ಜಾಹ್ನವಿ ಮನೆಗೆ ಹೊಸ ಅತಿಥಿ ಆಗಮನ... ಮೊಲಕ್ಕೂ ಮುಹೂರ್ತ ಇಡದೇ ಬಿಡೋದಿಲ್ಲ ಸೈಕೋ ಜಯಂತ್ ಅಂತಿದ್ದಾರೆ ಜನ!

First Published | Oct 30, 2024, 5:22 PM IST

ಒಬ್ಬಂಟಿಯಾಗಿದ್ದ ಜಾಹ್ನವಿ ಮನೆಗೆ ಇದೀಗ ಹೊಸ ಅತಿಥಿಯ ಆಗಮನ ಆಗಿದೆ… ಜಾಹ್ನವಿ ಫುಲ್ ಖುಷಿಯಾಗಿದ್ದಾಳೆ. ಆದ್ರೆ ವೀಕ್ಷಕರು ಮಾತ್ರ, ಇನ್ನು ಸ್ವಲ್ಪ ದಿನದಲ್ಲಿ ಆ ಬಡ ಜೀವಕ್ಕೆ ಏನಾಗುತ್ತೋ ಅಂತಿದ್ದಾರೆ. 
 

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೈಕೋ ಜಯಂತ್ ನ ಅತಿಯಾದ ಪ್ರೀತಿಯಲ್ಲಿ ಕಟ್ಟು ಬಿದ್ದು ತನ್ನವರಿಂದ ದೂರ ಉಳಿದಿರುವ ಜಾಹ್ನವಿಗೆ ಇನ್ನೂ ಕೂಡ ತನ್ನ ಪತಿ ಎಂಥವರು ಅನ್ನೋದು ಅರ್ಥವೇ ಆಗಿಲ್ಲ. ಇನ್ನೂ ಕೂಡ ನನ್ನ ಗಂಡ ನನ್ನನ್ನು ತುಂಬಾನೆ ಪ್ರೀತಿಸ್ತಾರೆ, ನಾನು ಕೇಳಿರೋದನ್ನೆಲ್ಲಾ ಮೊದ್ಲೇ ತಂದು ಕೊಡ್ತಾರೆ ಅಂದುಕೊಂಡಿದ್ದಾಳೆ. 

ಆದರೆ ಜಯಂತ್ ನ ಅತಿಯಾದ ಪ್ರೀತಿ, ಜಾಹ್ನವಿ ನನಗೆ ಮಾತ್ರ ಸೀಮಿತ ಅನ್ನೋ ಹುಚ್ಚು, ಆಕೆಯನ್ನು ಬೇರೆ ಯಾರು ಮುಟ್ಟಬಾರದು, ಮಾತನಾಡಬಾರದು ಎನ್ನುವ ಮನಸ್ಥಿತಿ ಜಯಂತ್ ನದ್ದು, ಆದ್ರೆ ಜಾಹ್ನವಿ ಬೆಳೆದ ವಾತಾವರಣವೇ ಬೇರೆ, ತುಂಬಿದ ಕುಟುಂಬದಲ್ಲಿ ಬೆಳೆದ, ತುಂಬಿದ ಮನೆಯ ಹುಡುಗಿ. 
 

Tap to resize

ದಿನವಿಡೀ ಮನೆಯಲ್ಲೆಲ್ಲಾ ಓಡಾಡುತ್ತಾ, ಬಾಯಿ ತುಂಬಾ ಮಾತನಾಡುತ್ತಿದ್ದ ಜಾಹ್ನವಿಗೆ ಈಗ ದೊಡ್ಡ ಮನೆಯಲ್ಲಿ ಪಂಜರಲ್ಲಿ ಹಾಕಿದಂತಾಗಿದೆ. ಮಾತನಾಡಲು ಒಂದೇ ಒಂದು ಜನ ಇಲ್ಲ. ಫೋನ್ ನೆಟ್ ವರ್ಕ್ ನ್ನು ಸಹ ಜಯಂತ್ ಕಟ್ ಮಾಡಿದ್ದಾನೆ. ಮನೆಯಿಂದ ಹೊರಗೆ ಕಾಲಿಡೋದಕ್ಕೂ ಜಯಂತನ ಪರ್ಮಿಶನ್ ಬೇಕು ಅಂತಹ ಜೈಲೊಂದರಲ್ಲಿ ಜಾಹ್ನವಿ ಬದುಕುತ್ತಿದ್ದಾಳೆ. 
 

ಇದೀಗ ಜಯಂತ್ ತನ್ನ ಪ್ರೀತಿಯ ಚಿನ್ನುಮರಿಗೆ ವಿಶೇಷ ಉಡುಗೊರೆಯೊಂದನ್ನು ತಂದಿದ್ದಾನೆ. ಚಿನ್ನುಮರಿ ಬಳಿ ಬಂದು ಜಯಂತ್, ಚಿನ್ನುಮರಿ ನಾನು ಆಫೀಸ್ ಗೆ ಹೋದ ನಂತರ ನೀವು ಒಬ್ಬಂಟಿಯಾಗ್ತೇನೆ ಹೇಳಿದ್ರಲ್ವಾ, ಅದಕ್ಕೆ ನಿಮಗೊಂಡು ಪಾರ್ಟ್ನರ್ ನ ಕರ್ಕೊಂಡು ಬಂದಿದ್ದೀನಿ ಅಂತ ಹೇಳಿ, ಪುಟ್ಟ ಮೊಲವನ್ನು ಉಡುಗೊರೆಯಾಗಿ ನೀಡ್ತಾನೆ ಜಯಂತ್. 
 

ಇದನ್ನ ನೋಡಿ ಜಾಹ್ನವಿ ಫುಲ್ ಖುಷಿಯಾಗಿದ್ದಾಳೆ. ಇನ್ನು ಮುಂದೆ ನೀವು ಒಂಟಿಯಾಗಿರೋದಿಲ್ಲ. ಇದರ ಜೊತೆಗೆ ನೀವು ಆಟ ಆಡ್ಬೋದು, ಮಾತನಾಡಬಹುದು, ಮುದ್ದು ಮಾಡಬಹುದು ಅಂತಾನೆ ಜಯಂತ್. ಆದರೆ ವೀಕ್ಷಕರಿಗೆ ಮಾತ್ರ ಅಯ್ಯೋ ಆ ಮೊದಲ ಗತಿ ಏನಪ್ಪಾ… ಇನ್ನು ಸ್ವಲ್ಪ ದಿನದಲ್ಲೇ ಅದು ಸತ್ತಿರುತ್ತೆ ಅಂತ ಭವಿಷ್ಯ ನುಡಿತಿದ್ದಾರೆ. 
 

ಹೌದು, ಪ್ರೊಮೋ ರಿಲೀಸ್ ಆಗುತ್ತಿದ್ದಂತೆ ಕಾಮೆಂಟ್ ಗಳ ಸುರಿಮಳೆ ಸುರಿಸಿದ ವೀಕ್ಷಕರು ಪಾಪ ಗುರು ಅ ಮೊಲ ಏನ್ ಕರ್ಮ ಮಾಡಿದ್ಯೋ ಗೊತ್ತಿಲ್ಲ ಹೋಗಿ ಹೋಗಿ ಈ ಜಯಂತ್ ಕೈಲಿ ಸಿಗಕೊಂಡಿದ್ದೆ. ಪಾಪ ಮೊಲಕ್ಕೆ ಏನ್ ಕಾದಿದ್ಯೋ ಏನೋ? ಏನ್ ಮಾಡ್ತಾನೇ ಈ ಸೈಕೋ ಅಂತಾನೂ ಹೇಳಿದ್ದಾರೆ. 
 

ಅಷ್ಟೇ ಅಲ್ಲ ಈ  ಚಿನ್ನು ಮರಿ ಸ್ವಲ್ಪ ದಿನ ಆದ ಮೇಲೆ ಜಯಂತ ಬಿಟ್ಟು ಜಾಸ್ತಿ ಮೊಲ ಜೊತೆ ನೆ ಟೈಮ್ ಕಳೆದ್ರೆ, ಮೊಲದ ಕಥೇನೂ ಮುಗಿಯುತ್ತೆ ಅಂತಾನೂ ಹೇಳಿದ್ದಾರೆ, ಮುಂದೆ ಆಗಲಿರೋದನ್ನ ನೆನೆದು ಈಗ್ಲೇ ಮೊಲಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ ಜನ. ಪಾಪ ಮೊಲ ಅದಿಕ್ಕು ಮುಹೂರ್ತ ಇಡದೆ ಬಿಡಲ್ಲ ಜಯಂತ್. ಜಾಸ್ತಿ ಮೊಲದ ಹತ್ರ ಇದ್ರೆ , ಮೊಲ ನೆಸ್ಟ್ ಕುಕ್ಕರ್ ನಲ್ಲಿ ಇರತ್ತೆ ಹುಷಾರು,  ಅಯ್ಯೋ ದೇವರೇ ಇನ್ನ ಆ ಪಾಪದ ಪ್ರಾಣಿಯ ಕಥೆ ಏನಾಗುತ್ತೋ ಜಾನ್ವಿ ನೀನು ಜಾಸ್ತಿ ಆ ಮೊಲನ ಹಚ್ಕೋ ಬೇಡಮ್ಮ ಸುಮ್ಮನೆ ಜೀವ ತೆಗ್ದಾಕ್ಬಿಡ್ತಾನೆ ನಿನ್ ಗಂಡ ಅಂತಾ ಎಚ್ಚರಿಕೆ ನೀಡಿದ್ದಾರೆ. 
 

Latest Videos

click me!