ್ಯವಾದಗಳು ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!  ಎಂದು ಕ್ಯಾಪ್ಶನ್ ಹಾಕಿರುವ ದೀಪಿಕಾ ದಾಸ್, ಕುತ್ತಿಗೆಗೆ ಕೆಂಪು ಮತ್ತು ಹಳದಿ ಕನ್ನಡದ ಬಾವುಟದ ಬಣ್ಣದ ಶಲ್ಯ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 
 

ದೀಪಿಕಾ ದಾಸ್ ಜೊತೆ ಅವರ ಪತಿ ದೀಪಕ್ ಕೂಡ ಭಾಗಿಯಾಗಿದ್ದು, ಅವರು ಜೀನ್ಸ್ ಪ್ಯಾಂಟ್, ವೈಟ್ ಶರ್ಟ್, ಅದರ ಮೇಲೆ ಕಪ್ಪು ಜಾಕೆಟ್ ಹಾಗೂ ಕೆಂಪು ಮತ್ತು ಹಳದಿ ಬಣ್ಣದ ಶಲ್ಯ ಧರಿಸಿದ್ದಾರೆ. ಜೊತೆಗೆ ಇಬ್ಬರು ಜೊತೆಯಾಗಿ ಯುಕೆ ಕನ್ನಡಿಗರ ಜೊತೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ. 
 

ಅಷ್ಟೇ ಅಲ್ಲ ದೀಪಿಕಾ ದಾಸ್ ಲಂಡನ್ ನಲ್ಲಿ ನಡೆದ ಕನ್ನದ ಕಾರ್ಯಕ್ರಮದಲ್ಲಿ ತಮ್ಮ ಹೊಸ ಸಿನಿಮಾವಾದ ಪಾರು -ಪಾರ್ವತಿಯ (Paaru Parvathi) ಪೋಸ್ಟರ್ ರಿಲೀಸ್ ಮಾಡುವ ವಿಡಿಯೋ ತುಣುಕನ್ನ ಸಹ ಹಂಚಿಕೊಂಡಿದ್ದು, ಸಿನಿಮಾ ಶೀಘ್ರದಲ್ಲಿ ಬಿಡುಗಡೆಯಾಗೋದಾಗಿ ತಿಳಿಸಿದ್ದಾರೆ. 
 

ಬಿಗ್ ಬಾಸ್ ಸೀಸನ್ 7 (Bigg Boss Season 7) ರ ಬಳಿಕ ನಟನೆಯಿಂದ ದೂರ ಉಳಿದಿದ್ದ ದೀಪಿಕಾ ದಾಸ್, ಹೆಚ್ಚಾಗಿ ಟ್ರಾವೆಲ್ ಮಾಡುತ್ತಿದ್ದರು. ಈ ವರ್ಷ ಎಲ್ಲೂ ಸುದ್ದಿ ಮಾಡದೆ ಗೋವಾದಲ್ಲಿ ದೀಪಕ್ ಜೊತೆ ಸಪ್ತಪದಿ ತುಳಿದ ದೀಪಿಕಾ ದಾಸ್, ಮದ್ವೆ ಬಳಿಕ ಪತಿ ಜೊತೆ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ದಾರೆ. 
 

Latest Videos

click me!