Amruthadhaare Serial: ಮಲ್ಲಿ ತಂಟೆಗೆ ಬಂದ ಜೈ ದೇವ್ ಎದುರು ಬೆಂಕಿ ಚೆಂಡಾದ ಭೂಮಿಕಾ

Published : Jun 23, 2025, 07:15 PM IST

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಕೆನ್ನೆಗೆ ಹೊಡೆಯೋದಕ್ಕೆ ಬಂದ ಜೈದೇವ್ ಗೆ ಕಪಾಳ ಮೋಕ್ಷ ಮಾಡಿ ಚೆನ್ನಾಗಿ ಬೆಂಡೆತ್ತಿದ್ದಾಳೆ ಭೂಮಿಕಾ.

PREV
17

ಅಮೃತಧಾರೆಯಲ್ಲಿ (Amruthadhaare) ಇದೀಗ ಭೂಮಿಕಾ ಎದುರು ಜೈದೇವ್ ಅಸಲಿ ಮುಖವಾಡ ಕಳಚಿ ಬಿದ್ದಿದ್ದು, ಜೈದೇವ್ ನೀಚ ಬುದ್ದಿಗೆ ಸರಿಯಾಗಿಯೇ ಪಾಠ ಕಲಿಸುತ್ತಾಳೆ ಭೂಮಿಕಾ. ಇವತ್ತಿನ ಪ್ರೊಮೋ ಬಿಡುಗಡೆಯಾಗಿದ್ದು, ಭೂಮಿ ಕೈಯಿಂದ ಜೈದೇವ್ ಗೆ ಕಪಾಳ ಮೋಕ್ಷ ಆಗಿದೆ.

27

ಅಷ್ಟಕ್ಕೂ ಆಗಿರೋದು ಏನು? ಸುಜನ್ ಜೊತೆ ಕಾರಲ್ಲಿ ಮನೆಗೆ ವಾಪಾಸ್ ಬರುತ್ತಿರುವ ಭೂಮಿಕಾಗೆ, ಜೈದೇವ್ ಯಾವುದೋ ಹುಡುಗಿ ಜೊತೆ ಬಟ್ಟೆಯಂಗಡಿ ಒಳಗೋಗಿರೋದು ಕಂಡಿದೆ, ಭೂಮಿಕಾ ಅಲ್ಲೇ ಇಳಿದು, ಯಾರ ಜೊತೆ ಜೈದೇವ್ ಇದ್ದಾನೆ ಅನ್ನೋದನ್ನು ನೋಡಿದ್ರೆ, ದಿಯಾ ಇರುವುದು ಕಂಡು ಬಂದಿದೆ. ಹಾಗಿದ್ರೆ ಇಷ್ಟು ದಿನ ಜೈ ದೇವ್ ಮಾಡಿರೋದೆಲ್ಲಾ ಬರಿ ನಾಟಕ ಅನ್ನೋದು ಭೂಮಿಕಾಗೆ ಅರ್ಥ ಆಗಿದೆ.

37

ಈಗ ತನ್ನ ತವರು ಮನೆಗೆ ಹೋಗದ ಭೂಮಿಕಾ, ನೇರವಾಗಿ ಗಂಡನ ಮನೆಗೆ ಬಂದಿದ್ದಾಳೆ, ಮಲ್ಲಿ ಮುಂದೆ ಜೈದೇವ್ ಬಗ್ಗೆ ಹೇಳಿದ್ದಾಳೆ. ಮಲ್ಲಿ ತನಗೆ ಈಗಾಗಲೇ ಎಲ್ಲಾ ಗೊತ್ತಿದೆ ಅನ್ನೋದನ್ನು ಹೇಳಿ ಏನೇನು ನಡೆದಿದೆ, ಎಲ್ಲವನ್ನೂ ಭೂಮಿಕಾ ಎದುರು ಬಾಯ್ಬಿಡುತ್ತಾಳೆ. ಇದರಿಂದ ಭೂಮಿಕಾ ಕಿಡಿಕಾರುತ್ತಾಳೆ.

47

ಇನ್ನೊಂದು ಕಡೆ ಮನೆಗೆ ವಾಪಾಸ್ ಬಂದ ಜೈದೇವ್, ಮಲ್ಲಿ ಮುಂದೆ ನಿಂತು, ಆಕೆಯನ್ನು ಕೆಣಕುತ್ತಾನೆ, ನಿನ್ನಿಂದ ಏನು ಮಾಡಲು ಆಗಲ್ಲ ಎನ್ನುತ್ತಾನೆ. ಇದರಿಂದ ಕೋಪಗೊಂಡ ಮಲ್ಲಿ, ದಿಯಾ ಮೂರು ಬಿಟ್ಟವಳು, ಇಬ್ಬರಿಗೂ ಮರ್ಯಾದೆ ಇಲ್ಲ ಜೋಡಿ ಚೆನ್ನಾಗಿದೆ. ಇನ್ನು ಮಾಡೋದೇನು ಅವಳಿಗೆ ಮಾಡಿದ ಹಾಗೆ ನಿಮಗೂ ಪೊರಕೆ ಸೇವೆ ಮಾಡಿದ್ರೆ ಚೆನ್ನಾಗಿರುತ್ತೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾಳೆ ಮಲ್ಲಿ. ಇದನ್ನು ಕೇಳಿ ಕೆರಳಿದ ಜೈದೇವ್ ಮಲ್ಲಿಗೆ ಹೊಡೆಯೋದಕ್ಕೆ ಕೈ ಎತ್ತುತ್ತಾನೆ.

57

ಅಷ್ಟೇ ಜೈದೇವ್ ಕೆನ್ನೆಗೆ ಜೋರಾಗಿ ಒಂದು ಏಟು ಬೀಳುತ್ತೆ. ಭೂಮಿಕಾ ಜೈದೇವ್ ಗೆ ಕಪಾಳ ಮೋಕ್ಷ ಮಾಡುತ್ತಾ, ಇಷ್ಟು ಚೀಪ್ ಆಗಿ ರೂಡ್ ಆಗಿ ವರ್ತಿಸುವ ನಿಮಗೆ ಏನೂ ಅನಿಸೋದೆ ಇಲ್ವ? ಮನುಷ್ಯತ್ವಾನೆ ಇಲ್ವಾ? ಹೆಂಡ್ತಿ ಜೊತೆ ಹೇಗೆ ನಡ್ಕೋಬೇಕು, ನಡಿಸ್ಕೊಂಡು ಹೋಗ್ಬೇಕು ಅನ್ನೋದು ಗೊತ್ತಿಲ್ವಾ ನಿಮಗೆ ಎನ್ನುತ್ತಾಳೆ.

67

ಕೊನೆಗೆ ಪ್ರಾಣಿಗಳಿಗೂ ಒಂದಷ್ಟು ಎಥಿಕ್ಸ್ ಅಂತಾ ಇದೆ, ನೀವು ಅದಕ್ಕಿಂತಲೂ ಕೆಟ್ಟದಾಗಿ ನಡೆದುಕೊಳ್ಳುತ್ತೀದ್ದೀರಿ ಜೈದೇವ್ ಎನ್ನುತ್ತಾಳೆ ಭೂಮಿಕಾ. ಇದನ್ನು ಕೇಳಿ ಹಲ್ಲು ಕಡೆಯುತ್ತಾ ಜೈದೇವ್ ಏನ್ ಮಾತಾಡ್ತಾ ಇದ್ದೀರಾ ಎಂದಾಗ ಭೂಮಿ, ಇರುವ ವಿಷಯವನ್ನೆ ಮಾತನಾಡ್ತಿದ್ದೀನಿ. ಇವತ್ತು ನಿಮ್ಮ ಅವತಾರನ ನಾನು ನನ್ನ ಕಣ್ಣಾರೆ ನೋಡಿದ್ದೀನಿ ಎನ್ನುತ್ತಾಳೆ ಭೂಮಿಕಾ.

77

ಈ ಪ್ರೊಮೋವನ್ನು ಜನರು ಮೆಚ್ಚಿಕೊಂಡಿದ್ದು, ಸೂಪರ್ ಭೂಮಿಕಾ,ನಾರಿ ಮುನಿದರೆ ಮಾರಿ ಅಂತ ತೋರ್ಸಬಿಟ್ಟೆ, ಭೂಮಿ ಅಕ್ಕ ಜೈ ಗೆ ಸರಿಯಾಗಿ ಬುದ್ಧಿ ಕಲಿಸಬೇಕು, ಅತ್ತಿಗೆ ಅಂದರೆ ಹೀಗೆ ಇರಬೇಕು ಎಷ್ಟು ಅಂದ್ರೆ ಟೀಚರ್ ಅಲ್ವಾ? ಪಾಠ ಮಾಡೋಕೋ ಗೊತ್ತು, ಅದನ್ನ ಹೇಗೆ ಸರಿ ಮಾಡೋದು ಅಂತಾನು ಗೊತ್ತು ಎಂದು ಮೆಚ್ಚಿಕೊಂಡಿದ್ದಾರೆ.

Read more Photos on
click me!

Recommended Stories