ಅಮೃತಧಾರೆಗೆ ಎಂಟ್ರಿ ಕೊಟ್ಟಿರೋ ಕನ್ನಡತಿಯ ಅಮ್ಮಮ್ಮ... ಹಿಂದೆ ಜರ್ಮನಿಯಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿದ್ರು!

Published : Oct 30, 2024, 11:41 AM ISTUpdated : Oct 30, 2024, 12:16 PM IST

ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮನಾಗಿ ಕಾಣಿಸಿಕೊಂಡು ಕನ್ನಡಿಗರ ಮನಗೆದ್ದ ನಟಿ ಚಿತ್ಕಲಾ ಬಿರಾದಾರ್ ಇದೀಗ ಅಮೃತಧಾರೆ ಸೀರಿಯಲ್ ಗೆ ಹೊಸ ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಈ ನಟಿ ಹಿಂದೆ ಹಿಂದೆ ಜರ್ಮನಿಯಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿದ್ರು ಅನ್ನೋದು ನಿಮಗೆ ಗೊತ್ತಾ?   

PREV
17
ಅಮೃತಧಾರೆಗೆ ಎಂಟ್ರಿ ಕೊಟ್ಟಿರೋ ಕನ್ನಡತಿಯ ಅಮ್ಮಮ್ಮ... ಹಿಂದೆ ಜರ್ಮನಿಯಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿದ್ರು!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿ (Kannadati Serial) ಕನ್ನಡಿಗರ ಮೋಸ್ಟ್ ಫೇವರಿಟ್ ಧಾರಾವಾಹಿಗಳಲ್ಲಿ ಒಂದಾಗಿತ್ತು. ಅಲ್ಲಿನ ಪ್ರತಿಯೊಂದು ಪಾತ್ರಗಳನ್ನು ಜನ ಇಷ್ಟ ಪಟ್ಟಿದ್ದರು. ಅದರಲ್ಲೂ ಅಮ್ಮಮ್ಮನ ಪಾತ್ರಕ್ಕಂತೂ ಜನ ಸಿಕ್ಕಾಪಟ್ಟೆ ಪ್ರೀತಿ ಕೊಟ್ಟಿದ್ದರು. ಅದಾದ ನಂತರ ಅಮ್ಮಮ್ಮನ ಪಾತ್ರ್ ವಹಿಸಿದ್ದ ಚಿತ್ಕಲಾ ಬಿರಾದಾರ್ ಬೃಂದಾವನ ಧಾರಾವಾಹಿಯಲ್ಲಿ ನಟಿಸಿದ್ದರು. 
 

27

ಬೃಂದಾವನ ಸೀರಿಯಲ್ ಮೂರು ತಿಂಗಳಷ್ಟೇ ಪ್ರಸಾರವಾದ ಕಾರಣ ಚಿತ್ಕಲಾ (Chithkala Biradar)ಅವರನ್ನ ತುಂಬಾ ಸಮಯದವರೆಗೆ ಕಿರು ತೆರೆಯ ಮೇಲೆ ನೋಡೋದಕ್ಕೆ ಸಾಧ್ಯ ಆಗಿರಲಿಲ್ಲ. ಚಿತ್ಕಲಾ ಮುಂದೆ ಯಾವ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆಗಳನ್ನು ಕೇಳುತ್ತಾ ಇರುವಂತೆ ಇದೀಗ ನೆಚ್ಚಿನ ಅಮ್ಮಮ್ಮ ಝೀ ವಾಹಿನಿಯಲ್ಲಿ ಒಂದು ವಿಶೇಷ ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. 
 

37

ಹೌದು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ (Amruthadhare serial) ಅಮೃತಧಾರೆಯಲ್ಲಿ ಸುಧಾ ಅವರ ತಾಯಿ ಭಾಗ್ಯ ಪಾತ್ರದಲ್ಲಿ ಚಿತ್ಕಲಾ ಬಿರಾದಾರ್ ಕಾಣಿಸಿಕೊಂಡಿದ್ದಾರೆ. ಈಗಷ್ಟೇ ಪಾತ್ರದ ಪರಿಚಯ ಆಗಿದೆ. ಸುಧಾ ತಾಯಿ ಹಾಸಿಗೆ ಹಿಡಿದಿರುವ ಮಹಿಳೆ. ಆಕೆಗೆ ಚಿಕಿತ್ಸೆ ಕೂಡ ನಡೆಯುತ್ತಿದೆ. ಎದ್ದು ಮಾತನಾಡುವ ಪರಿಸ್ಥಿತಿಯಲ್ಲೂ ಇಲ್ಲದ ಮಹಿಳೆಯ ಪಾತ್ರದಲ್ಲಿ ಚಿತ್ಕಲಾ ನಟಿಸುತ್ತಿದ್ದಾರೆ. 
 

47

ಅಮೃತಧಾರೆಯ ಹೊಸ ಪ್ರೊಮೋ ನೋಡಿದ ಮೇಲೆ ಅಭಿಮಾನಿಗಳು ಮತ್ತೆ ತೆರೆ ಮೇಲೆ ಅಮ್ಮಮ್ಮನನ್ನು ನೋಡಿ ತುಂಬಾನೆ ಖುಷಿಯಾಗಿದ್ದಾರೆ. ಝೀ ಕನ್ನಡಕ್ಕೆ ಥ್ಯಾಂಕ್ಯೂ ಹೇಳಿದ್ದಾರೆ. ಅಲ್ಲದೇ ಇವರೇ ಗೌತಮ್ ದಿವಾನ್ ತಾಯಿಯಾಗಿರಬಹುದು ಎಂದು ಸಹ ಜನ ಹೇಳ್ತಿದ್ದಾರೆ. ಯಾಕಂದ್ರೆ ಸದ್ಯಕ್ಕಂತೂ ಗೌತಮ್ ಹೇಳಿದ್ದಾಗಿದೆ, ಅಮ್ಮ ಮತ್ತು ತಂಗಿಯ ಹುಡುಕಾಟದಲ್ಲಿದ್ದಾನೆ ಎಂದು ಹಾಗಿರೋವಾಗಲೇ ಹೊಸ ಪಾತ್ರದ ಎಂಟ್ರಿಯಾಗಿದ್ದು, ಇವರೇ ಗೌತಮ್ ತಾಯಿ ಮತ್ತು ತಂಗಿ ಎಂದು ಜನ ಗೆಸ್ ಮಾಡುತ್ತಿದ್ದಾರೆ. 
 

57

ಇನ್ನು ಚಿತ್ಕಲಾ ಬಿರಾದಾರ್ ಬಗ್ಗೆ ಹೇಳೊದಾದ್ರೆ ಇವರು ಬಂದೇ ಬರತಾವ ಕಾಲ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ರು, ನಂತ್ರ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ತಾಯಿಯಾಗಿ ಜನಪ್ರಿಯತೆ ಪಡೆದಿದ್ದರು. ಅದಾದ ನಂತರ ಆರತಿಗೊಬ್ಬ ಕೀರ್ತಿಗೊಬ್ಬ, ಮನಸಾರೆ, ಕನ್ನಡತಿ, ಬೃಂದಾವನ, ಅವನು ಮತ್ತು ಶ್ರಾವಣಿ ಧಾರಾವಾಹಿಗಳಲ್ಲೂ ನಟಿಸಿದ್ದರು. 
 

67

ಅಷ್ಟೇ ಅಲ್ಲ ಕನ್ನಡ ಸಿನಿಮಾಗಳಲ್ಲೂ ನಟಿಸಿರುವ ಇವರು ಧರ್ಮ ದೇವತೆ, ಮದುವೆ ಮನೆ, ಏನೆಂದು ಹೆಸರಿಡಲಿ, ಹಗಲು ಕನಸು, ಬಜಾರ್, ಯುವರತ್ನ, ನಿನ್ನ ಸನಿಹಕೆ, ಪ್ರೇಮಂ ಪೂಜ್ಯಂ, ವಿಕ್ರಾಂತ್ ರೋಣ, ಫ್ಯಾಂಟಮ್, ರಾಘವೇಂದ್ರ ಸ್ಟೋರ್ಸ್ ಮೊದಲಾದ ಸಿನಿಮಾಗಳಲ್ಲೂ ನಟಿಸಿದ್ದಾರೆ. 
 

77

ನಿಮಗೊಂದು ಇಂಟ್ರೆಸ್ಟಿಂಗ್ ವಿಷ್ಯ ಗೊತ್ತಾ? ನಟಿ ಚಿತ್ಕಲಾ ಬಿರಾದಾರ್ ಕೇವಲ ನಟಿ ಮಾತ್ರ ಅಲ್ಲ ಅವರು ಪ್ರೊಫೆಸರ್ ಕೂಡ ಹೌದು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಚಿತ್ಕಲಾ, ಜರ್ಮನಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ (English Proffessor ) ಕೆಲಸ ಕೂಡ ಮಾಡಿದ್ದರು. ಚಿತ್ಕಲಾ ಅವರ ಮಕ್ಕಳು ಕೂಡ ವಿದೇಶದಲ್ಲೇ ಸೆಟಲ್ ಆಗಿದ್ದಾರೆ. ಒಟ್ಟಲ್ಲಿ ನಟಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಅಭಿಮಾನಿಗಳ ದಿಲ್ ಖುಷ್ ಮಾಡಿದೆ. 
 

Read more Photos on
click me!

Recommended Stories