ನಾಗಿಣಿ ಸೇರಿ ಹಲವು ಸೀರಿಯಲ್ ಗಳಲ್ಲಿ ನಟಿಸಿರುವ ನಿನಾದ್ ಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟ ಧಾರಾವಾಹಿ ಆಸೆ (Aase Serial). ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ, ಎಲ್ಲರಿಂದಲೂ ಬೈಸಿಕೊಳ್ಳುವ ಕುಡುಕ ಸೂರ್ಯನ ಜೀವನದಲ್ಲಿ ಅಚಾನಕ್ ಆದ ಮದುವೆ ಏನೆಲ್ಲಾ ಬದಲಾವಣೆ ತರುತ್ತೆ ಅನ್ನೋದು ಸೀರಿಯಲ್ ಕಥೆ. ಸೂರ್ಯನ ನಟನೆಗೆ ಜನರು ಫಿದಾ ಆಗಿದ್ದಾರೆ. ಅವರ ನಟನೆ, ಕಥೆ ನೋಡಿದರೆ, ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆಗಳೇನೋ ಎನಿಸುತ್ತೆ. ಅಷ್ಟೊಂದು ಹಚ್ಚಿಕೊಂಡಿದ್ದಾರೆ ಜನ.