11-11 ವಿಶೇಷ ದಿನದಂದು ಕುಟುಂಬದ ಜೊತೆ ಕಾಮಾಕ್ಯ ದೇವಿ ದರ್ಶನ ಪಡೆದ ಸಾನ್ಯಾ ಅಯ್ಯರ್

First Published | Nov 12, 2024, 12:28 PM IST

ಸ್ಯಾಂಡಲ್ ವುಡ್ ನಟಿ ಸಾನ್ಯಾ ಅಯ್ಯರ್ ತಮ್ಮ ಕುಟುಂಬದ ಜೊತೆ 11-11 ರ ವಿಶೇಷ ದಿನದಂದು ಕುಟುಂಬದ ಜೊತೆ ಕಾಮಾಕ್ಯಾ ಮಂದಿರ ದರ್ಶನ ಪಡೆದಿದ್ದಾರೆ. 
 

ಸ್ಯಾಂಡಲ್ ವುಡ್ ನಟಿ ಸಾನ್ಯಾ ಅಯ್ಯರ್ (Saanya Iyer), ಎರಡು ದಿನಗಳ ಹಿಂದೆ ಸೋಶಿಯಲ್ ಮೀಡೀಯಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ನಟಿ ಮತ್ತೆ ತಮ್ಮ ಸ್ಪಿರೀಚುವಲ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

ಪುಟ್ಟ ಗೌರಿಯ ಮದುವೆ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ನಟಿಸಿದ್ದ ಸಾನ್ಯಾ, ನಂತರ ಜನಪ್ರಿಯತೆ ಪಡೆದದ್ದು ಬಿಗ್ ಬಾಸ್ ಸೀಸನ್ 9 (Bigg Boss Season 9)  ರಮೂಲಕ, ನಂತರ ಗೌರಿ ಸಿನಿಮಾ ಮೂಲಕ ನಾಯಕ ನಟಿಯಾಗಿಯೂ ಮಿಂಚಿದರು. 
 

Tap to resize

ಸಾನ್ಯಾ ಸೋಶಿಯಲ್ ಮೀಡಿಯಾ ನೋಡಿದ್ರೆ, ಅವರ ಮಾಡರ್ನ್, ಟ್ರೆಡೀಶನಲ್ ಅವತಾರಗಳ ಫೋಟೊ ಶೂಟ್ ಕಾಣಬಹುದು. ಕೆಲವೊಮ್ಮೆ ನಟಿ ತುಂಬಾನೆ ಬೋಲ್ಡ್ ಅಂತ ಅನಿಸಿದ್ರೆ, ಮತ್ತೊಮ್ಮೆ ಇವರು ಇಷ್ಟೊಂದು ಧಾರ್ಮಿಕವಾಗಿರ್ತಾರ ಎನ್ನುವಷ್ಟು ಡಿವೈನ್ ಆಗಿರ್ತಾರೆ. 
 

ಇದೀಗ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದೆರಡು ಹೊಸ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಆಧ್ಯಾತ್ಮಿಕತೆ, ದೈವ ಭಕ್ತಿಯ ಕಡೆಗೆ ಹೆಚ್ಚಿನ ಒಲವು ಹೊಂದಿರುವ ಸಾನ್ಯಾ ಅಯ್ಯರ್ ತಮ್ಮ ಕುಟುಂಬದ ಜೊತೆಗೆ ಕಾಮಾಕ್ಯ ಮಂದಿರಕ್ಕೆ (Kamakya Mandir) ಭೇಟಿ ನೀಡಿದ್ದಾರೆ. 
 

ನವಂಬರ್ 11 ರಂದು ಅಂದ್ರೆ 11.11 ರ ವಿಶೇಷ ಸಂದರ್ಭದಂದು ಸಾನ್ಯಾ ತಮ್ಮ ಅಮ್ಮ ದೀಪಾ ಅಯ್ಯರ್, ಚಿಕ್ಕಮ್ಮನವರಾದ ರೂಪಾ ಅಯ್ಯರ್, ಶಿಲ್ಪಾ ಅಯ್ಯರ್ ಹಾಗೂ ಅಜ್ಜಿ ಜೊತೆಗೆ ಅಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಿ ಮಂದಿರಕ್ಕೆ ಭೇಟಿ ನೀಡಿ, ತಾಯಿಯ ದರ್ಶನ ಪಡೆದು ಬಂದಿದ್ದಾರೆ. 
 

ಶರಣಾಗಿ, ಬಿಟ್ಟುಬಿಡಿ ಮತ್ತು ನಿಮ್ಮ ಅಪ್ ಡೇಟೆಡ್ ವರ್ಷನ್ ಗೆ ಕಾಲಿಡಿರಿ, ನಿಮಗಾಗಿ ಏನು ಉದ್ದೇಶಿಸಲಾಗಿದೆಯೋ ಅದು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ! ಜೈ ಮಾ. ಎಂದು ಕ್ಯಾಪ್ಶನ್ ಹಾಕಿದ್ದಾರೆ. ಸಾನ್ಯಾ ಹೆಚ್ಚಾಗಿ ತಮ್ಮ ಫ್ಯಾಮಿಲಿ ಜೊತೆ ಸ್ಪಿರೀಚುವಲ್ ಜರ್ನಿ ಮಾಡುತ್ತಲೇ ಇರುತ್ತಾರೆ. 
 

ಈ ಹಿಂದೆ ಆಗಸ್ಟ್ ತಿಂಗಳ 8ನೇ ತಾರೀಕಿನಂದು, ಅಂದರೆ 8.8 ರಂದು ಕೊಲ್ಕತ್ತಾದ ಕಾಳೀ ಘಾಟ್ ಗೆ ಕುಟುಂಬದ ಜೊತೆ ಭೇಟಿ ನೀಡಿ ಕಾಳಿ ದೇವಿಯ ದರ್ಶನ ಪಡೆದು ಬಂದಿದ್ದಾರೆ. ಸಾನ್ಯಾ ತಮ್ಮ ಫ್ಯಾಮಿಲಿ ಜೊತೆ ದೇಶದ -ವಿದೇಶದ ಹೆಚ್ಚಿನ ದೇವಾಲಯಗಳ ದರ್ಶನ ಮಾಡುತ್ತಲೇ ಇರುತ್ತಾರೆ. 
 

Latest Videos

click me!