ಎಲ್ಲಾ ವೈರಲ್​ ಮಾಡಿದ್ರಲ್ವಾ, ಈಗ ನಾವು ಹೇಳೋದನ್ನು ಕೇಳಿಸ್ಕೊಳ್ಳಿ: ಲೈವ್​ನಲ್ಲಿ ಗೀತಾಭಾರತಿ ಗರಂ

Published : Jun 16, 2026, 09:42 PM IST

'ಜೋಡಿ ನಂ. 1' ಶೋನಲ್ಲಿ ಪತಿಯ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದ ನಟಿ ಗೀತಾ ಭಾರತಿ ಭಟ್, ಟಿಆರ್‌ಪಿಗಾಗಿ ನಾಟಕವಾಡಿದ್ದಾರೆಂದು ಟ್ರೋಲ್ ಆಗಿದ್ದರು. ಇದಕ್ಕೆ ಲೈವ್ ಮೂಲಕ ಉತ್ತರಿಸಿದ ಗೀತಾ-ರಾಜಾರಾಮ್ ದಂಪತಿ, ಟ್ರೋಲಿಗರ ಮನಸ್ಥಿತಿಯನ್ನು ಪ್ರಶ್ನಿಸಿ ಖಡಕ್ ಉತ್ತರ ನೀಡಿದ್ದಾರೆ.

PREV
16
ಜೋಡಿ ನಂ. 1 ಷೋ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಜೋಡಿ ನಂ. 1. ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ‘ಬ್ರಹ್ಮಗಂಟು’ ಖ್ಯಾತಿಯ ಗೀತಾ ಭಾರತಿ ಭಟ್ ಹಾಗೂ ರಾಜಾರಾಮ್ ದಂಪತಿ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟ್ರೋಲ್​​ ಆಗಿದ್ದರು.

26
ಏನಿದು ಡೈಲಾಗ್​?

ಅದಕ್ಕೆ ಕಾರಣ, ಈ ಷೋನಲ್ಲಿ ಒಂದು ಹಂತದಲ್ಲಿ ಗೀತಾ ಅವರು ಪತಿಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು. 'ನಾನೇನಾದ್ರು ಮಾತಾಡಿದ್ರೆ, ಹೇಯ್ ಎಕ್ಸ್ಟ್ರಾ ಮಾತುಗಳನ್ನು ಆಡ್ಬೇಡಮ್ಮ, ಏನಕ್ಕೆ ಇದೆಲ್ಲಾ ಡ್ರಾಮಾ ಮಾಡ್ತಿಯಾ, ನನಗೊಂದು ನ್ಯಾಯ, ನಿಮಗೊಂದು ನ್ಯಾಯ ಏನಕ್ಕೆ ಎಂದಿದ್ರು. ನಾನು ಬಿಕ್ಕಿ ಬಿಕ್ಕಿ ಅತ್ತಿರುವಾಗ ಗೇಲಿ ಮಾಡಿದ್ದೀರಾ ಏನಕ್ಕೆ? ದೂರ ತಳ್ಬೋದು, ಆದ್ರೆ ನಾನು ಎಷ್ಟೋ ಸಲ ಅತ್ತುಕೊಂಡು ಮಲಗಿದ್ದೀನಿ, ಆದರೆ ನನ್ನ ಅತ್ತುಕೊಂಡು ಮಲಗೋಕೆ ಬಿಡಬೇಡಿ ಅಷ್ಟೇ' ಎಂದಿದ್ದರು.

36
ಟಿಆರ್​ಪಿಗೋಸ್ಕರ್ ದುಡ್ಡು ತಗೊಂಡು...

ಇದಕ್ಕಾಗಿ ನಾಲ್ಕು ಗೋಡೆಗಳ ಮಧ್ಯೆ ಇರೋ ವಿಷ್ಯವನ್ನು ಟಿಆರ್​ಪಿಗೋಸ್ಕರ, ದುಡ್ಡನ್ನು ಪಡೆದು ಇಂಥ ರಿಯಾಲಿಟಿ ಷೋನಲ್ಲಿ ಹೇಳಿರುವುದಾಗಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದೆ. ಇಂಥ ವಿಷ್ಯ ಕ್ಯಾಮೆರಾ ಮುಂದೆ ಹೇಳುವ ಅಗತ್ಯವೇನಿದೆ, ಸೆಲೆಬ್ರಿಟಿಯಾಗಿ ಹೀಗೆ ಮಾಡಬಾರದು ಎಂದು ತಿಳಿಯುವುದಿಲ್ಲವೆ, ದುಡ್ಡು ಪಡೆದುಕೊಂಡು ಇಂಥ ಪರ್ಸನಲ್​ ವಿಷ್ಯ ಮಾತನಾಡ್ಬೋದಾ ಎಂದೆಲ್ಲಾ ಪ್ರಶ್ನೆ ಮಾಡಿದ್ದರು.

46
ಲೈವ್​ಗೆ ಬಂದು ಹೇಳಿಕೆ

ಇದಕ್ಕೆ ನಟಿ ಗೀತಾ ಭಾರತಿ ಮತ್ತು ರಾಜಾರಾಮ್​ ಅವರು ಲೈವ್​ನಲ್ಲಿ ಬಂದು ಟ್ರೋಲ್​ ಮಾಡಿದವರಿಗೆ ಚಳಿ ಬಿಡಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನೀವು ಇಷ್ಟು ದಿನ ಮಾತನಾಡಿದ್ದನ್ನೆಲ್ಲಾ ನಾವು ಪೇಷನ್ಸ್​ನಿಂದ ಕೇಳಿಸಿಕೊಂಡ್ವಿ. ಈಗ ನಾವು ಮಾತನಾಡೋದನ್ನು ನೀವು ಕೇಳಿಸಿಕೊಳ್ಳಿ ಎಂದು ಆರಂಭಿಸಿ ಟ್ರೋಲ್​ ಮಾಡಿದವರ ವಿರುದ್ಧ ಗರಂ ಆಗಿದ್ದಾರೆ.

56
ನಾಲ್ಕು ಗೋಡೆಗಳ ನಡುವಿನ ವಿಷ್ಯ

ಎಷ್ಟು ಒಳ್ಳೆಯ ವಿಷಯಗಳ ಬಗ್ಗೆ ಮಾತನಾಡಿದ್ವಿ. ಅದನ್ನು ಹೇಳದೇ ಯಾವುದೋ ಒಂದು ವಿಷ್ಯ ಇಟ್ಟುಕೊಂಡು ವೈರಲ್​ ಮಾಡಿದ್ರಿ. ನಾಲ್ಕು ಗೋಡೆಗಳ ನಡುವಿನ ವಿಷ್ಯ ಎಂದ್ರಿ. ನಾಲ್ಕು ಗೋಡೆಗಳ ನಡುವಿನ ವಿಷ್ಯವನ್ನು ನಾಲ್ಕು ಗೋಡೆಗಳ ನಡುವೆ ಇಟ್ಟುಕೊಂಡಿದ್ದೇವೆ. ಅದನ್ನೇನೂ ನಾವು ಮಾತನಾಡಲಿಲ್ಲ. ಆದರೆ ಕಾಂಟ್ರವರ್ಸಿ ಮಾಡಿ ವೈರಲ್​ ಮಾಡಿದ್ದು ವಿಚಿತ್ರ ಎಂದಿದ್ದಾರೆ.

66
ಸಮಸ್ಯೆ ಇರೋದು ನಿಮ್ಮ ಮನಸ್ಥಿತಿಯಲ್ಲಿ

ಟಿಆರ್​ಪಿಗೋಸ್ಕರ, ದುಡ್ಡು ಗೋಸ್ಕರ ಮಾಡ್ತಾ ಇದ್ದೀವಿ ಎಂದೆಲ್ಲಾ ಹೇಗೆ ಮಾತನಾಡ್ತೀರಾ? ಅವೆಲ್ಲಾ ನಿಮ್ಮ ಓಪಿನಿಯನ್​ ಆಗಿರಬಹುದು. ನಮಗೆ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಲ್ಲವೂ ಗೊತ್ತಿದೆ. ನೀವು ಒಪೀನಿಯನ್​ ಕೊಡೋದು ಬಿಡಿ. ಸಮಸ್ಯೆ ಇರೋದು ಈ ಷೋನಲ್ಲಿ ಅಲ್ಲ. ಬದಲಿಗೆ ನಿಮ್ಮ ಮನಸ್ಥಿತಿಯಲ್ಲಿ. ಇಂಥ ವಿಷ್ಯಗಳನ್ನು ವೈರಲ್​ ಮಾಡೋ ಮುನ್ನ ಯೋಚನೆ ಮಾಡಿ. ಎಷ್ಟೋ ಮಂದಿ ಫೋನ್​ ಮಾಡಿ ನಾನು ಮಾತನಾಡಿರುವುದು ಸರಿ, ನಮಗೂ ಇಂಥ ಸಮಸ್ಯೆ ಇದೆ ಎಂದಿದ್ದಾರೆ. ಆದರೆ ಕೆಲವರು ಅದನ್ನು ಟ್ರೋಲ್​ ಮಾಡ್ತಾ ಇದ್ದಾರೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories