ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಕನ್ನಡ ಕಿರುತೆರೆಯ ಖತರ್ನಾಕ್ ವಿಲನ್ ರಶ್ಮಿತಾ ಚೆಂಗಪ್ಪ

Published : Oct 30, 2024, 04:24 PM ISTUpdated : Oct 30, 2024, 04:44 PM IST

ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ನಟಿ ವಿಲನ್ ಪಾತ್ರದ ಮೂಲಕ ಜನಪ್ರಿಯತೆ ಪಡೆದ ರಶ್ಮಿತಾ ಚೆಂಗಪ್ಪ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.   

PREV
17
ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಕನ್ನಡ ಕಿರುತೆರೆಯ ಖತರ್ನಾಕ್ ವಿಲನ್ ರಶ್ಮಿತಾ ಚೆಂಗಪ್ಪ

ಕನ್ನಡ ಕಿರುತೆರೆಯಲ್ಲಿ ತಮ್ಮ ನೆಗೆಟಿವ್ ರೋಲ್ (negative role) ಗಳಿಂದಲೇ ಗುರುತಿಸಿಕೊಂಡ ನಟಿ ರಶ್ಮಿತಾ ಚೆಂಗಪ್ಪಾ. ಒಂದೇ ಒಂದು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ಇವರು ಮತ್ತೆ ಆಯ್ಕೆ ಮಾಡಿಕೊಂಡದ್ದು, ಇವರನ್ನು ಹುಡುಕಿಕೊಂಡು ಬಂದಿದ್ದು ನೆಗೆಟೀವ್ ಪಾತ್ರಗಳೇ. 

27

ತಮ್ಮ ನೆಗೆಟೀವ್ ಪಾತ್ರಗಳಿಂದಲೇ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿರುವ ರಶ್ಮಿತಾ,(Rashmitha Changappa) ಅದ್ಭುತ ನಟಿಯೂ ಹೌದು. ಯಾಕಂದ್ರೆ ಇವರು ವಿಲನ್ ಪಾತ್ರಕ್ಕೆ ಎಷ್ಟು ನ್ಯಾಯ ಒದಗಿಸುತ್ತಾರೆ ಅಂದ್ರೆ, ಇವರ ಪಾತ್ರವನ್ನು ನೋಡಿದ ಜನ ಶಾಪ ಹಾಕ್ತಿರ್ತಾರೆ. ಅಷ್ಟೊಂದು ಪವರ್ ಫುಲ್ ಆಗಿರುತ್ತೆ ಇವರ ಪಾತ್ರ. 
 

37

ಮಹಾರಾಣಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ರಶ್ಮಿತಾ, ನಂತ್ರ ಒಂದಾದ ನಂತರ ಒಂದರಂತೆ ಹಲವು ಅವಕಾಶಗಳನ್ನು ಪಡೆದರು. ಗಟ್ಟಿಮೇಳ (Gattimela), ಮತ್ತೆ ವಸಂತ, ಯಾರಿವಳು, ಮೂರುಗಂಟಿ ಸೀರಿಯಲ್ ಗಳಲ್ಲಿ ಇವರು ವಿಲನ್ ಆಗಿ ಅಬ್ಬರಿಸಿದ್ದರು. 
 

47

ಇನ್ನು ‘ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಚರಿತಾ ಎನ್ನುವ ಅತಿಥಿ ಪಾತ್ರದಲ್ಲಿ ನಟಿಸಿದ ನಟಿ, ಮುಂದೆ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಊರ್ಮಿಳಾ' ಧಾರಾವಾಹಿಯಲ್ಲಿ ನಾಯಕಿಯಾಗಿ  ನಟಿಸಿ ಸೈ ಎನಿಸಿಕೊಂಡಿದ್ದಕ಼ರೂ ಸಹ, ಜನ ಇವರನ್ನ ಗುರುತಿಸಿದ್ದು ವಿಲನ್ ಆಗಿ. 
 

57

ಸದ್ಯ ರಶ್ಮಿತಾ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಕನ್ನಡ ಮೀಡಿಯಂ (Kaveri Kannada Medium) ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಇವರು ಬೃಂದಾ ಎನ್ನುವ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರವನ್ನು ಹಿಂದೆ ಸುಕೃತಾ ನಾಗ್ ನಿರ್ವಹಿಸುತ್ತಿದ್ದರು. 
 

67

ಇದೀಗ ಕಿರುತೆರೆಯ ಕ್ಯೂಟ್ ವಿಲನ್ ರಶ್ಮಿತಾ ಚೆಂಗಪ್ಪ ಖುಷಿ ವಿಚಾರವೊಂದನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ವೈವಾಹಿಕ ಜೀವನಕ್ಕೆ ಕಾಲಿಡುವ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಜೊತೆ, ಮದುವೆ ದಿನಾಂಕವನ್ನು ಸಹ ಹಂಚಿಕೊಂಡಿದ್ದಾರೆ. 
 

77

ರಶ್ಮಿತಾ ಚೆಂಗಪ್ಪ ನವಂಬರ್ 3 ರಂದು ಸುದರ್ಶನ್ ಭಂಡಾರಿ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ದಿನಾಂಕದ ಫೋಟೊಗಳನ್ನು (Save the date) ಶೇರ್ ಮಾಡುವ ಮೂಲಕ ನಟಿ Cheers to the new beginning ಎಂದು ಬರೆದುಕೊಂಡಿದ್ದಾರೆ. ನಟಿಗೆ ಸ್ನೇಹಿತರು ಶುಭ ಕೋರಿದ್ದಾರೆ. 
 

click me!

Recommended Stories